ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಗಿಣಿ ದ್ವಿವೇದಿ

ಜೈಲಿನಿಂದ ಹೊರಬರುತ್ತಲೇ ನಟಿ ರಾಗಿಣಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟಿ ರಾಗಿಣಿ ಮತ್ತೆ ಬಣ್ಣ ಹಚ್ಚೋದಕ್ಕೆ ರೆಡಿಯಾಗಿದ್ದಾರೆ. ಕರ್ವ -3 ಕನ್ನಡ ಸಿನಿಮಾದಲ್ಲಿ ರಾಗಿನೀ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತನ್ನ ಮೇಲಿನ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ, ಜೈಲಿನಿಂದ ಹೊರಬರುತ್ತಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2021ರಲ್ಲಿ ತನ್ನ ಮೊದಲ ಚಿತ್ರದ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಸಿನಿಮಾ ಕರ್ವ-3. ತಿಲಕ್ ಹಾಗೂ ಮೇಘನಾ ಗಾಂವ್ಕರ್ ನಟನೆಯ ಸಿನಿಮಾದಲ್ಲಿ ರಾಗಿಣಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕರ್ವ ಸ್ಕ್ರಿಪ್ಟ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಕರ್ವ ಸ್ಕ್ರಿಫ್ಟ್ ತುಂಬಾನೆ ಚೆನ್ನಾಗಿದೆ. ನಾನು ಸಿನಿಮಾದಲ್ಲಿ ಸ್ಕ್ರೀಪ್ಟ್ ಬಗ್ಗೆ ತುಂಬಾನೆ ನಂಬಿಕೆಯನ್ನು ಇಟ್ಟುಕೊಂಡಿದ್ದೇನೆ. ನಾನು ನಿರ್ವಹಿಸುವ ಪಾತ್ರವೂ ಸೂಕ್ಷ್ಮವಾಗಿದ್ದು, ನೈಜತೆಯಿಂದ ಕೂಡಿದೆ. ಮನರೋಂಜನೆಯ ಜೊತೆಗೆ ಸವಾಲಿನ ಪಾತ್ರವೂ ನನ್ನದಾಗಿದೆ. ಸಿನಿಮಾಕ್ಕಾಗಿ ಈಗಾಗಲೇ ಸಿದ್ದತೆಗಳನ್ನು ಮಾಡಿಕೊಂಡಿದ್ದೇನೆ ಎಂದಿದ್ದಾರೆ ನಟಿ ರಾಗಿಣಿ.

ವಿಶಾಲ್ ಶೇಖರ್ ನಟೆಯ ಕರ್ವ -3 ಸಿನಿಮಾ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ರಾಗಿಣಿ ದ್ವಿವೇದಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಚಿತ್ರ ತಂಡ ಅಧಿಕೃತ ಮಾಹಿತಿಯನ್ನೇ ನೀಡಿದೆ. ಮಾರ್ಚ್ ವೇಳೆಗೆ ರಾಗಿಣಿ ದ್ವಿವೇದಿ ಶೂಟಿಂಗ್ ಸೆಟ್ ಸೇರಿಕೊಳ್ಳುವ ಸಾಧ್ಯತೆಯಿದೆ.

Comments are closed.