ದಿನಭವಿಷ್ಯ 26 ನವೆಂಬರ್‌ 2023 : ಶಿವಯೋಗದಿಂದ ಈ ರಾಶಿಯವರಿಗೆ ಬಾರೀ ಅದೃಷ್ಟ

Horoscope Today : ದಿನಭವಿಷ್ಯ 26 ನವೆಂಬರ್‌ 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಭರಣಿ ನಕ್ಷತ್ರದ ಪ್ರಭಾವ ಇರುತ್ತದೆ. ಶಿವಯೋಗದ ಜೊತೆಗೆ ಫರಿದಾ ಯೋಗದಿಂದ ವೃಷಭರಾಶಿ ಮತ್ತು ಮೀನ ರಾಶಿಯವರಿಗೆ ಬಾರೀ ಅದೃಷ್ಟ ಬರಲಿದೆ.

Horoscope Today : ದಿನಭವಿಷ್ಯ 26 ನವೆಂಬರ್‌ 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಭರಣಿ ನಕ್ಷತ್ರದ ಪ್ರಭಾವ ಇರುತ್ತದೆ. ಶಿವಯೋಗದ ಜೊತೆಗೆ ಫರಿದಾ ಯೋಗದಿಂದ ವೃಷಭರಾಶಿ ಮತ್ತು ಮೀನ ರಾಶಿಯವರಿಗೆ ಬಾರೀ ಅದೃಷ್ಟ ಬರಲಿದೆ. ಆದರೆ ಕೆಲವು ರಾಶಿಯವರು ನಕಾರಾತ್ಮಕ ಫಲಿತಾಂಶ ಪಡೆಯುವ ಸಾಧ್ಯತೆಯಿದೆ. ಮೇಷ ರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12  ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಶತ್ರುಗಳ ವಿಚಾರದಲ್ಲಿ ನೀವು ಜಾಗರೂಕರಾಗಿ ಇರಬೇಕು. ಸಂಬಂಧಿಕರ ಕಡೆಯಿಂದ ನೀವು ಆರ್ಥಿಕ ಸಹಕಾರವನ್ನು ಪಡೆಯಲಿದ್ದೀರಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವ್ಯವಹಾರ ಕ್ಷೇತ್ರದಲ್ಲಿ ವಿಶೇಷ ಲಾಭವನ್ನು ಪಡೆಯುವ ಸಾಧ್ಯತೆಯಿದೆ.

ವೃಷಭರಾಶಿ ದಿನಭವಿಷ್ಯ
ಯಾವುದೇ ವ್ಯವಹಾರ ಆರಂಭಿಸುವ ಮೊದಲು ಹಿರಿಯರ ಸಲಹೆಯನ್ನು ಪಡೆಯಿರಿ. ಹೆತ್ತವರ ಜೊತೆಗೆ ಯಾವುದೇ ಕಾರಣಕ್ಕೂ ವಾದವನ್ನು ಮಾಡಬೇಡಿ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ತೀರಾಮುಖ್ಯ. ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಯಿದೆ.

ಮಿಥುನರಾಶಿ ದಿನಭವಿಷ್ಯ
ದೈಹಿಕ ಸಮಸ್ಯೆಗಳು ಕಂಡು ಬಂದ್ರೆ ಕೂಡಲೇ ವೈದ್ಯರ ಸಲಹೆಯನ್ನು ಪಾಲಿಸಿ. ಇಲ್ಲವಾದ್ರೆ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆಯಿದೆ. ಹಣವನ್ನು ಖರ್ಚು ಮಾಡುವಾಗ ಹಲವು ಬಾರಿ ಯೋಚಿಸಿ. ಭವಿಷ್ಯದಲ್ಲಿ ಲಾಭ ಪಡೆಯುವ ಹಲವು ದಾರಿಗಳು ಗೋಚರಿಸಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಹಿರಿಯರ ಆಸ್ತಿಗೆ ಸಂಬಂಧಿಸಿದ ಪ್ರಕರಣಗಳು ಬಾಕಿ ಇದ್ದರೆ ಅದು ಯಶಸ್ವಿಯಾಗಿ ನಿಮ್ಮ ಕೈ ಸೇರಲಿದೆ. ನಿಮ್ಮ ಸಂಪತ್ತನ್ನು ಹೆಚ್ಚಿಸುವ ಹೊಸ ಮಾರ್ಗಗಳು ಗೋಚರವಾಗುತ್ತದೆ. ಹಲವು ಸಮಯಗಳಿಂದ ಬಾಕಿ ಉಳಿದಿರುವ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ.

ಸಿಂಹರಾಶಿ ದಿನಭವಿಷ್ಯ
ಉದ್ಯೋಗಿಗಳು ಇಂದು ಉತ್ತಮ ಪ್ರಗತಿ ಸಾಧಿಸುತ್ತಾರೆ. ಸಹೋದ್ಯೋಗಿಗಳಿಗೆ ಇದು ಅಸೂಯೆಯನ್ನು ಉಂಟು ಮಾಡುತ್ತದೆ. ಮನಸ್ಸಿನಲ್ಲಿ ನಕರಾತ್ಮಕ ಆಲೋಚನೆಯನ್ನು ತಪ್ಪಿಸಿ. ತಂದೆಯ ಸಹಾಯದಿಂದ ಆಸ್ತಿ, ವಾಹನ ಖರೀದಿ ಸಾಧ್ಯತೆಯಿದೆ. ಸಿಹಿ ಮಾತಿನಿಂದ ಹೃದಯ ಗೆಲ್ಲುವಿರಿ.

Horoscope Today 26 November 2023 Zodiac sign Shiva yoga
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಸಮಸ್ಯೆ ಉಂಟಾಗಲಿದೆ. ಯಾವುದೇ ಕಾರಣಕ್ಕೂ ಜಗಳಗಳು ನಡೆಯದಂತೆ ಎಚ್ಚರಿಕೆಯನ್ನು ವಹಿಸಿ. ದೂರದ ಬಂಧುಗಳ ಆಗಮನದಿಂದ ಮನಸಿಗೆ ಸಂತಸ.

ಇದನ್ನೂ ಓದಿ : IPL 2024 : ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ದ್ರಾವಿಡ್‌ ಮೆಂಟರ್‌ ? ಐಪಿಎಲ್‌ನತ್ತ ಟೀಂ ಇಂಡಿಯಾ ಕೋಚ್‌ ಚಿತ್ತ

ತುಲಾರಾಶಿ ದಿನಭವಿಷ್ಯ
ಆಸ್ತಿ ವಿವಾದಗಳಲ್ಲಿ ನಿಮಗೆ ಗೆಲುವು ದೊರೆಯಲಿದೆ. ಆಪ್ತ ಸ್ನೇಹಿತರ ಸಲಹೆಯ ಮೇರೆಗೆ ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕಾರ್ಯವೊಂದು ಪೂರ್ಣಗೊಳ್ಳಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆವಹಿಸಿ. ನಿಮ್ಮ ಸಿಹಿ ಮಾತು ಸಂಗಾತಿಗೆ ಸಂತೋಷ ತರಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ವ್ಯವಹಾರದಲ್ಲಿ ಬದಲಾವಣೆಯನ್ನು ಮಾಡುವುದರಿಂದ ಅನುಕೂಲ. ಕುಟುಂಬದ ವ್ಯವಹಾರಕ್ಕಾಗಿ ತಜ್ಞ ವೈದ್ಯರ ಸಲಹೆಯನ್ನು ಪಡೆಯಿರಿ. ಕುಟುಂಬದಲ್ಲಿ ಯಾವುದೇ ಜಗಳವನ್ನು ಮಾಡಬೇಡಿ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಇದನ್ನೂ ಓದಿ: ಹೊಸ ಸ್ಮಾರ್ಟ್​ ವಾಚ್​ನ ಹುಡುಕಾಟದಲ್ಲಿದ್ದೀರೇ..? ಅಮೆಜಾನ್​ನಲ್ಲಿದೆ ಬಿಗ್ಗೆಸ್ಟ್​ ಆಫರ್​

ಧನಸ್ಸುರಾಶಿ ದಿನಭವಿಷ್ಯ
ಹೊಸ ಯೋಜನೆಗಳಿಂದ ಅಧಿಕ ಲಾಭ ದೊರೆಯಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಬಲ ವೃದ್ದಿಸಲಿದೆ. ನಿಮ್ಮ ವ್ಯವಹಾರದಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಹಣವನ್ನು ನೀವು ಪಡೆಯುವಿರಿ. ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ. ಆದಾಯ ಅಧಿಕವಾಗಲಿದೆ.

ಮಕರರಾಶಿ ದಿನಭವಿಷ್ಯ
ಹೊಸ ಯೋಜನೆಗಳು ಇಂದು ನಿಮಗೆ ಕೈಗೂಡಲಿದೆ. ಮಕ್ಕಳ ಜೊತೆಗೆ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸುವಿರಿ. ದೂರ ಪ್ರಯಾಣವು ನಿಮಗೆ ಲಾಭವನ್ನು ತಂದುಕೊಡಲಿದೆ. ಮದುವೆಗೆ ಸಂಬಂಧಿಸಿದ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ನೀವು ಕೇಳುವಿರಿ.

ಇದನ್ನೂ ಓದಿ : ರಾಜ್ ಕಪ್- 6 ಜರ್ಸಿ ಬಿಡುಗಡೆಗೊಳಿಸಿದ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌

ಕುಂಭರಾಶಿ ದಿನಭವಿಷ್ಯ
ನಿಮ್ಮ ಕನಸುಗಳು ಇಂದು ಕೈಗೂಡಲಿದೆ. ಕುಟುಂಬ ಸದಸ್ಯರ ಸಹಕಾರದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮಗಾಗಿ ಇಂದು ಹಣವನ್ನು ಖರ್ಚು ಮಾಡುವಿರಿ. ಯಾವುದೇ ಟೀಕೆಯನ್ನು ನೀವು ನಿರ್ಲಕ್ಷಿಸಬೇಡಿ.

ಮೀನರಾಶಿ ದಿನಭವಿಷ್ಯ
ಸ್ನೇಹಿತರ ಸಹಾಯದಿಂದ ಪ್ರಗತಿಯನ್ನು ಸಾಧಿಸುವಿರಿ. ಕುಟುಂಬ ಜೀವನದಲ್ಲಿ ಕೆಲವು ಶುಭ ಕಾರ್ಯಗಳನ್ನು ಮಾಡುವಿರಿ. ವ್ಯಾಪಾರಿಗಳು ಇಂದು ಅಧಿಕ ಲಾಭವನ್ನು ಪಡೆಯಲಿದ್ದಾರೆ. ಮೋಜು ಮಸ್ತಿಗಾಗಿ ಹಣವನ್ನು ಹೂಡಿಕೆ ಮಾಡುವಿರಿ. ದೂರದ ಬಂಧುಗಳ ಆಗಮನದಿಂದ ಮನಸಿಗೆ ಸಂತಸ.

Horoscope Today 26 November 2023 Zodiac sign Shiva yoga

Comments are closed.