ಸೋಮವಾರ, ಏಪ್ರಿಲ್ 28, 2025
HomeCinemaRashmika Kannada Dubbing : ಕನ್ನಡದಲ್ಲಿ ಡಬ್ ಮಾಡೋಕೆ ಟೈಂ ಇರಲಿಲ್ಲ: ಕೊನೆಗೂ ಗುಟ್ಟು ಬಿಟ್ಟು...

Rashmika Kannada Dubbing : ಕನ್ನಡದಲ್ಲಿ ಡಬ್ ಮಾಡೋಕೆ ಟೈಂ ಇರಲಿಲ್ಲ: ಕೊನೆಗೂ ಗುಟ್ಟು ಬಿಟ್ಟು ಕೊಟ್ಟ ರಶ್ಮಿಕಾ

- Advertisement -

ಟಾಲಿವುಡ್ ನ ಬಹುನೀರಿಕ್ಷಿತ ಸಿನಿಮಾ ಪುಷ್ಪ ರಿಲೀಸ್ ಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸೆಂಬರ್ 17 ರಂದು ತೆರೆಗೆ ಬರ್ತಿರೋ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗಾಗಿ ನಟ ಅಲ್ಲೂ ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಸಿಲಿಕಾನ್ ಸಿಟಿಗೆ ಆಗಮಿಸಿದ್ದರು. ಈ ವೇಳೆ ಕನ್ನಡದಲ್ಲೇ ಮಾತನಾಡಿದ ನಟಿ ರಶ್ಮಿಕಾ ತಾವ್ಯಾಕೆ ಕನ್ನಡದಲ್ಲಿ ಡಬ್ ಮಾಡಿಲ್ಲ ( Rashmika Mandanna Kannada Dubbing ) ಎಂಬ ಅಭಿಮಾನಿಗಳ ಪ್ರಶ್ನೆಗೆ ಅಚ್ಚರಿಯ ಉತ್ತರ ಹೇಳಿದ್ದಾರೆ.

ಪುಷ್ಪ ಸಿನಿಮಾ ಬಿಡುಗಡೆಗೆ ಎರಡು ದಿನ ಬಾಕಿ ಇರುವಂತೆಯೇ ಚಿತ್ರತಂಡ ಬೆಂಗಳೂರಿನಲ್ಲಿ ಸಿನಿಮಾ ದ ಪ್ರಚಾರ ನಡೆಸಿದೆ. ಅಲ್ಲೂ ಅರ್ಜುನ್ , ನಿರ್ದೇಶಕ ಸುಕುಮಾರ್ ನಟಿ ರಶ್ಮಿಕಾ ವಿಲನ್ ರೋಲ್ ನಲ್ಲಿ‌ಮಿಂಚಿದ ಡಾಲಿ ಧನಂಜಯ್ ಕೂಡ ಇವೆಂಟ್ ನಲ್ಲಿ ಪಾಲ್ಗೊಂಡು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವರ್ಷಗಳ‌ ನಂತರ ಬೆಂಗಳೂರಿಗೆ ಬಂದಿದ್ದನ್ನು ನೆನಪಿಸಿಕೊಂಡ ಅಲ್ಲು ಅರ್ಜುನ್, ನನ್ನ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗ್ತಿರೋದಕ್ಕೆ ಖುಷಿಯಾಗ್ತಿದೆ ಎಂದಿದ್ದಾರೆ.

ಕನ್ನಡ‌ಚಿತ್ರರಂಗದಿಂದ ಬಂದು ದೇಶದ ಎಲ್ಲಾ ಚಿತ್ರರಂಗದಲ್ಲೂ ಮಿಂಚುತ್ತಿರೋ ರಶ್ಮಿಕಾರನ್ನು ಅಲ್ಲು ಅರ್ಜುನ್ ಮುಕ್ತವಾಗಿ ಹೊಗಳಿದ್ದಾರೆ. ಅಲ್ಲದೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿಕೊಟ್ಟ ಪ್ರತಿಯೊಬ್ಬರನ್ನು ಅಲ್ಲು ಅರ್ಜುನ್ ಸ್ಮರಿಸಿದ್ದಾರೆ. ಇನ್ನು ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅಲ್ಲು ಅರ್ಜುನ್ ಈ ಸಂದರ್ಭದಲ್ಲಿ ಅವರ ಮನೆಗೆ ಭೇಟಿ‌ಮಾಡೋದು ಸರಿಯಾಗಲ್ಲ. ಸಿನಿಮಾ ರಿಲೀಸ್ ಬಳಿಕ ಹೋಗೋದಾಗಿ ಹೇಳಿಕೊಂಡಿದ್ದಾರೆ.

ಇನ್ನು ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರ ನನಗೆ ತುಂಬಾ ಸ್ಪೆಶಲ್. ಅಲ್ಲು ಅರ್ಜುನ್ ಅವರ ಜೊತೆ ನಟಿಸಿದ್ದಕ್ಕೆ ನಂಗೆ ತುಂಬ ಖುಷಿ ಕೊಟ್ಟಿದೆ ಎಂದಿದ್ದಾರೆ. ಕನ್ನಡದಿಂದಲೇ ಕೆರಿಯರ್ ಆರಂಭಿಸಿದ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಕನ್ನಡ ಅವತರಣಿಕೆಗೆ ವಾಯ್ಸ್ ಡಬ್ ಮಾಡಿಲ್ಲ. ಹೀಗಾಗಿ ಇದು ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು.

ಕನ್ನಡದಿಂದಲೇ ವೃತ್ತಿ ಆರಂಭಿಸಿದ ರಶ್ಮಿಕಾ ಕನ್ನಡವನ್ನೇ ಮರೆತಿದ್ದಾರೆ ಎಂಬ ಟೀಕೆಯೂ ಕೇಳಿಬಂದಿತ್ತು. ಇದರ ಬಗ್ಗೆ ಮಾತನಾಡಿದ ರಶ್ಮಿಕಾ ನಾನು ಈ ಸಿನಿಮಾಗೆ ಡಬ್ ಮಾಡಬೇಕೆಂದುಕೊಂಡಿದ್ದೆ. ಆದರೆ ಸಾಕಷ್ಟು ಸಿನಿಮಾ ಶೂಟಿಂಗ್ ಹಾಗೂ ಬ್ಯುಸಿ ಶೆಡ್ಯೂಲ್ ಇದ್ದಿದ್ದರಿಂದ ಡಬ್ ಮಾಡೋದಿಕ್ಕೆ ಸಾಧ್ಯವಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಪುಷ್ಪಾ ಎರಡು ಭಾಗದಲ್ಲಿ ಬರ್ತಿರೋದರಿಂದ ಎರಡನೇ ಭಾಗಕ್ಕೆ ನಾನೇ ಡಬ್ಬಿಂಗ್ ಮಾಡುತ್ತೇನೆ ಎಂದು ರಶ್ಮಿಕಾ ಭರವಸೆ ನೀಡಿದ್ದಾರೆ. ಡಾಲಿ ಧನಂಜಯ್ ಕೂಡ ಸಿನಿಮಾದಲ್ಲಿ ನಟಿಸಿದ್ದು 17 ರಂದು ರಿಲೀಸ್ ಆಗಲಿರೋ ಸಿನಿಮಾಗೆ ಅಭಿಮಾನಿಗಳು ಕಾಯ್ತಿದ್ದಾರೆ.

ಇದನ್ನೂ ಓದಿ : Rashmika mandanna: ಬಾಲಿವುಡ್ ನ ಚೊಚ್ಚಲ ಸಿನಿಮಾ ಬಗ್ಗೆ ಮನಬಿಚ್ಚಿದ ಕೊಡಗಿನ ಕುವರಿ: ಮಿಶನ್ ಮಜ್ನು ಬಗ್ಗೆ ರಶ್ಮಿಕಾ ಕಮೆಂಟ್

ಇದನ್ನೂ ಓದಿ : Rashmika Mandanna: ಅವರು ನನ್ನ ಲೈಫ್ ಕೋಚ್: ರಶ್ಮಿಕಾ ಹೀಗಂದಿದ್ದು ಯಾರಿಗೆ ಗೊತ್ತಾ?

( Rashmika Kannada Dubbing : Rashmika Mandanna says there is no dubbed time in Kannada)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular