Opinion Vegetable Price : ತರಕಾರಿ ಬೆಲೆ ರೈತರಿಗೇ ಸಿಗಲಿ; ನಮ್ಮೂರಿನ ರೈತರಿಂದ ನೇರವಾಗಿ ಖರೀದಿಸುವ ಜಾಯಮಾನ ಬೆಳೆಸಿಕೊಳ್ಳೋಣ

ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಳೆ ನಾಶವಾಗಿ ಬೆಲೆ ಗಗನಕ್ಕೇರಿತ್ತು. ಕಳೆದ ಒಂದು ವಾರದಿಂದ ಕೊಂಚ ಮಟ್ಟಿಗೆ ತಗ್ಗಿದ್ದ ತರಕಾರಿ ಬೆಲೆ ( Opinion Vegetable Price) ಇದೀಗ ಮತ್ತೆ ಈ ಏರಿಕೆ ಕಂಡಿದೆ. ಒಂದೆಡೆ ಬೆಳೆ ಹಾನಿಯಿಂದ ರೈತ (Fಅರಮೆರಸ) ಹೀನಾಯ ಸ್ಥಿತಿಯಲ್ಲಿದ್ದರೆ, ಇನ್ನೊಂದೆಡೆ ಗ್ರಾಹಕರು ದಿನೇ ದಿನೇ ಜಾಸ್ತಿ ಆಗುತ್ತಿರುವ ತರಕಾರಿ ಬೆಲೆಗೆ ಕಂಗೆಟ್ಟಿದ್ದಾರೆ.
ಹಳ್ಳಿಯಲ್ಲಾದರೆ ಮನೆ ಸುತ್ತ ಮುತ್ತ ತರಕಾರಿ ಬೆಳೆಯಲು ಅವಕಾಶ ಇದೆ. ಇಲ್ಲವೇ ತರಹೇವಾರಿ ಸೊಪ್ಪು, ಬಾಳೆ ಇತ್ಯಾದಿಗಳನ್ನು ಬಳಸಿ ಪೇಟೆಯಿಂದ ತರಕಾರಿ ತರುವುದನ್ನು ತಪ್ಪಿಸಬಹುದು. ಆದರೆ, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ತರಕಾರಿ ಇಲ್ಲದೆ ಒಂದು ದಿನವೂ ಮುಂದೂಡುವುದು ಕಷ್ಟ. ಮನೆ ಮುಂದೆ ತರಕಾರಿ ಬೆಳೆಸುವುದಂತೂ ದೂರದ ಮಾತು.

ಮೊದಲು ತಮಿಳುನಾಡು ಹಾಗೂ ಕೇರಳದಿಂದ ತರಕಾರಿ ಬರುತ್ತಿತ್ತು. ಈ ಬಾರಿ ಅಲ್ಲಿಯೂ ನೆರೆ ಉಂಟಾಗಿ,ಆಮದು ಮಾಡುವುದೂ ನಿಂತಿದೆ.ತರಕಾರಿಗಳಲ್ಲಿ ಅತೀ ಹೆಚ್ಚು ಬಳಸಲ್ಪಡುವ ಟೊಮೆಟೊ ಬೆಲೆ ಶತಕದ ಸನಿಹವಿದ್ದು, ಗ್ರಾಹಕರು ದೂರದಿಂದಲೇ ನೋಡಿ ಖುಷಿ ಪಡಬೇಕಾದ ಅವಸ್ಥೆ ಎದುರಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಬೆಲೆ ಏರಿಳಿತ ಕಂಡಿದ್ದು, ಇನ್ನೂ ಎರಡ್ಮುರು ತಿಂಗಳು ಬೆಲೆ ಹೀಗೆ ಇರಬಹುದು ಎನ್ನುತ್ತಾರೆ.

ಒಮ್ಮೆ ಸಂಪೂರ್ಣವಾಗಿ ನಾಶವಾದ ಬೆಳೆಯನ್ನು, ತೆಗೆದು ಮತ್ತೆ ಹೊಸ ಇಳುವರಿ ಪಡೆಯಲು ಕನಿಷ್ಠ ಎರಡು ಮೂರು ತಿಂಗಳ ಅವಧಿ ಬೇಕೇ ಬೇಕು. ಅದುವರೆಗೆ ಜನರು ಇದೇ ಬೆಲೆಗೆ ಖರೀದಿಸುವುದು ಅನಿವಾರ್ಯ ಆಗಿದೆ. ಆದರೆ ಬಹುತೇಕ ವರದಿಗಳ ಪ್ರಕಾರ, ತರಕಾರಿ ಬೆಲೆ ಏರಿಕೆಯಾದರೂ ರೈತರಿಗೆ ಇದರ ಅರ್ಧ ಪಾಲು ದುಡ್ಡೂ ಸಿಗುತ್ತಿಲ್ಲ. ಅವರಿಂದ ಕಡಿಮೆ ಬೆಲೆಗೆ ಖರೀದಿಸಿ, ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಗ್ರಾಹಕ ಹಾಗೂ ರೈತರ ನಡುವೆ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದಾರೆ.

ಇದಕ್ಕೆ ನಾವು ಗ್ರಾಹಕರು, ಸಾಧ್ಯವಾದಷ್ಟು ರೈತರಿಂದ ನೇರವಾಗಿ ಖರೀದಿ ಮಾಡಿಬೇಕು. ಹೀಗೆ ಮಾಡಿದರೆ, ಕೊಂಚ ಮಟ್ಟಿಗಾದರೂ ರೈತರಿಗೆ ನೆಮ್ಮದಿ ಸಿಗಬಹುದು. ಈಮುನ್ನ ಪೆಪ್ಸಿ, ಕೊಕೊಕೋಲಾ ಕುಡಿಯುವದಕ್ಕಿಂತ ಎಳನೀರು ಕುಡಿಯಿರಿ ರೈತರ ಹಿತ ಕಾಪಾಡಿ ಎಂದು ಹೇಗೆ ಅಭಿಯಾನ ನಡೆದಿತ್ತೋ ಅದೇ ರೀತಿ ನಮ್ಮ ನಮ್ಮ ಊರುಗಳಲ್ಲಿ ನೇರವಾಗಿ ರೈತರಿಂದಲೇ ಖರೀದಿಸುವ ಜಾಯಮಾನ ಬೆಳೆಯಬೇಕಿದೆ.

-ತೇಜಸ್ವಿನಿ ಭಾರದ್ವಾಜ್

ಇದನ್ನೂ ಓದಿ: Opinion Left Right And Central : ನೀವು ಯಾವ ಪಂಥೀಯರು?

ಇದನ್ನೂ ಓದಿ : Opinion on Plastic Ban : ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ; ಇಂತಹ ಕ್ರಮಗಳು ಇಂದಿನ ಅಗತ್ಯ

ಇದನ್ನೂ ಓದಿ : Karnataka Digital Media Forum : ಮಾಧ್ಯಮ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆ, ಅಸ್ಥಿತ್ವಕ್ಕೆ ಬಂತು ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ

(Opinion Vegetable Price hike we buy directly from farmers)

Comments are closed.