ಬಿಗ್ ಬಾಸ್ ಮನೆಯಿಂದ ರಘು ಔಟ್, ಇವರನ್ನು ಕರೆದುಕೊಂಡು ಬಂದಿದ್ದು ಯಾರು ಅಂತ ನೋಡಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಫಿನಾಲೆಯಲ್ಲಿ ಎರಡನೇಯಾದಗಿ ಔಟ್ ಆಗಿದ್ದು ರಘು. ಹೌದು ಎಲ್ಲರೂ ಟಾಪ್ ತ್ರಿ ನಲ್ಲದ್ರೂ ಇರ್ತಾರೆ ಎಂದುಕೊಂಡಿದ್ದ ಪ್ರಬಲ ಸ್ಪರ್ಧಿ ಔಟ್ ಆಗಿದ್ದಾರೆ. ಇವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದು ಯಾರು ಅಂತ ನೋಡಿ.
ವೈಲ್ಡ್ ಕಾರ್ಡ್ ಎಂಟ್ರಿ ರಘು
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದರು. ಅವರು ಪವರ್ ಲಿಫ್ಟಿಂಗ್‍ನಲ್ಲಿ ಸಾಧನೆ ಮಾಡಿರುವ ಕ್ರೀಡಾಪಟು ಮತ್ತು ರಾಜ್ಯ ಮಟ್ಟದ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವೆಲಿನ್ ಹಾಗೂ ಶಾಟ್‍ಪುಟ್‍ನಲ್ಲಿ ಚಾಂಪಿಯನ್ ಆಗಿದ್ದಾರೆ. ರಘು ಅವರು ಮನೆಯಲ್ಲಿ ತಮ್ಮ ಬಲವಾದ ವ್ಯಕ್ತಿತ್ವ ಮತ್ತು ಆಟದಿಂದ ಗಮನ ಸೆಳೆದಿದ್ದರು, ಆದರೆ ಫಿನಾಲೆಯಲ್ಲಿ ಐದನೇ ಸ್ಥಾನ ಪಡೆದು ಹೊರಬಂದರು.
ಮೊದಲ ಕ್ಯಾಪ್ಟನ್
ಇನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾದ್ರೂ ರಘು ಅವರು ತಮ್ಮ ಜಾಣತನದ ಆಟದಿಂದ ಮೊದಲ ಕ್ಯಾಪ್ಟನ್ ಆಗಿದ್ದರು. ಬಿಗ್ ಬಾಸ್ 12 ರ ಮೊದಲ ಕ್ಯಾಪ್ಟನ್ ಎಂದು ಫೇಮಸ್ ಆಗಿದ್ದರು.
ಮೊದಲ ಕಿಚ್ಚನ ಚಪ್ಪಾಳೆ
ಅಲ್ಲದೇ ರಘು ಅವರು ಕ್ಯಾಪ್ಟನ್ ಆಗಿದ್ದಾಗ ಮನೆಯನ್ನು ಚೆನ್ನಾಗಿ ನಿಭಾಯಿಸಿ ಕಿಚ್ಚನ ಚಪ್ಪಾಳೆ ತೆಗೆದುಕೊಂಡಿದ್ದರು. ಈ ಸೀಸನ್ ಮೊದಲ ಕಿಚ್ಚನ ಚಪ್ಪಾಳೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/dhanush-is-the-strongest-contestant-to-leave-the-bigg-boss-house/
ಶೃತಿ ಅವರು ಬಂದಿದ್ದರು
ಇನ್ನು ರಘು ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರಲು ಬಿಗ್ ಬಾಸ್ ಮೊದಲ ಮಹಿಳಾ ವಿನ್ನರ್ ಶೃತಿ ಅವರು ಬಂದಿದ್ದರು. ಮನೆಗೆ ಹೋಗಿ ರಘು ಅವರನ್ನು ಕರೆದುಕೊಂಡು ಬಂದಿದ್ದರು. ರಘು 4ನೇ ಸ್ಥಾನ ಪಡೆದುಕೊಂಡು 4ನೇ ಸ್ಥಾನ ಪಡೆದುಕೊಂಡ ಮನೆಯಿಂದ ಹೊರ ಬಂದಿದ್ದಾರೆ.



