Ramya Come Back : 10 ವರ್ಷಗಳ ಬಳಿಕ ಡಾಲಿಗೆ ಜೊತೆಯಾಗಿದ್ದೇಕೆ ರಮ್ಯ ! ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

ರಾಜಕೀಯ ಇರಲಿ, ಸಿನಿಮಾ ಇರಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯ (Ramya Come Back)ನಡೆ ಅತ್ಯಂತ ನಾಜೂಕು. ಇದಕ್ಕೆ ಅವರ ರಾಜಕೀಯ ನಡೆಗಳೇ ಸಾಕ್ಷಿಯಾಗಿವೆ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದ ರಮ್ಯ ಸೂಕ್ಷ್ಮ ಸ್ಥಿತಿಯಲ್ಲಿ ಚುನಾವಣೆ ಕಣಕ್ಕಿಳಿದು ಗೆದ್ದು ಎಂಪಿಯಾದರು. ಆದರೆ ಇನ್ನೇನು ಪೊಲಿಟಿಕಲ್ ಕೆರಿಯರ್ ಮುಗಿತು ಅಂದುಕೊಳ್ಳುವಾಗಲೇ ರಾಜಕೀಯದಿಂದಲೇ ದೂರ ಸರಿದು ಮತ್ತೆ ಸಿನಿರಂಗಕ್ಕೆ ಹತ್ತಿರವಾದರು. ಅಷ್ಟೇ ಅಲ್ಲ ಈಗಲೂ ಗೆಲ್ಲುವ ಕುದುರೆಗೆ ಜೊತೆಯಾಗೋ ಮೂಲಕ ರಮ್ಯ ಕಮ್ ಬ್ಯಾಕ್ ಹೆಜ್ಜೆಯನ್ನು ಹುಶಾರಾಗಿಡುವ ಪ್ರಯತ್ನ ಮಾಡಿದ್ದಾರೆ.

ರಮ್ಯ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕ್ವೀನ್ ನಂತೆ ಮೆರೆದವರು. ಆದರೆ ಈಗ ಕಾಲ ಬದಲಾಗಿದೆ. ಹೀಗಾಗಿ ಚಂದನವನದಲ್ಲಿ ರಮ್ಯರನ್ನು ಮೀರಿಸುವಂತ ನಟಿಮಣಿಯರು ಬಂದು ಹೋಗಿದ್ದಾರೆ. ಆದರೆ ನಟಿ ರಮ್ಯರಿಗೆ ಈಗಲೂ ಮೊದಲಿನಂತೆ ಬೇಡಿಕೆ ಇದೆ ಅನ್ನೋದು ಸುಳ್ಳಲ್ಲ. ಇದೇ ಕಾರಣಕ್ಕೆ 6-7 ವರ್ಷಗಳ ಬ್ರೇಕ್ ಬಳಿಕ ರಮ್ಯ ಮತ್ತೆ ಬಣ್ಣ ಹಚ್ಚೋ ಮನಸ್ಸು ಮಾಡಿದ್ದಾರೆ.

ಹೀಗೆ ಮತ್ತೆ ಬಣ್ಣ ಹಚ್ಚೋ ಮನಸ್ಸು ಮಾಡಿದ ರಮ್ಯ ಮೊದಲು ಸಿನಿಮಾ ನಿರ್ಮಾಣ ಮಾಡೋ ಮಾತನ್ನಾಡಿದರು. ಬಳಿಕ ಸ್ವತಃ ತಮ್ಮದೇ ನಿರ್ಮಾಣದ ಸಿನಿಮಾವಾದ ಮುತ್ತಿ‌ನ ಮಳೆ ಹನಿಯೇ ಮೂಲಕ ತೆರೆಗೆ ಬರೋದಾಗಿ ಘೋಷಿಸಿದರು.ಕೊನೆಗೆ ರಮ್ಯ ಮತ್ತೆ ತಮ್ಮ ಲೆಕ್ಕಾಚಾರ ಬದಲಾಯಿಸಿದ್ದಾರೆ. ಮೊದಲ ಸಿನಿಮಾ ಸೋತರೇ ರಮ್ಯ ಸೆಕೆಂಡ್ ಇನ್ನಿಂಗ್ಸ್ ಹಾದಿ ಆರಂಭದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ.

ಯಾಕೆಂದರೇ ಈಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಪರಿಭಾಷೆ ಬದಲಾಗಿದೆ. ಹೀಗಾಗಿ‌ ಮೊದಲ ಸಿನಿಮಾದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ‌. ಈ ಕಾರಣಕ್ಕೆ ರಮ್ಯ ತಮ್ಮ ಸ್ವಂತ ಬ್ಯಾನರ್ ಸಿನಿಮಾವನ್ನು ಬಿಟ್ಟು ಡಾಲಿ ಧನಂಜಯ್ ಗೆ ಉತ್ತರಾಕಂಡದಲ್ಲಿ ಜೊತೆಯಾಗಲು ಜೈ ಎಂದಿದ್ದಾರಂತೆ‌. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ಹುಡುಗ ಡಾಲಿ ಧನಂಜಯ್ . ಬಡವ ರಾಸ್ಕಲ್‌ನಿಂದ ಆರಂಭಿಸಿ ಹೆಡ್ ಬುಷ್ ತನಕ ಎಲ್ಲ ಸಿನಿಮಾವೂ ಗೆದ್ದಿದೆ. ವಿವಾದಗಳಿಂದರಾದರೂ ಸರಿ ಡಾಲಿ ಧನಂಜಯ್ ಬಗ್ಗೆ ಪ್ರೇಕ್ಷಕರ ಕುತೂಹಲ ಹೆಚ್ಚಿದ್ದು ಮುಂದಿನ ಸಿನಿಮಾ ಯಾವುದು, ಹೇಗಿದೆ ಎಂಬ ಚರ್ಚೆ ಜೋರಾಗಿದೆ.

ಇದನ್ನೂ ಓದಿ : Ramya Dhananjay | ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ ರಮ್ಯ: ಡಾಲಿ ಉತ್ತರಕಾಂಡಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಹೀರೋಯಿನ್

ಇದನ್ನೂ ಓದಿ : Gandhadagudi : ಅಪ್ಪು ಅಭಿಮಾನಿಗಳಿಗೆ ಭರ್ಜರಿ ಆಫರ್ : ನಾಲ್ಕು ದಿನಗಳ ಕಾಲ ಗಂಧದಗುಡಿ ಟಿಕೇಟ್ ದರ ಕಡಿತ

ಇದನ್ನೂ ಓದಿ : ಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

ಹೀಗಾಗಿ ರಮ್ಯ ತಮ್ಮ ಕಮ್ ಬ್ಯಾಕ್ ಗಾಗಿ ಡಾಲಿ ಧನಂಜಯ್ ಸಿನಿಮಾ ಆಯ್ದುಕೊಂಡಿದ್ದಾರೆ ಎಂಬ ಚರ್ಚೆ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ. ಇದಕ್ಕೆ ಪೂರಕವಾಗಿ ಉತ್ತರಕಾಂಡದಲ್ಲಿ ರಮ್ಯ ಮಹತ್ವದ ಪಾತ್ರದಲ್ಲಿ ಮಿಂಚೋ ಮುನ್ಸೂಚನೆ ನೀಡಿದ್ದಾರೆ ಡಾಲಿ.

Ramya Come Back Why is Ramya with Dolly after 10 years! Here are the exclusive details

Comments are closed.