Priyanka Chopra’s Diwali Celebration :ಪುತ್ರಿಯ ಜೊತೆಯಲ್ಲಿ ದೀಪಾವಳಿ ಹಬ್ಬವನ್ನಾಚರಿಸಿ ಫೋಟೋ ಹಂಚಿಕೊಂಡ ಪ್ರಿಯಾಂಕ ಚೋಪ್ರಾ

Priyanka Chopra’s Diwali Celebration  : ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 83 ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಹೊಂದಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದ ಬಹುತೇಕ ಅಪ್​ಡೇಟ್ಸ್​ಗಳನ್ನು ಇನ್​ಸ್ಟಾ ಖಾತೆಯಲ್ಲಿ ಶೇರ್​ ಮಾಡುತ್ತಲೇ ಇರ್ತಾರೆ. ವಿದೇಶದಲ್ಲಿದ್ದರೂ ಸಹ ಪ್ರಿಯಾಂಕಾ ಚೋಪ್ರಾ ತಮ್ಮ ಭಾರತೀಯತೆಯನ್ನು ಬಿಟ್ಟುಕೊಟ್ಟಿಲ್ಲ ಎಂಬುದು ಅವರ ಬಹುತೇಕ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕವೇ ತಿಳಿಯುತ್ತೆ. ಈ ಮಾತಿಗೆ ಮತ್ತೊಂದು ಉದಾಹರಣೆ ಎಂಬಂತೆ ಪ್ರಿಯಾಂಕಾ ಚೋಪ್ರಾ ಇದೀಗ ದೀಪಾವಳಿಯನ್ನು ತಾವು ಆಚರಿಸಿರುವ ಫೋಟೋಗಳನ್ನು ಶೇರ್​ ಮಾಡಿದ್ದಾರೆ.


ಪತಿ ನಿಕ್​ ಜೋನಾಸ್​, ತಾಯಿ ಮಧು ಚೋಪ್ರಾ ಹಾಗೂ ಪುತ್ರಿ ಮಾಲತಿ ಮೇರಿ ಚೋಪ್ರಾ ಜೋನಸ್​​ ಜೊತೆಯಲ್ಲಿ ಈ ಬಾರಿ ನಟಿ ಪ್ರಿಯಾಂಕಾ ಚೋಪ್ರಾ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಹಬ್ಬದ ದಿನದಂದು ಕ್ಲಿಕ್ಕಿಸಿದ ಕೆಲವು ಸುಂದರ ಕ್ಷಣಗಳ ಫೋಟೋವನ್ನು ಪ್ರಿಯಾಂಕಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಇರುವ ತಿನಿಸುಗಳನ್ನು ನೀವು ಒಮ್ಮೆ ಗಮನಿಸಿದರೆ ಸಾಕು ಪ್ರಿಯಾಂಕಾ ಚೋಪ್ರಾ ದೇಸಿ ಮೀಲ್ಸ್​ನ್ನು ಎಷ್ಟು ಇಷ್ಟ ಪಡ್ತಾರೆ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕಾಗೋದಿಲ್ಲ.


ಪ್ರಿಯಾಂಕಾ ಚೋಪ್ರಾ ಶೇರ್​ ಮಾಡಿರುವ ಫೋಟೋಗಳನ್ನು ದೋಕ್ಲಾ, ಬೋಂಡಾ ಸೇರಿದಂತೆ ಸಾಕಷ್ಟು ತಿನಿಸುಗಳನ್ನು ಕಾಣಬಹುದಾಗಿದೆ. ಮತ್ತೊಂದು ಫೊಟೋದಲ್ಲಿ ದೀಪಾವಳಿ ಹಬ್ಬಕ್ಕೆಂದು ನಿಕ್​ ಹಾಗೂ ಪ್ರಿಯಾಂಕಾ ತಮ್ಮ ಮಗುವಿನ ಜೊತೆಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದನ್ನು ಕಾಣಬಹುದಾಗಿದೆ. ಈ ಎಲ್ಲಾ ಫೋಟೋಗಳಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲತಿ ಮೇರಿ ಜೊತೆಯಲ್ಲಿ ಕಾಣಿಸಿಕೊಂಡರೂ ಸಹ ಮಗುವಿನ ಮುಖದ ಮೇಲೆ ಬಿಳಿ ಬಣ್ಣದ ಹಾರ್ಟ್​ ಇಮೋಜಿಯನ್ನು ಹಾಕುವ ಮೂಲಕ ಪುತ್ರಿಯ ಮುಖವನ್ನು ಮುಚ್ಚಿದ್ದಾರೆ. ಈ ಮೂಲಕ ಪ್ರಿಯಾಂಕಾ ಚೋಪ್ರಾ ಮಗು ಹೇಗಿರಬಹುದು ಎಂಬ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇದನ್ನು ಓದಿ : India Offered Bad Sandwich : ಸಿಡ್ನಿಯಲ್ಲಿ ಭಾರತ ತಂಡಕ್ಕೆ “ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್” ನೀಡಿದ ವಿಶ್ವಕಪ್ ಆಯೋಜಕರು, ಐಸಿಸಿಗೆ ದೂರಿತ್ತ ಟೀಮ್ ಇಂಡಿಯಾ

ಇದನ್ನೂ ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್

Priyanka Chopra’s Diwali Celebration In The US Featured Food, Family And Fashion

Comments are closed.