Raj B Shetty – Siri Ravikumar : ವರ್ಷದ ಕೊನೆಯಲ್ಲಿ “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

ನಟ ರಾಜ್‌ ಬಿ ಶೆಟ್ಟಿ “ಒಂದು ಮೊಟ್ಟೆಯ ಕಥೆ” ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ (Raj B Shetty – Siri Ravikumar) ಕಾಲಿಟ್ಟರು. ಕಳೆದ ವರ್ಷ ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ಅಭಿನಯದ ಜೊತೆಯಲಿ ಉತ್ತಮ ನಿರ್ದೇಶಕ ಎನ್ನುವ ಹೆಗ್ಗಳಿಕೆಯನ್ನು ಪಡೆದರು. ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ದೊಡ್ಡ ಮಟ್ಟದ ಗೆಲುವು ಸಾಧಸಿದ್ದರು. ಈ ಬಿಗ್ ಹಿಟ್ ಬಳಿಕ ರಾಜ್ ಬಿ ಶೆಟ್ಟಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Mutthina Male Haniye) ಸಿನಿಮಾ ನಿರ್ದೇಶನ ಹಾಗೂ ಇದರಲ್ಲಿಯೂ ಸಹ ತಾವೇ ನಾಯಕನಾಗಿ ಕಾಣಸಿಕೊಳ್ಳುವುದಾಗಿ ಘೋಷಿಸಿದ್ದರು.

ಇನ್ನು ಮೊದಲಿಗೆ ಈ ಸಿನಿಮಾಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ನಿರ್ಮಾಪಕಿ ಹಾಗೂ ನಾಯಕಿ ಎಂದು ಸಹ ಘೋಷಣೆಯಾಗಿತ್ತು. ಹೌದು, ಆಪಲ್ ಬಾಕ್ಸ್ ಸ್ಟುಡಿಯೊಸ್ ಎಂಬ ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದ ನಟಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಬಣ್ಣ ಹಚ್ಚುವುದರ ಜತೆಗೆ ಬಂಡವಾಳವನ್ನೂ ಸಹ ಹಾಕಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ ಕೆಲ ದಿನಗಳ ಬಳಿಕ ಈ ಸಿನಿಮಾದಲ್ಲಿ ರಮ್ಯಾ ಕೇವಲ ನಿರ್ಮಾಪಕಿಯಾಗಿ ಕೆಲಸ ನಿರ್ವಹಿಸಲಿದ್ದು, ರಮ್ಯಾ ನಿರ್ವಹಿಸಬೇಕಿದ್ದ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.

ಈ ಸಿನಿಮಾದ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ ಪುನಃ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ಸಂತಸ ತಂದಿತು. ಆದರೆ ಈ ಸಿನಿಮಾಕ್ಕೆ ರಮ್ಯಾ ನಿರ್ಮಾಪಕಿಯಾಗಿ ಕನ್ನಡ ಸಿನಿರಂಗಕ್ಕೆ ಮರಳಿ ಆಗಮಿಸಿದ್ದಾರೆ.ಈ ಹೊಸ ಅಪ್‌ಡೇಟ್ ಹೊರಬಿದ್ದ ಕೂಡಲೇ ಚಿತ್ರೀಕರಣ ಆರಂಭಿಸಿದ್ದ ಸಿನಿತಂಡ ಕೇವಲ ಹದಿನಾರು ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿ ಕುಂಬಳಕಾಯಿ ಹೊಡೆದಿದೆ.

ಹೀಗೆ ವೇಗವಾಗಿ ಚಿತ್ರೀಕರಣ ಮುಗಿಸಿದ ಸಿನಿತಂಡ ಬಿಡುಗಡೆ ದಿನಾಂಕವನ್ನು ಇನ್ನೂ ಸಹ ಬಿಟ್ಟುಕೊಟ್ಟಿಲ್ಲ. ಇದರ ನಡುವೆ ನಟಿ ರವಿ ಸಿರಿಕುಮಾರ್ ಸಿನಿಮಾದಲ್ಲಿ ಪ್ರೇರಣ ಎಂಬ ಪಾತ್ರ ನಿರ್ವಹಿಸಲಿದ್ದು, ನಟ ರಾಜ್ ಬಿ ಶೆಟ್ಟಿ ಅನಿಕೇತ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ನಾಯಕ – ನಾಯಕಿಯ ಪ್ರತ್ಯೇಕ ಫಸ್ಟ್ ಲುಕ್ ಪೋಸ್ಟರ್‌ನ್ನು ಸಿನಿತಂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Pak Movie in India: ದಶಕಗಳ ಬಳಿಕ ಭಾರತದಲ್ಲಿ ರಿಲೀಸ್ ಆಗ್ತಿದೆ ಪಾಕಿಸ್ತಾನದ ಸೂಪರ್ ಹಿಟ್ ಸಿನಿಮಾ; ಹೊಸ ಸಾಹಸಕ್ಕೆ ಮುಂದಾದ ಐನಾಕ್ಸ್..!

ಇದನ್ನೂ ಓದಿ : Tininga Mininga Tishya Song : ‘ಸಲಗ’ ಸಿನಿಮಾದ ಗಾಯಕಿ ಗೀತಾ ಸಿದ್ಧಿಗೆ ಒಲಿದ ಡಾಕ್ಟರೇಟ್ ಪ್ರಶಸ್ತಿ

ಇದನ್ನೂ ಓದಿ : Indian movie industry : 2022 ವರ್ಷದ ಕೊನೆಯ ಶುಕ್ರವಾರ ರಿಲೀಸ್‌ ಆಗುವ ವಿವಿಧ ಇಂಡಸ್ಟ್ರಿಯ ಸಿನಿಮಾ ಯಾವುವು ಗೊತ್ತಾ ?

ಈ ಬಾರಿ ನಾಯಕ ಹಾಗೂ ನಾಯಕಿ ಜೊತೆಯಲಿ ಇರುವಗ ಫಸ್ಟ್ ಲುಕ್‌ನ್ನು ಸಿನಿತಂಡ ಹಂಚಿಕೊಂಡಿದೆ. ಈ ಪೋಸ್ಟರ್‌ನ್ನು ಸಿನಿಮಾದ ನಿರ್ಮಾಪಕಿ ರಮ್ಯಾ ಹಾಗೂ ಸಿನಿತಂಡದ ಇತರೆ ಸದಸ್ಯರು ಹಂಚಿಕೊಂಡಿದ್ದಾರೆ. ಪೋಸ್ಟರ್‌ಗಳು ಹಾಗೂ ಟೈಟಲ್ ಸಿನಿಮಾದ ಲವ್ ಸ್ಟೋರಿ ಏನು ಎನ್ನುವುದನ್ನು ಹೇಳುತ್ತಿದ್ದು, ರಾಜ್ ಬಿ ಶೆಟ್ಟಿ ಸಿನಿಮಾದ ಒಳಗೆ ಯಾವ ರೀತಿಯ ಕಥಾಹಂದರ ಇಟ್ಟಿರುತ್ತಾರೆ ಎಂಬುದು ಬಿಡುಗಡೆಯಾದ ನಂತರವಷ್ಟೇ ತಿಳಿಯಬೇಕಿದೆ. ಸ್ಯಾಂಡಲ್‌ವುಡ್‌ಗೆ ಹೊಸಕಥೆಯನ್ನು ಪರಿಚಯಿಸುವುದರಲ್ಲಿ ರಾಜ್‌ ಬಿ ಶೆಟ್ಟಿ ಎತ್ತಿದ ಕೈ, ಇನ್ನೂ ಈ ಸಿನಿಮಾದಲ್ಲಿ ಯಾವ ಹೊಸ ಕಥೆಯನ್ನು ಅಡಗಿಸಿ ಇಟ್ಟಿದ್ದಾರೆ ಎಂದು ಕಾದು ನೋಡಬೇಕಿದೆ.

Raj B Shetty – Siri Ravikumar : At the end of the year, the first look of the movie “Swati Muthina Mer Haniye” will be released

Comments are closed.