Rohit Chakratirtha : ಸಂಶೋಧಕನಿಗೆ ಮತಕ್ಕಿಂತ ಸತ್ಯ ಮುಖ್ಯ: ಬಿಜೆಪಿ ವಿರುದ್ಧವೇ ತಿರುಗಿಬಿದ್ದ ರೋಹಿತ್ ಚಕ್ರತೀರ್ಥ

ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ ಮತ್ತು ಅದಕ್ಕಾಗಿ ಆತ ಜಗತ್ತನ್ನೇ ಎದುರು ಹಾಕಿಕೊಳ್ಳಲು ಸಿದ್ಧವಾಗಿರುತ್ತಾನೆ ಎನ್ನುವ ಮೂಲಕ ರಾಜ್ಯ ಪಠ್ಯಪುಸ್ತಕ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohit Chakratirtha) ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. ಮಾತ್ರವಲ್ಲ ರಾಜಕೀಯ ಪಕ್ಷಕ್ಕೇ ಮತಗಳೇ ಅಂತಿಮ ವಾಗುತ್ತದೆ ಎನ್ನುವ ಮೂಲಕ ತಮ್ಮನ್ನು ಸಮಿತಿಗೆ ನೇಮಿಸಿ ಬಳಿಕ ಕೈಬಿಟ್ಟ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಅವರನ್ನು ಸರ್ಕಾರ ನೇಮಿಸಿತ್ತು. ಬಳಿಕ ಪ್ರಾಥಮಿಕ ಶಾಲೆ ಹಾಗೂ ಮಾಧ್ಯಮಿಕ ಶಾಲೆಗಳ ಪಠ್ಯವನ್ನು ಸಮಿತಿ ಪರಿಷ್ಕರಣೆ ಮಾಡಿತ್ತು. ಇದರಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ‌ ಅವಮಾನ, ಬಸವಣ್ಣ ಪಠ್ಯ ಕೈಬಿಡಲಾಗಿದೆ ಎಂಬುದು ಸೇರಿದಂತೆ ಹಲವು ಕಾರಣಕ್ಕಾಗಿ ರೋಹಿತ್ ಚಕ್ರತೀರ್ಥ ಪಠ್ಯಕ್ರಮ ಪರಿಷ್ಕರಣೆ ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ನಾಡಿದ ಮಠಾಧೀಶರು, ಬರಹಗಾರರು,ಸಾಹಿತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆಲ್ಲ ಕ್ಯಾರೇ ಎನ್ನದ ಸರ್ಕಾರ ಪಠ್ಯಪುಸ್ತಕ ಮರುಮುದ್ರಣಕ್ಕೆ ನೋ ಎಂದಿದ್ದಲ್ಲದೇ, ಅಗತ್ಯವಿರೋ ಪಠ್ಯಗಳನ್ನು ಪರಿಷ್ಕರಣೆ ಮಾಡೋದಾಗಿ ಘೋಷಿಸಿತ್ತು. ಅಲ್ಲದೇ ವಿವಾದಗಳ ಕಾರಣಕ್ಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿಯನ್ನೇ ವಿಸರ್ಜಿಸಿತ್ತು.

ಇದಾದ ಬಳಿಕ ಪಿಯು ಪಠ್ಯ ಪರಿಷ್ಕರಣೆಗೂ ರೋಹಿತ್ ಚಕ್ರತೀರ್ಥ ನಾಯಕತ್ವದಲ್ಲೇ ಸಮಿತಿ ರಚನೆಯಾಗಿತ್ತು. ಇದಕ್ಕೂ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೇ, ರೋಹಿತ್ ಚಕ್ರತೀರ್ಥ ರನ್ನು ಬಂಧಿಸುವಂತೆ ಆಗ್ರಹವೂ ಕೇಳಿಬಂದಿತ್ತು. ಈ ಮಧ್ಯೆ ಅಚ್ಚರಿಯ ಬೆಳವಣಿಗೆಯಲ್ಲಿ ಧಿಡೀರ್ ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥರನ್ನು ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣಯಿಂದ ಕೈಬಿಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಯ ಬಳಿಕ ಬರಹಗಾರ ರೋಹಿತ್ ಚಕ್ರತೀರ್ಥ ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ಸ್ಪಷ್ಟ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಟು ಟೀಕೆಯ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಂಶೋಧಕನಿಗೆ ಸತ್ಯವೇ ಮುಖ್ಯವಾಗಿದ್ದರೇ, ಆದರೆ ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಗೆ ಅಂತಿಮವಾಗಿ ಮುಖ್ಯವಾಗುವುದು ಮತಗಳು. ಸತ್ಯ ಮತ್ತು ಮತ ಎಂಬ ಹಾದಿಯ ನಡುವೆ ಸಂಶೋಧಕ ಸತ್ಯವನ್ನು ಆಯ್ದುಕೊಂಡರೇ ರಾಜಕೀಯ ಶಕ್ತಿ ಎರಡನೇಯದನ್ನು ಆಯ್ದುಕೊಳ್ಳುತ್ತದೆ ಎಂದು ನೇರವಾಗಿ ರೋಹಿತ್ ಚಕ್ರತೀರ್ಥ ರಾಜ್ಯ ಸರ್ಕಾರ ಮತದ ಆಸೆಗಾಗಿ‌ ತನ್ನನ್ನು ಸಮಿತಿಯಿಂದ ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.

ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟು ಅರ್ಥಹೀನವೋ ಅಷ್ಟೇ ಅರ್ಥಹೀನವಾದದ್ದು ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎನ್ನುವಂತದ್ದು. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನ ತತ್ವ ಇವರೆಡಕ್ಕೂ ಸೇರದ್ದು ಹೀಗಾಗಿ ವಿಸರ್ಜನೆಯಾದ ಮೇಲೂ ಅಲ್ಲಿ ಉಳಿಯದೇ ನನ್ನ ಕೆಲಸಕ್ಕೆ ಮರಳಿದ್ದೇನೆ ಎಂದು ಚಕ್ರತೀರ್ಥ ಪೋಸ್ಟ್ ಹಾಕಿದ್ದಾರೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್ ಸಖತ್ ವೈರಲ್ ಆಗಿದ್ದು ಬಿಜೆಪಿ ಗೆ ಟಾಂಗ್ ಕೊಟ್ಟಂತಾಗಿದೆ.

ಇದನ್ನೂ ಓದಿ : Integrated coaching : ಇಂಟಿಗ್ರೇಟೆಡ್ ಕೋಚಿಂಗ್ ಹೆಸರಿನಲ್ಲಿ ಕಾಲೇಜುಗಳಿಂದ ಸುಲಿಗೆ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಇದನ್ನೂ ಓದಿ : Rohit chakratirtha : ದ್ವಿತೀಯ PUC ಪಠ್ಯ ಪರಿಷ್ಕರಣಾ ಸಮಿತಿಯಿಂದ ರೋಹಿತ್​ ಚಕ್ರತೀರ್ಥಗೆ ಕೊಕ್​

truth is more important to the researcher Says Rohit Chakratirtha

Comments are closed.