Department of Education : ಮೌಲ್ಯಮಾಪನಕ್ಕೆ ತೆರಳೋ ಉಪನ್ಯಾಸಕರೇ ಎಚ್ಚರ: ಕೊಂಚ ಯಾಮಾರಿದ್ರೂ ಹೋಗುತ್ತೆ ಕೆಲಸ

ಬೆಂಗಳೂರು : ಸೆಕೆಂಡ್ ಪಿಯುಸಿ ಅನ್ನೋದು ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವದ ಘಟ್ಟ. (Department of Education)ದ್ವಿತೀಯಪಿಯುಸಿಯಲ್ಲಿ ಪಡೆಯೋ ಅಂಕಗಳೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುತ್ತೆ. ಆದರೆ ಕೆಲವೊಮ್ಮೆ ಕೆಲ ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರ(Evaluation) ತಪ್ಪುಗಳಿಂದ ಕಡಿಮೆ ಅಂಕ ಸಿಕ್ಕಿದ್ದು, ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಕಮರಿ ಹೋದ ಉದಾಹರಣೆಗಳಿತ್ತು. ಆದರೆ ಈಗ ಈ ಅವಾಂತರಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಉಪನ್ಯಾಸಕರ ಮೇಲೆ ಅಮಾನತ್ತು ಅಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆ.

ರಾಜ್ಯದಲ್ಲಿ ಪಿಯು ಮೌಲ್ಯಮಾಪನದ (Evaluation)ವೇಳೆ ಉಪನ್ಯಾಸಕರು ಪ್ರತಿ ವರ್ಷ ಮುಷ್ಕರಕ್ಕೆ ಮುಂದಾಗೋದು ಕಾಮನ್. ಅದರ ಜೊತೆಗೆ ಮೌಲ್ಯ ಮಾಪನದಲ್ಲೂ ಏನಾದ್ರು ಒಂದು ಎಡವಟ್ಟು ಮಾಡೋದು ಕಾಮನ್ ಆಗಿತ್ತು. ಇಂಥ ಉಪನ್ಯಾಸಕರಿಗೆ ಬುದ್ಧಿ ಕಲಿಸಲು ಈಗ ಶಿಕ್ಷಣ ಇಲಾಖೆ ಸಿದ್ಧವಾಗಿದೆ. 2022-2023 ಸಾಲಿನಿಂದ ಶಿಕ್ಷಣ ಇಲಾಖೆ ಮೌಲ್ಯಮಾಪನ ದಲ್ಲಿ ಭಾಗಿಯಾಗುವ ಉಪನ್ಯಾಸಕರಿಗೆ ತಮ್ಮ ತಪ್ಪುಗಳಿಗೆ ಕೆಲಸ ಕಳೆದುಕೊಳ್ಳುವ ಭಯ ಕಾಡಲಿದೆ. ಹೌದು ಮೌಲ್ಯಮಾಪನದಲ್ಲಿ ಎಡವಟ್ಟು ಮಾಡಿದ್ರೆ ಅಂತಹ ಉಪನ್ಯಾಸಕರನ್ನು ಕೆಲಸದಿಂದಲೇ ವಜಾ ಮಾಡುವ ಎಚ್ಚರಿಕೆ ನೀಡಿದೆ ಶಿಕ್ಷಣ ಇಲಾಖೆ.

ಇದುವರೆಗೂ ರಾಜ್ಯದಲ್ಲಿ ಉಪನ್ಯಾಸಕರ(Evaluation) ಮೌಲ್ಯಮಾಪನದಲ್ಲಿ ತಪ್ಪಾದ್ರೆ ,ದಂಡ ಬೀಳ್ತಾ ಇತ್ತು. ಆದರೆ ಇನ್ಮುಂದೆ ದಂಡದ ಜೊತೆ ಅಮಾನತು ಶಿಕ್ಷೆ ನೀಡಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ. ಈ ವರ್ಷದಿಂದ ಅಮಾನತು ಶಿಕ್ಷೆ ಜಾರಿಯಾಗಿದೆ. ಈಗಾಗಲೇ 2021-2022 ರಲ್ಲಿ ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿದ ಎಂಟು ಉಪನ್ಯಾಸಕರಿಗೆ ಇಲಾಖೆ ಗೇಟ್ ಪಾಸ್ ನೀಡಿದೆ.ಇಂಗ್ಲಿಷ್ ಹಾಗೂ ಭೌತಶಾಸ್ತ್ರ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಉಪನ್ಯಾಸಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ ಮುಂಬರುವ ವರ್ಷದಲ್ಲಿ ಮೌಲ್ಯಮಾಪನದಲ್ಲಿ ಭಾಗಿಯಾಗುವ ಶಿಕ್ಷಕರಿಗೆ ಆ ಮೂಲಕ ಪರೋಕ್ಷ ಎಚ್ಚರಿಕೆ ರವಾನಿಸಿದೆ.

ಇದನ್ನೂ ಓದಿ : B. C. Nagesh : ಶಾಲೆಗಳ ಹತ್ತು ನಿಮಿಷ ಧ್ಯಾನ : ಖ್ಯಾತ ಮನೋವೈದ್ಯ ಡಾ ಪಿ.ವಿ ಭಂಡಾರಿ ಆಕ್ಷೇಪ

ಇದನ್ನೂ ಓದಿ : Teachers Singapore Tour Offers : 100% ಫಲಿತಾಂಶ ಕೊಟ್ರೆ, ಸಿಂಗಾಪುರ ಟೂರ್ : ಶಿಕ್ಷಕರಿಗೆ ಬಿಗ್ ಆಫರ್

ಇದನ್ನೂ ಓದಿ : SSLC Exam Revised Demand: ಎಸ್ಎಸ್ಎಲ್‌ ಸಿ ಪರೀಕ್ಷೆ ವೇಳಾಪಟ್ಟಿ ಮರು ಪರಿಷ್ಕರಿಸಿ : ಪ್ರೌಢಶಾಲಾ ಶಿಕ್ಷಕರ ಬೇಡಿಕೆ

ಕಳೆದ ಒಂದು ತಿಂಗಳ ಹಿಂದೆ SSLC ಹಾಗೂ PUC ಪರೀಕ್ಷೆಗಳ ಪೂರ್ವ ತಯಾರಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮೌಲ್ಯಮಾಪನದಲ್ಲಿ ತಪ್ಪೆಸೆಗಿದ ಉಪನ್ಯಾಸಕರ ಮೇಲೆ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಇದು 2022-2023 ಸಾಲಿನ ಪರೀಕ್ಷೆ ಮೌಲ್ಯಮಾಪನಕ್ಕೂ ಅನ್ವಯವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.ಪ್ರತಿ ವರ್ಷ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ಬಳಿಕ ಕನಿಷ್ಠ 100 ಕ್ಕಿಂತಲೂ ಹೆಚ್ಚು ಮೌಲ್ಯ ಮಾಪನ ದೋಷದ ಪ್ರಕರಣಗಳು ವರದಿಯಾಗುತ್ತಿದ್ದವು. ಹೀಗಾಗಿ ಶಿಕ್ಷಣ ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

Department of Education :Go to assessment Lecturers beware: a little bit of work goes a long way

Comments are closed.