Tumakuru Death: ಚಿಕಿತ್ಸೆ ಸಿಗದೇ ಗರ್ಭಿಣಿ, ಅವಳಿ ಮಕ್ಕಳ ಸಾವಿನಿಂದ ಎಚ್ಚೆತ್ತ ಸರ್ಕಾರ: ಚಿಕಿತ್ಸೆ ನಿರಾಕರಿಸಿದರೆ ಕ್ರಿಮಿನಲ್ ಕೇಸ್

ತುಮಕೂರು: Tumakuru Death: ನವೆಂಬರ್ 3ರಂದು ತುಮಕೂರಿನಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಅವಳಿ ಮಕ್ಕಳ ಜೊತೆ ತಾಯಿಯು ಸಾವನ್ನಪ್ಪಿರುವ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ವೈದ್ಯಾಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸುವುದರ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಸರ್ಕಾರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.

ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸುವಂತಿಲ್ಲ. ತುರ್ತು ಸಮಯದಲ್ಲಿ ಯಾವ ರೋಗಿಗೂ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ಇಂಥ ಘಟನೆಗಳು ಮರುಕಳಿಸಿದರೆ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Department of Education : ಮೌಲ್ಯಮಾಪನಕ್ಕೆ ತೆರಳೋ ಉಪನ್ಯಾಸಕರೇ ಎಚ್ಚರ: ಕೊಂಚ ಯಾಮಾರಿದ್ರೂ ಹೋಗುತ್ತೆ ಕೆಲಸ

ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಏನಿದೆ..?

  • ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ದಾಖಲೆಗಳಿಲ್ಲದಿದ್ದರೂ ಚಿಕಿತ್ಸೆ ನೀಡಬೇಕು.
  • ರೋಗಿಯ ಬಳಿ ತಾಯಿ ಕಾರ್ಡ್, ಪಡಿತರ ಚೀಟಿ, ಆಧಾರ್ ಕಾರ್ಡ್ ಮೊದಲಾದ ದಾಖಲೆಗಳಿಲ್ಲದಿದ್ದರೂ ತುರ್ತು ಚಿಕಿತ್ಸೆ ನಿರಾಕರಿಸುವಂತಿಲ್ಲ.
  • ಆರೋಗ್ಯ ಸೇವೆ ನೀಡುವಾಗ ರೋಗಿಯ ರಾಷ್ಟ್ರೀಯತೆ, ಧರ್ಮ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಪರಿಗಣಿಸುವಂತಿಲ್ಲ.
  • ತುರ್ತುಚಿಕಿತ್ಸೆಯಂಥ ಸಂದರ್ಭದಲ್ಲಿ ವೈದ್ಯರು, ಶುಶ್ರೂಶಕರು, ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಸಹಕರಿಸಬೇಕು.

ನವೆಂಬರ್ 3ರಂದು ನಡೆದಿದ್ದ ಘಟನೆ ಏನು..?
ತುಂಬು ಗರ್ಭಿಣಿ ಕಸ್ತೂರಿ ಎಂಬುವವರು ತುರ್ತು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ತೆರಳಿದ್ದಾಗ ತಾಯಿ ಕಾರ್ಡ್ ಹೊಂದಿಲ್ಲ ಎಂಬ ವಿಚಾರಕ್ಕೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದರು. ಈ ಹಿನ್ನೆಲೆ ಭಾರತಿನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಸ್ವಂತ ಮನೆಯಲ್ಲೇ ಕಸ್ತೂರಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ತಾಯಿ, ಅವಳಿ ಮಕ್ಕಳು ಮೃತಪಟ್ಟಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿತ ವೈದ್ಯರು ಸೇರಿದಂತೆ ನಾಲ್ವರನ್ನು ಸರ್ಕಾರ ಕರ್ತವ್ಯದಿಂದ ಅಮಾನತು ಮಾಡಿತ್ತು.

ಇದನ್ನೂ ಓದಿ: Ramya Come Back : 10 ವರ್ಷಗಳ ಬಳಿಕ ಡಾಲಿಗೆ ಜೊತೆಯಾಗಿದ್ದೇಕೆ ರಮ್ಯ ! ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

ಈ ಕುರಿತು ಸಭೆ ನಡೆಸಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಯಾವುದೇ ರೋಗಿಗೂ ತುರ್ತು ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಮೌಖಿಕ ಆದೇಶ ನೀಡಿದ್ದರು. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಅಧಿಕೃತವಾಗಿ ಸುತ್ತೋಲೆಯನ್ನು ಹೊರಡಿಸಿದ್ದಾರೆ.

Tumakuru Death: karnataka government circular regarding tumakuru pregnant and twin babies death

Comments are closed.