Rakhi Sawant : ಮಾಜಿ ಪತಿ ರಿತೇಶ್​​ ನನಗೆ ತೊಂದರೆ ಕೊಡುತ್ತಿದ್ದಾನೆಂದು ಗಳಗಳನೇ ಅತ್ತ ರಾಖಿ ಸಾವಂತ್​

ಮಹಾರಾಷ್ಟ್ರ :Rakhi Sawant : ರಾಖಿ ಸಾವಂತ್​​​ ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಹೊಸ ಬಾಯ್​ಫ್ರೆಂಡ್​ ಆದಿಲ್​ ಖಾನ್​​ ಜೊತೆಯಲ್ಲಿ ಎಲ್ಲೆಡೆ ಸುತ್ತುತ್ತಿರುವ ರಾಖಿ ಸಾವಂತ್​ ತಮ್ಮ ಮಾಜಿ ಪತಿ ಮಾಡಿದ ಕೆಲಸವೊಂದನ್ನು ನೆನೆದು ಮಾಧ್ಯಮಗಳ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ತಮ್ಮ ಮಾಜಿ ಪತಿ ನನ್ನೆಲ್ಲ ಸೋಶಿಯಲ್​ ಮೀಡಿಯಾ ಖಾತೆಗಳನ್ನು ಹ್ಯಾಕ್​ ಮಾಡಿದ್ದಾನೆ ಎಂದು ಆರೋಪಿಸಿ ನಟಿ ರಾಖಿ ಸಾವಂತ್​ ಗಳ ಗಳನೇ ಅತ್ತಿದ್ದಾರೆ.


ತನ್ನ ಮಾಜಿ ಪತಿಯಿಂದ ಉಂಟಾದ ಸಂಕಷ್ಟದ ಬಗ್ಗೆ ವಿವರಿಸುತ್ತಾ ಹೋದಂತೆ ರಾಖಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಜಿ ಪತಿ ರಿತೇಶ್​ ನನ್ನೆಲ್ಲ ಸೋಶಿಯಲ್​ ಮೀಡಿಯಾ ಖಾತೆಗಳು ಹಾಗೂ ಆನ್​ಲೈನ್​ ಪಾವತಿಯ ಎಲ್ಲಾ ವೇದಿಕೆಗಳನ್ನು ಹ್ಯಾಕ್​ ಮಾಡಿದ್ದಾನೆ. ಈ ಸಂಬಂಧ ನಾನು ರಿತೇಶ್​ ವಿರುದ್ಧ ಮುಂಬೈನ ಓಶಿವಾರಾ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾಗಿ ಹೇಳಿದ್ದಾರೆ . ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ್ದ ರಾಖಿ ಸಾವಂತ್​ ತನ್ನ ಮಾಜಿ ಪತಿ ರಿತೇಶ್​ ನನ್ನ ಹೊಸ ಗೆಳೆಯ ಆದಿಲ್​ ಖಾನ್​ ಬಗ್ಗೆ ಅಸೂಯೆ ಹೊಂದಿದ್ದಾನೆ. ಹೀಗಾಗಿ ಆತ ಸೇಡು ತೀರಿಸಿಕೊಳ್ಳಲು ಬಯಸುತ್ತಾನೆ ಎಂದು ಹೇಳಿದ್ದಾರೆ.


ಪಪ್ಪರಾಜಿಗಳ ಜೊತೆ ಮಾತನಾಡಿದ ರಾಖಿ ಸಾವಂತ್​ ಆತ ನನ್ನ ಫೇಸ್​ಬುಕ್​ ಪಾಸ್​ವರ್ಡ್​ಗಳನ್ನು ಸಹ ಬದಲಾಯಿಸಿದ್ದಾನೆ. ಇನ್​ಸ್ಟಾಗ್ರಾಂ ಖಾತೆಯ ಪಾಸ್​ವರ್ಡ್​ನ್ನೂ ಸಹ ಬದಲಾಯಿಸಿದ್ದಾನೆ ಎಂದು ಹೇಳಿಕೊಂಡು ಗಳಗಳನೇ ಅತ್ತಿದ್ದಾರೆ. ನಿಮ್ಮ ಖಾತೆಗಳೆಲ್ಲವೂ ನಿಮಗೆ ಸಿಗಲಿದೆ ಎಂದು ಪಪ್ಪರಾಜಿಗಳು ರಾಖಿ ಸಾವಂತ್​ರನ್ನು ಸಮಾಧಾನಗೊಳಿಸಿದರು. ಇದಕ್ಕೆ ಉತ್ತರಸಿದ ರಾಖಿ,ಆತ ಇದನ್ನೆಲ್ಲ ಏಕೆ ಮಾಡುತ್ತಿದ್ದಾನೆ ಎಂಬುದೇ ನನಗೆ ಅರ್ಥವಾಗ್ತಿಲ್ಲ. ನನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಏನೆನೋ ಬರೆಯುತ್ತಾನೆ. ನಿಮಗೆ ಇದೆಲ್ಲ ಅರ್ಥವಾಗುತ್ತಿದೆಯಾ..? ಎಂದು ಹೇಳಿಕೊಂಡು ಅಳುವುದರ ಜೊತೆಯಲ್ಲಿ ಗೆಳೆಯ ಆದಿಲ್​ ಖಾನ್​ರನ್ನು ಸಮಾಧಾನಪಡಿಸಿದ್ದನ್ನು ಕಾಣಬಹುದಾಗಿದೆ.

ಇದನ್ನು ಓದಿ : Jinal Joshi Photoshoot : ಹಾಟ್ ಹಾಟ್ ಪೋಟೋಸ್ ನಲ್ಲೇ ಮಿಂಚೋ ಬೆಡಗಿ ಜಿನಾಲ್ ಜೋಶಿ

ಇದನ್ನೂ ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್

Rakhi Sawant breaks down as ex-husband Ritesh hacks her social media accounts, files complaint

Comments are closed.