Raj Cup Season 6 : ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಡಾ.ರಾಜ್ ಕಪ್ ಸೀಸನ್ 6 ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪಂದ್ಯಾವಳಿ ಗಾಗಿ ಕನ್ನಡ ಸಿನಿರಂಗ ತಾರೆಯರು ಸಿದ್ದತೆ ನಡೆಸಿದ್ದಾರೆ. ಈ ಬಾರಿ ಪುನೀತ್ ರಾಜ್ ಕುಮಾರ್ (Puneeth Raj kumar) ಸ್ಮರಣಾರ್ಥ ರಾಜ್ ಕಪ್ (Raj Cup 2023) ಆಯೋಜನೆ ಮಾಡಲಾಗಿದ್ದು, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Raj kumar) ರಾಜ್ ಕಪ್ ಜರ್ಸಿ ಬಿಡುಗಡೆ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ನೆನಪಲ್ಲಿ ನಡೆಯು ಡಾ.ರಾಜ್ ಕಪ್ ಸೀಸನ್ – 6 ಇದೇ ನವೆಂಬರ್ 28 ರಿಂದ ಆರಂಭ ಗೊಳ್ಳಲಿದ್ದು, ಡಿಸೆಂಬರ್ 10ರ ವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ವಿಶ್ವದ ಹಲವು ದೇಶಗಳಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಮತ್ತೊಂದು ವಿಶೇಷ. ಡಾ.ರಾಜ್ ಕಪ್ ನವೆಂಬರ್ 28 ಮತ್ತು 29ರಂದು ಶ್ರೀಲಂಕಾದಲ್ಲಿ ನಡೆಯಲಿದೆ.

ಡಿಸೆಂಬರ್ 1 ಮತ್ತು 2ರಂದು ಮಲೇಷಿಯಾ, ಡಿಸೆಂಬರ್ 3 ಮತ್ತು 4ರಂದು ಸಿಂಗಾಪುರದಲ್ಲಿ ಹಾಗೂ ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್ ನಲ್ಲಿ ಲೀಗ್ ಮ್ಯಾಚ್ ನಡೆಯಲಿವೆ. ಲೀಗ್ ಹಂತದ ಪಂದ್ಯಗಳು ವಿದೇಶಗಳಲ್ಲಿ ನಡೆಯುತ್ತಿದ್ದರೂ ಕೂಡ ರಾಜ್‌ಕಪ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಲಿದೆ ಎಂದು ಪಂದ್ಯಾವಳಿ ಆಯೋಜಕರಾದ ರಾಜೇಶ್ ಬ್ರಹ್ಮಾವರ ತಿಳಿಸಿದ್ದಾರೆ.
ಇದನ್ನೂ ಓದಿ : ಅಬ್ಬಬ್ಬಾ… ಬಿಗ್ಬಾಸ್ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡ ಸ್ಪರ್ಧಿ
ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ಜರ್ಸಿ ಬಿಡುಗಡೆ ಸಮಾರಂಭ ನಡೆದಿದ್ದು, ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪಂದ್ಯಾವಳಿಗೆ ಶುಭ ಹಾರೈಸಿ ಜೆರ್ಸಿ ಬಿಡುಗಡೆ ಮಾಡಿರುವುದು ಮತ್ತೊಂದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಬ್ರಹ್ಮಾವರ ಅವರು, ವಿದೇಶದಲ್ಲಿ ಪಂದ್ಯಾವಳಿ ಆಯೋಜನೆ ಮಾಡ್ತಾ ಇರೋದು ನನಗೆ ಕಷ್ಟವಾಗುತ್ತಿಲ್ಲ ಎಂದಿದ್ದಾರೆ.
ತಂಡಗಳ ಮಾಲೀಕರು ಅವರ ತಂಡಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ. ಚಿನ್ನದಂತಹ ಆಟಗಾರರು ಹಾಗೂ ತಂಡದ ಮಾಲೀಕರು ಸಿಕ್ಕಿದ್ದಾರೆ. ಯಾರ ಸಮಸ್ಯೆಯೂ ಇಲ್ಲ. ಎಲ್ಲವೂ ಅಚ್ಚುಕಚ್ಚಾಗಿ ನಡೆಯುತ್ತಿದೆ. ಮುಂದಿನ ವರ್ಷ ಎಷ್ಟು ದೇಶದಲ್ಲಿ ಪಂದ್ಯಾವಳಿ ಆಯೋಜನೆ ಮಾಡುತ್ತೇನೋ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್
ದುಬೈನಲ್ಲಿ ಆಯೋಜನೆಗೆ ಅವಕಾಶ ಸಿಗಲ್ಲ ಎಂದು ಕೊಂಡಿದ್ದರು. ಆದರೆ ಅಲ್ಲಿಯೂ ಲೈವ್ ಪರ್ಮಿಷನ್ ಪಡೆಯಲಾಗಿದೆ ಎಂದಿದ್ದಾರೆ. ಡಾ.ರಾಜ್ ಕಪ್ ಪಂದ್ಯಾವಳಿಯು ಆನಂದ್ ಆಡೀಯೋ ಸ್ಪೋರ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಪಂದ್ಯಾವಳಿಯು ನೇರಪ್ರಸಾರವಾಗಲಿದೆ. ಈ ವಾಹಿನಿ ಮೂಲಕ ಪಂದ್ಯಾವಳಿಯನ್ನು ವೀಕ್ಷಿಸಬಹುದಾಗಿದೆ.

ಡಾ.ರಾಜ್ ಕಪ್ – 6 : 12 ತಂಡ ಹಾಗೂ ತಂಡದ ಮಾಲೀಕರು
ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ನಡೆಯಲಿರುವ ಡಾ.ರಾಜ್ ಕಪ್ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 27 ಪಂದ್ಯಗಳನ್ನು ನಡೆಸಲು ಸಿದ್ದತೆ ನಡೆಸಲಾಗಿದೆ. ಬಹುತೇಕ ಪಂದ್ಯಗಳು ವಿದೇಶದಲ್ಲಿಯೇ ನಡೆಯಲಿದೆ. ಹಾಗಾದ್ರೆ ಡಾ.ರಾಜ್ ಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಯಾವುವು ಎಂದು ನೋಡೋದಾದ್ರೆ.
ಸಮೃದ್ದಿ ಫೈಟರ್ಸ್ ತಂಡ (ಮಾಲೀಕರು- ಮಂಜುನಾಥ್)
DX ಮ್ಯಾಕ್ಸ್ ಲೈನ್ಸ್ ತಂಡ (ಮಾಲೀಕರು- ದಯಾನಂದ್)
ರಾಮನಗರ ರಾಕರ್ಸ್ ತಂಡ (ಮಾಲೀಕರು- ಮಹೇಶ್ ಗೌಡ)
ELV ಲಯನ್ ಕಿಂಗ್ಸ್ ತಂಡ (ಮಾಲೀಕರು- ಪುರುಷೋತ್ತಮ್ ಭಾಸ್ಕರ್)
AVR ಟಸ್ಕರ್ಸ್ ತಂಡ (ಮಾಲೀಕರು-ಅರವಿಂದ್ ರೆಡ್ಡಿ)
KKR ಕಿಂಗ್ಸ್ ತಂಡ (ಮಾಲೀಕರು-ಲಕ್ಷ್ಮೀ ಕಾಂತ್ ರೆಡ್ಡಿ)
Rabit ರೇಸರ್ಸ್ ತಂಡ (ಮಾಲೀಕರು- ಅರು ಗೌಡ)
ಮಯೂರ ರಾಯಲ್ಸ್ ತಂಡ (ಮಾಲೀಕರು- ಸೆಂಥಿಲ್)
ರಾಯಲ್ ಕಿಂಗ್ಸ್ ತಂಡ (ಮಾಲೀಕರು-ಶ್ರೀರಾಮ್ ಮತ್ತು ಮುಖೇಶ್)
ಕ್ರಿಕೆಟ್ ನಕ್ಷತ್ರ ತಂಡ (ಮಾಲೀಕರು- ನಕ್ಷತ್ರ ಮಂಜು)
ಅಶು ಸೂರ್ಯ ಸೂಪರ್ ಸ್ಟಾರ್ ತಂಡ (ಮಾಲೀಕರು- ರಂಜಿತ್ ಪಯಾಜ್ ಖಾನ್)
ರುಚಿರಾ ರೇಂಜರ್ಸ್ ತಂಡ (ಮಾಲೀಕರು- ರಾಮ್)
ಇದನ್ನೂ ಓದಿ : ನೆನಪಿನ ಆಳದಲ್ಲಿ ಎರಡು ವರ್ಷ : ಬಾವುಕವಾಗಿ ಅಪ್ಪು ನೆನೆದ ಅಶ್ವಿನಿ ಪುನೀತ್ ರಾಜ್ ಕುಮಾರ್
ಸ್ಯಾಂಡಲ್‌ವುಡ್ ನಟರಾದ ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ, ವಶಿಷ್ಠ ಸಿಂಹ, ಪ್ರಜ್ವಲ್ ದೇವರಾಜ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ಸೇರಿದಂತೆ ಹಲವು ನಟ, ನಟಿಯರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
dr Raj Cup season 6 Puneeth Raj Kumar wife Ashwini Puneeth Rajkumar released Raj cup 2023 jersey