Fire accident in Mou: ಉತ್ತರ ಪ್ರದೇಶದಲ್ಲಿ ಗುಡಿಸಲಿಗೆ ಬೆಂಕಿ: ತಾಯಿ ಜೊತೆ ನಾಲ್ಕು ಮಕ್ಕಳು ಸಜೀವ ದಹನ

ಉತ್ತರ ಪ್ರದೇಶ: (Fire accident in Mou) ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿ ತಾಯಿ ಹಾಗೂ ಆಕೆಯ ನಾಲ್ಕು ಮಂದಿ ಮಕ್ಕಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೌ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಾಹಿತಿಗಳ ಪ್ರಕಾರ ಒಲೆಯಿಂದ ಬೆಂಕಿ ಕಿಡಿ ಹಾರಿದ್ದು, ಇದರಿಂದಾಗಿ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಮೃತ ಮಹಿಳೆಯನ್ನು ಗುಡ್ಡಿ ದೇವಿ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಾಮಶಂಕರ್‌ ಬೇರೆಡೆ ಕೆಲಸಕ್ಕೆ ಹೋಗಿದ್ದಾಗ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೌ ಜಿಲ್ಲೆಯ ಕೊಪಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ (Fire accident in Mou) ನಡೆದಿದ್ದು, ಗುಡಿಸಲಿನಲ್ಲಿದ್ದ ತಾಯಿ ಹಾಗೂ ಮಕ್ಕಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಉಪ ಪೊಲೀಸ್‌ ಮಹಾನಿರೀಕ್ಷಕ ಅಖಿಲೇಶ್‌ ಕುಮಾರ್‌, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅರುಣ್‌ ಕುಮಾರ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಅವಿನಾಶ್‌ ಪಾಂಡೆ ಅವರು ಧಾವಿಸಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾಗೇ ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂ ಪರಿಹಾರವನ್ನು ಕೂಡ ಘೋಷಿಸಿದ್ದಾರೆ.

ಮೃತ ಮಹಿಳೆಯನ್ನು ಗುಡ್ಡಿ ದೇವಿ ಎಂದು ಗುರುತಿಸಲಾಗಿದ್ದು, ಮಹಿಳೆ ತನ್ನ ಮಕ್ಕಳೊಂದಿಗೆ ಗುಡಿಸಲಿನಲ್ಲಿದ್ದಾಗ ಅಡುಗೆ ಒಲೆಯಲ್ಲಿದ್ದ ಬೆಂಕಿ ಕಿಡಿ ಹಾರಿ ಗುಡಿಸಲಿಗೆ ತಗುಲಿದ್ದು, ಇದರಿಂದಾಗಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣ ಮಾತ್ರದಲ್ಲೇ ಬೆಂಕಿ ಪೂರ್ತಿಯಾಗಿ ಗುಡಿಸಲಿಗೆ ಆವರಿಸಿಕೊಂಡಿದ್ದು, ಪತಿಯನ್ನು ಹೊರತುಪಡಿಸಿ ತಾಯಿ ಹಾಗೂ ಮಕ್ಕಳು ಬೆಂಕಿಯಲ್ಲಿ ಬೆಂದು ಸಜೀವ ದಹನವಾಗಿದ್ದಾರೆ. ಗುಡ್ಡಿದೇವಿಯ ಪತಿ ರಾಮಶಂಕರ್‌ ಬೇರೆಡೆ ಕೆಲಸಕ್ಕೆ ಹೋಗಿದ್ದ ಕಾರಣ ಈ ಅವಘಡದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : Murder case solved: ಹಣದ ವಿಚಾರದಲ್ಲಿ ವಂಚಿಸಿದ್ದ ಯುವಕ ಬರ್ಬರವಾಗಿ ಕೊಲೆಯಾದ; 9 ತಿಂಗಳ ಬಳಿಕ ಪ್ರಕರಣ ಬಯಲಾಗಿದ್ದು ಹೇಗೆ ಗೊತ್ತಾ..?

(Fire accident in Mou) A mother and her four children died when a hut caught fire accidentally on Tuesday night in Mau, Uttar Pradesh. According to reports, a fire broke out from the stove, which gutted the hut.

Comments are closed.