ಸೆಕೆಂಡ್ ಅನಿವರ್ಸರಿ ಆಚರಿಸಿಕೊಂಡ ರಣ್ ವೀರ್ ಹಾಗೂ ದೀಪಿಕಾ ದಂಪತಿ: ಪತ್ನಿ ಬಗ್ಗೆ ರಣ್ ವೀರ್ ಮಾತುಗಳನ್ನು ಕೇಳಿದರೆ ಅಚ್ಚರಿಯಾದೀತು

ಬಾಲಿವುಡ್ ನಲ್ಲಿ ಅದೆಷ್ಟೋ ಸ್ಪೆಷಲ್ ಜೋಡಿಗಳಿದ್ದಾರೆ. ಆದ್ರೆ ಅವರಲ್ಲಿ ಕೆಲವರು ಮಾತ್ರ ಈಗಲೂ ಟ್ರೆಂಡ್ ನಲ್ಲಿದ್ದಾರೆ. ಅಂಥವರಲ್ಲಿ ಫೇಮಸ್ ಕಪಲ್, ಲವ್ಲಿ ಜೋಡಿ ಅಂತಲೇ ಹೆಸರು ಮಾಡಿದವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ. ಈ ಜೋಡಿಗಿಂದು ಸ್ಪೆಷಲ್ ದಿನ.

ಹೌದು, ಕಪಲ್ ತಮ್ಮ ಎರಡನೆ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭ ವನ್ನು ವಿಶೇಷವಾಗಿಸಲು ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪರೂಪದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿರುವ ರಣವೀರ್ ಸಿಂಗ್ ‘ಆತ್ಮಗಳು ಶಾಶ್ವತವಾಗಿ ಹೆಣೆದುಕೊಂಡಿವೆ. ಎರಡನೇ ವಾರ್ಷಿಕೋತ್ಸವದ ಶುಭಾಶಯಗಳು, ದೀಪಿಕಾಪಡುಕೋಣೆ ‘ ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.

ರಣವೀರ್ ಮತ್ತು ದೀಪಿಕಾ ಪಡುಕೋಣೆ ಜೋಡಿ 2018ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಸಮಾರಂಭದಲ್ಲಿ ವಿವಾಹವಾದರು.

ಅದ್ಧೂರಿಯಾಗಿ ನಡೆದ ಈ ವಿವಾಹ ಸಮಾರಂಭದಲ್ಲಿ ಕೊಂಕಣಿ ಮೂಲದ ದೀಪಿಕಾ ಮತ್ತು ಸಿಂಧಿ ಮೂಲದ ರಣವೀರ್ ಎರಡೂ ಸಂಪ್ರದಾಯಗಳ ಪ್ರಕಾರ ಮದುವೆಯಾದರು. ಈ ಶುಭ ಸಂದರ್ಭದಲ್ಲಿ ಅವರ ಆಪ್ತರು ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು.

ಇನ್ನು ನವೆಂಬರ್ 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ದೀಪಿಕಾ ಪಡುಕೋಣೆ-ರಣವೀರ್​ ಸಿಂಗ್​ ಅದ್ಧೂರಿ ಆರತಕ್ಷತೆ ನೆರವೇರಿತ್ತು.

ಒಟ್ಟಿನಲ್ಲಿ ಇಂದು ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಈ ಜೋಡಿಗೆ ಎಲ್ಲರೂ ಶುಭ ಕೋರಿ ಹಾರೈಸಿದ್ದಾರೆ.

Comments are closed.