ನಮ್ಮ ಮೆಟ್ರೋ ನೇಮಕಾತಿ : 72 ಸಾವಿರ ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ನಮ್ಮ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಬಿಎಂಆರ್ ಸಿಎಲ್ ಮುಖ್ಯ ಎಂಜಿನಿಯರ್, ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್, ಜನರಲ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಪೂರ್ಣಾವಧಿಯ ಉದ್ಯೋಗಾವಕಾಶಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಫೆಬ್ರವರಿ 23ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮಾರ್ಚ್ 22ರ ಒಳಗಾಗಿ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವಿರ : ಮುಖ್ಯ ಎಂಜಿನಿಯರ್, ಮುಖ್ಯ ವಿದ್ಯುತ್ ಎಂಜಿನಿಯರ್, ಜನರಲ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್

ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಎಲೆಕ್ಟ್ರಿಕಲ್ ಮತ್ತು ಪವರ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ

ಅನುಭವ : ಸಂಬಂಧಪಟ್ಟ ಪ್ರದೇಶದಲ್ಲಿ 3-5 ವರ್ಷಗಳು

ಸಂಬಳ : ಹುದ್ದೆಯ ಪ್ರಕಾರ ತಿಂಗಳಿಗೆ 29,100 ರಿಂದ 73,000

ಹುದ್ದೆಗಳ ವಿವರ :
ಮುಖ್ಯ ಎಂಜಿನಿಯರ್ (ಎಸ್ & ಟಿ) – 1
ಮುಖ್ಯ ವಿದ್ಯುತ್ ಎಂಜಿನಿಯರ್ (ಇ & ಎಂ) – 1
ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ – ನಿರ್ವಹಣೆ) – 1
ಡೆಪ್ಯೂಟಿ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ – ನಿರ್ವಹಣೆ) – 1
ಡೈ ಜನರಲ್ ಮ್ಯಾನೇಜರ್ (ಎಸ್ & ಟಿ) – 1
ಡೈ ಜನರಲ್ ಮ್ಯಾನೇಜರ್ (ಎಸ್ & ಟಿ) – 1

ಅರ್ಜಿ ಸಲ್ಲಿಸುವುದು ಹೇಗೆ ?
ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ಅಧಿಸೂಚನೆ 2021 ರೊಂದಿಗೆ ಲಗತ್ತಿಸಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 2021 ರ ಮಾರ್ಚ್ 22 ರ ಮೊದಲು ‘ಜನರಲ್ ಮ್ಯಾನೇಜರ್ (ಎಚ್‌ಆರ್) ಕಾರ್ಪೊರೇಶನ್ ಲಿಮಿಟೆಡ್, 3 ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಶಾಂತಿ ನಗರ, ಕೆಹೆಚ್ ರಸ್ತೆ, ಬೆಂಗಳೂರು – 560027 ಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ BMRCL ನೇಮಕಾತಿ 2021 ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ : https://english.bmrc.co.in/FileUploads/1720bd_CareerFiles.pdf

Comments are closed.