Big Relief to Aryan Khan:ಶಾರೂಕ್​ ಪುತ್ರ ಆರ್ಯನ್​ ಖಾನ್​ಗೆ ಬಿಗ್​ ರಿಲೀಫ್​ ನೀಡಿದ ಮುಂಬೈ ಹೈಕೋರ್ಟ್​..!

ಡ್ರಗ್ಸ್​ ಪ್ರಕರಣದ ಆರೋಪವನ್ನು ಎದುರಿಸುತ್ತಿರುವ ಆರ್ಯನ್​ ಖಾನ್​ಗೆ ಬಾಂಬೆ ಹೈಕೋರ್ಟ್​ ಬಿಗ್​ ರಿಲೀಫ್​ (Big Relief to Aryan Khan)ನೀಡಿದೆ. ವಿಚಾರಣೆಯ ಭಾಗವಾಗಿ ಆರ್ಯನ್​ ಖಾನ್​ ಪ್ರತಿ ಶುಕ್ರವಾರ ಮುಂಬೈನ ಡ್ರಗ್ಸ್​ ನಿಗ್ರಹ ದಳ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಹೇಳಿದೆ. ಕ್ರೂಸ್​ ಡ್ರಗ್ಸ್​ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ನೀಡುವ ವೇಳೆಯಲ್ಲಿ ಬಾಂಬೆ ಹೈಕೋರ್ಟ್ ಈ ಷರತ್ತನ್ನು ವಿಧಿಸಿತ್ತು. ಇದೀಗ ಈ ಷರತ್ತಿನಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ನ್ಯಾಯಮೂರ್ತಿ ಎನ್​ ಡಬ್ಲು ಸಾಂಬ್ರೆ ಹೇಳಿದ್ದಾರೆ.


ದೆಹಲಿಯ ಎನ್​ಸಿಬಿ ಕಚೇರಿಯು ಸೂಚನೆ ನೀಡಿದ ವೇಳೆಯಲ್ಲಿ ಆರ್ಯನ್​ ಖಾನ್​​​ ಕಚೇರಿಗೆ ಹಾಜರಾಗುತ್ತಾರೆ. ಎನ್​ಸಿಬಿಯು ಆರ್ಯನ್​ ಖಾನ್​ಗೆ ಕಚೇರಿಗೆ ಹಾಜರಾಗಲು 72 ಗಂಟೆಗಳ ಸಮಯಾವಕಾಶ ನೀಡಿ ನೋಟಿಸ್​ ಕಳುಹಿಸುತ್ತದೆ ಎಂದು ನ್ಯಾಯಮೂರ್ತಿ ಸಾಂಬ್ರೆ ಹೇಳಿದ್ದಾರೆ. ಇದರ ಜೊತೆಯಲ್ಲಿ ಜಾಮೀನು ಆದೇಶದಲ್ಲಿದ್ದ ಮತ್ತೊಂದು ಷರತ್ತನ್ನೂ ನ್ಯಾಯಾಲಯ ಮಾರ್ಪಾಡು ಮಾಡಿದೆ. ಆರ್ಯನ್​ ಮುಂಬೈನಿಂದ ಹೊರಗೆ ಪ್ರಯಾಣ ಬೆಳೆಸುವಾಗಲೆಲ್ಲ ತನ್ನ ಪ್ರವಾಸದ ವರದಿಯನ್ನು ಎನ್​ಸಿಬಿಗೆ ಸಲ್ಲಿಸಬೇಕು ಎಂಬ ಷರತ್ತಿನಲ್ಲಿಯೂ ಮಾರ್ಪಾಡು ಮಾಡಲಾಗಿದೆ.


ಅರ್ಜಿದಾರ ಆರ್ಯನ್​ ತನ್ನ ಹೇಳಿಕೆಯನ್ನು ದಾಖಲಿಸುವ ಉದ್ದೇಶದಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರೆ ತಮ್ಮ ಪ್ರಯಾಣದ ವಿವರವನ್ನು ಎನ್​ಸಿಬಿಗೆ ಸಲ್ಲಿಸಬೇಕಾಗಿಲ್ಲ. ಆದರೆ ಮುಂಬೈನ ಹೊರಗೆ ಇತರೆ ಯಾವುದೇ ಉದ್ದೇಶದಿಂದ ಪ್ರಯಾಣ ಬೆಳೆಸಲು ಇಚ್ಛಿಸಿದರೂ ಸಹ ತಮ್ಮ ಪ್ರವಾಸದ ವರದಿಯನ್ನು ಎನ್​ಸಿಬಿಗೆ ನೀಡಬೇಕು ಎಂದು ನ್ಯಾಯಮೂರ್ತಿ ಸಾಂಬ್ರೆ ಹೇಳಿದ್ದಾರೆ.


ಈ ಷರತ್ತನ್ನು ಮನ್ನಾ ಮಾಡುವಂತೆ ಕೋರಿ ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, “ಎನ್‌ಸಿಬಿಯ ಮುಂಬೈ ಕಚೇರಿಗೂ ಈಗ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಕಕ್ಷಿದಾರ (ಆರ್ಯನ್) ತನಿಖೆಗೆ ಸಹಕರಿಸುತ್ತಿದ್ದಾರೆ ಮತ್ತು ವಾಸ್ತವವಾಗಿ ಅವರು ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆರ್ಯನ್‌ಗೆ ಸಮನ್ಸ್ ಜಾರಿಯಾದಾಗ ಮತ್ತು ದೆಹಲಿಯಲ್ಲಿರುವ ಎನ್‌ಸಿಬಿಯ ಎಸ್‌ಐಟಿ ಮುಂದೆ ಆರ್ಯನ್ ಹಾಜರಾಗುತ್ತಾರೆ .ಆರ್ಯನ್ ಪ್ರತಿ ಬಾರಿ ಮುಂಬೈನ ಎನ್‌ಸಿಬಿ ಕಚೇರಿಗೆ ಬಂದಾಗಲೂ ಭಾರೀ ಜನಸಂದಣಿ ಇರುತ್ತದೆ ಮತ್ತು ಆತನೊಂದಿಗೆ ಪೊಲೀಸ್ ಸಿಬ್ಬಂದಿ ಇರಬೇಕಾಗಿರುವುದರಿಂದ ಅನಗತ್ಯ ತೊಂದರೆ ಉಂಟಾಗುತ್ತದೆ ಎಂದು ಆರ್ಯನ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Aryan Khan gets relief from weekly attendance at NCB Mumbai office

ಇದನ್ನು ಓದಿ : Jarkiholi master plan : ಬಿಜೆಪಿಗೆ ಅನಿವಾರ್ಯವಾದ್ರಾ ಲಖನ್ : ರಮೇಶ್ ಜಾರಕಿಹೊಳಿ ಪ್ಲ್ಯಾನ್ ಏನು ಗೊತ್ತಾ?!

ಇದನ್ನೂ ಓದಿ: Fish Lorry Accident : ಉಡುಪಿಯಲ್ಲಿ ವೃದ್ದನ ಜೀವ ಉಳಿಸಲು ತನ್ನ ಪ್ರಾಣವನ್ನೇ ಕಳೆದುಕೊಂಡ ಮೀನಿನ ಲಾರಿಯ ಚಾಲಕ !

Comments are closed.