777 Charlie : ರಕ್ಷಿತ್ ಮೆಚ್ಚಿದ ರಮ್ಯಾ : ಚಾರ್ಲಿ ನೋಡಿದ ಸ್ಯಾಂಡಲ್‌ವುಡ್‌ ಕ್ವೀನ್ ಹೇಳಿದ್ದೇನು‌

ಸ್ಯಾಂಡಲ್ ವುಡ್ ನ ಸುಂದರಿ, ಮಾಜಿ ಸಂಸದೆ ರಮ್ಯ ಶ್ವಾನ ಪ್ರಿಯೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಒಂದಿಷ್ಟು ಕಾಲ ಬೆಂಗಳೂರಿನಿಂದಲೂ ದೂರವಿದ್ದ ರಮ್ಯ ಬೀದಿನಾಯಿಯೊಂದರ ಅಂತ್ಯಕ್ರಿಯೆಗಾಗಿ ಬೆಂಗಳೂರಿಗೆ ಬರೋ ಮೂಲಕ ತಮ್ಮ ಶ್ವಾನಪ್ರೇಮವನ್ನು ಸಾಬಿತು ಪಡಿಸಿದ್ದರು. ಈಗ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ 777 ಚಾರ್ಲಿ (777 Charlie ) ಸಿನಿಮಾದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕೋ ಮೂಲಕ ತಮ್ಮ ನಾಯಿ ಪ್ರೀತಿಯನ್ನು ಸಾಬೀತು ಮಾಡಿದ್ದಾರೆ.

ಬಿಡುಗಡೆಗೆ ಸಿದ್ಧವಾಗಿರೋ 777 ಚಾರ್ಲಿ ಸಿನಿಮಾದ ಸೆಲೆಬ್ರೆಟಿ ಶೋವನ್ನು ಏರ್ಪಡಿಸಲಾಗಿತ್ತು. ಈ ಶೋದಲ್ಲಿ 777ಚಾರ್ಲಿ ಸಿನಿಮಾ ನೋಡಿದ ರಮ್ಯ ಭಾವುಕರಾಗಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲಿ ರಮ್ಯ ಮುಕ್ತವಾಗಿ ಚಾರ್ಲಿ ಸಿನಿಮಾದ ಬಗ್ಗೆ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ.

777 ಚಾರ್ಲಿ ಒಂದು ಭಾವನಾತ್ಮಕ ಸಿನಿಮಾ. ಮನುಷ್ಯರು ಪ್ರೀತಿ ಮತ್ತು ಬದುಕಿನ ನಡುವಿನ ಪ್ರಾಮುಖ್ಯತೆಯನ್ನು ಈ ಸಿನಿಮಾ ತಿಳಿಸಿಕೊಡುತ್ತದೆ. ಕಣ್ಣೀರು ತರಿಸುವ ಇಂತಹ ಬೆಚ್ಚನೆಯ ಸಿನಿಮಾವನ್ನು ನೀಡಿದ್ದಕ್ಕೆ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರಿಗೆ ಧನ್ಯವಾದಗಳು ಎಂದು ರಮ್ಯಾ ಬರೆದುಕೊಂಡಿದ್ದಾರೆ. ಸ್ವತಃ ರಮ್ಯ ಕೂಡ ಶ್ವಾನ ಪ್ರಿಯೆಯಾಗಿದ್ದು ಅವರ ಮನೆಯಲ್ಲೂ ಎರಡೆರಡು ನಾಯಿಗಳಿವೆ. ಆಗಾಗ ನಟಿ ರಮ್ಯ ಅವರ ಜೊತೆ ಆಟವಾಡುವ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹೀಗಾಗಿ ಸಹಜವಾಗಿಯೇ ರಮ್ಯಾಗೆ 777 ಚಾರ್ಲಿ ಸಿನಿಮಾ ರಮ್ಯ ಮನಸೊರೆಗೊಂಡಿದೆ.

ಇನ್ನೂ ರಮ್ಯ ಅವರ ದೊಡ್ಡ ಫ್ಯಾನ್ ನಾನು ಎಂದು ನಿರ್ದೇಶಕ ಹಾಗೂ ನಟ ರಕ್ಷಿತ್ ಶೆಟ್ಟಿ ಸದಾ ಕಾಲ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ರಮ್ಯ ಭಾವನಾತ್ಮಕ ಪೋಸ್ಟ್ ಸಹಜವಾಗಿಯೇ ರಕ್ಷಿತ್ ಶೆಟ್ಟಿ ಖುಷಿಗೆ ಕಾರಣವಾಗಿದೆ. ಇನ್ನೊಂದೆಡೆ ರಮ್ಯ ಸದ್ಯದಲ್ಲೇ ನಟನೆಗೆ ಮರಳುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ರಮ್ಯ ಕೂಡ ಒಳ್ಳೆಯ ಕತೆ ಸಿಕ್ಕಿದರೇ ನಟಿಸಲು ಸಿದ್ಧ ಎಂದಿದ್ದರು.

ಈ ಮಧ್ಯೆ ರಕ್ಷಿತ್ ಮತ್ತು ರಮ್ಯ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಗ್ರಹವೂ ಅಭಿಮಾನಿಗಳಿಂದ ವ್ಯಕ್ತವಾಗಿದೆ. ಸಿನಿಮಾ ರಂಗದಲ್ಲಿ ಯಾವುದು ಅಸಾಧ್ಯವಲ್ಲ ಹೀಗಾಗಿ ಸದಾ ರಕ್ಷಿತ್ ರನ್ನು ಹೊಗಳುವ ರಮ್ಯ ಸಿಂಪಲ್ ಸ್ಟಾರ್ ಸಿನಿಮಾದಲ್ಲಿ ಕಾಣಿಸಿಕೊಂಡ್ರೇ ಅಚ್ಚರಿಯೇನಿಲ್ಲ.

Ramya Impressed Rakshit Shetty 777 Charlie Movie

Comments are closed.