Ranbir Kapoor-Alia Bhatt : ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರಾ ಆಲಿಯಾ ಭಟ್​:ಕುತೂಹಲ ಮೂಡಿಸಿದ ರಣಬೀರ್ ಹೇಳಿಕೆ

Ranbir Kapoor-Alia Bhatt : ಬಾಲಿವುಡ್​​ನ ಫೇಮಸ್ ಜೋಡಿ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಕೆಲವು ದಿನಗಳ ಹಿಂದೆಯಷ್ಟೇ ತಾವು ಪೋಷಕರಾಗುತ್ತಿದ್ದೇವೆ ಎಂಬ ವಿಚಾರವನ್ನು ರಟ್ಟು ಮಾಡಿದ್ದಾರೆ. ಮುಂಬೈನ ರಣಬೀರ್​ ಕಪೂರ್​ ನಿವಾಸದಲ್ಲಿ ಅತ್ಯಂತ ಸರಳವಾಗಿ ವಿವಾಹವಾಗುವ ಮೂಲಕ ಈ ಜೋಡಿ ಎಲ್ಲರನ್ನೂ ಬೆರಗುಗೊಳಿಸಿತ್ತು. ಇದಾದ ಬಳಿಕ ಮತ್ತೊಂದು ಆಶ್ಚರ್ಯ ಎಂಬಂತೆ ಆಲಿಯಾ ಭಟ್​ ತಾವು ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಹೀಗೆ ದಿನಕ್ಕೊಂದು ಸಪ್ರೈಸ್​ಗಳನ್ನು ನೀಡುತ್ತಿರುವ ಈ ಜೋಡಿ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ನೀಡುವಂತೆ ಕಾಣ್ತಿದೆ. ಅದೇನೆಂದರೆ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅವಳಿ ಮಕ್ಕಳಿಗೆ ತಂದೆಯಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸ್ವತಃ ರಣಬೀರ್​ ಕಪೂರ್​ ನೀಡಿರುವ ಹೇಳಿಕೆಯೊಂದು ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ.


ರಣಬೀರ್​ ಕಪೂರ್​ ತಮ್ಮ ಮುಂದಿನ ಸಿನಿಮಾ ಶಂಶೇರಾ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಂದರ್ಶನಗಳಲ್ಲಿ ತಾನು ತಂದೆಯಾಗುತ್ತಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ರೀತಿಯ ಸಂದರ್ಶನವೊಂದರಲ್ಲಿ ರಣಬೀರ್​ ಕಪೂರ್​ಗೆ ನೀವು 2 ಸತ್ಯಗಳನ್ನು ಹಾಗೂ 1 ಸುಳ್ಳನ್ನು ಹೇಳಬೇಕು ಎಂದು ನಿರೂಪಕರು ಕೇಳಿದ್ದರು. ಇದಕ್ಕೆ ರಣಬೀರ್​ ಕಪೂರ್​, ನಾನು ಅವಳಿ ಮಕ್ಕಳ ತಂದೆಯಾಗುತ್ತಿದ್ದೇನೆ, ನಾನು ಒಂದು ದೊಡ್ಡ ಪೌರಾಣಿಕ ಚಿತ್ರದಲ್ಲಿ ನಟಿಸಲಿದ್ದೇನೆ ಹಾಗೂ ನಾನು ನನ್ನ ವೃತ್ತಿ ಜೀವನದಿಂದ ದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.


ರಣಬೀರ್​ ಕಪೂರ್​ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಲೆಕ್ಕಾಚಾರ ಶುರು ಮಾಡಿದ್ದಾರೆ. ರಣಬೀರ್​ ಕಪೂರ್​ ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಸತ್ಯದ ವಿಚಾರ. ಇನ್ನುಳಿದ ಎರಡು ವಾಕ್ಯಗಳಾದ ಕೆಲಸಕ್ಕೆ ದೀರ್ಘ ವಿರಾಮ ಹಾಗೂ ಅವಳಿ ಮಕ್ಕಳ ತಂದೆ ಇವರೆಡರಲ್ಲಿ ಯಾವುದು ಸುಳ್ಳು ಎಂಬುದನ್ನು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ತಾಳೆ ಹಾಕಲಾಗ್ತಿದೆ. ರಣಬೀರ್​ ಕಪೂರ್​ ಈ ಸಮಯದಲ್ಲಿ ತಮ್ಮ ವೃತ್ತಿ ಜೀವನದಿಂದ ದೀರ್ಘ ವಿರಾಮವನ್ನಂತೂ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಅವಳಿ ಮಕ್ಕಳ ತಂದೆಯಾಗುತ್ತಿದ್ದಾರೆ ಎಂಬುದೇ ಸತ್ಯ ಇರಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.


ಇನ್ನು ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್​ 9ರಂದು ತೆರೆ ಕಾಣಲಿದೆ. ಇದಕ್ಕೂ ಮುನ್ನ ರಣಬೀರ್ ಕಪೂರ್​ ಜುಲೈ 22ರಂದು ತೆರೆ ಕಾಣಲಿರುವ ಶಂಶೇರಾ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇದನ್ನು ಓದಿ : Sourav Ganguly congratulated Hardik Pandya : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಇದನ್ನೂ ಓದಿ : remove bra for NEET exam : ‘ಒಳ ಉಡುಪು ಕಳಚಿಟ್ಟು ಪರೀಕ್ಷೆ ಬರೆಯಿರಿ’ : ನೀಟ್​ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ವಿಚಿತ್ರ ಸೂಚನೆ

Ranbir Kapoor-Alia Bhatt Expecting Twins Here’s What we Know

Comments are closed.