Rashmika Mandanna : ‘ಶೂಟಿಂಗ್​ ಸೆಟ್​ನಲ್ಲಿ ರಣಬೀರ್​ ಕಪೂರ್​ ನನ್ನನ್ನು ಅಳುವಂತೆ ಮಾಡಿದ್ದರು’ : ರಶ್ಮಿಕಾ ಮಂದಣ್ಣ

Rashmika Mandanna Ranbir Kapoor : ಬಿಗ್​ ಬಿ ಅಮಿತಾಭ್​ ಬಚ್ಛನ್​ ನಟನೆಯ ಗುಡ್​ ಬೈ ಸಿನಿಮಾದ ಮೂಲಕ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ರಣಬೀರ್​ ಕಪೂರ್​ ಜೊತೆಗಿನ ತಮ್ಮ ಮುಂದಿನ ಸಿನಿಮಾವನ್ನು ಬೆಳ್ಳಿ ತೆರೆಯ ಮೇಲೆ ತರುವ ಸಿದ್ಧತೆಯಲ್ಲಿ ನಟಿ ರಶ್ಮಿಕಾ ಇದ್ದಾರೆ. ಈ ಜೋಡಿ ಕೂಡ ಇದೇ ಮೊದಲ ಬಾರಿಗೆ ಬಿಗ್​ ಸ್ಕ್ರೀನ್​ನಲ್ಲಿ ಒಂದಾಗಿ ನಟಿಸುತ್ತಿದೆ. ಹೀಗಾಗಿ ರಣಬೀರ್​ ಕಪೂರ್​ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ತೆರೆಯ ಮೇಲೆ ಯಾವ ರೀತಿಯಲ್ಲಿ ಕಮಾಲ್​ ಮಾಡುತ್ತೆ ಅನ್ನೋದನ್ನ ನೋಡೋಕೆ ಸಿನಿ ರಸಿಕರು ಕಾತುರದಿಂದ ಕಾಯ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ರಣಬೀರ್​ ಕಪೂರ್ ನಟನೆಯ ಆನಿಮಲ್​ ಸಿನಿಮಾ ಯಾವಾಗ ರಿಲೀಸ್​ ಆಗುತ್ತೋ ಅಂತಾ ಸಿನಿ ರಸಿಕರು ಕಾಯುತ್ತಾ ಇದ್ದರೆ ಇತ್ತ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ರಣಬೀರ್​ ಕಪೂರ್​ ಹೇಗೆ ತಮ್ಮನ್ನು ಒಮ್ಮೆ ಅಳಿಸಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ .

ರಣಬೀರ್​ ಕಪೂರ್​ ಅದ್ಯಾವ ರೀತಿಯಲ್ಲಿ ರಶ್ಮಿಕಾರನ್ನು ಅಳಿಸಿದ್ದರಬಹುದು ಎಂದು ನೀವು ಯೋಚಿಸುತ್ತಿರಬಹುದು. ಅಂದಹಾಗೆ ರಣಬೀರ್​​ ರಶ್ಮಿಕಾರ ಮೇಲೆ ಯಾವುದೇ ತಮಾಷೆ ಮಾಡಿ ಅವರು ಅಳುವಂತೆ ಮಾಡಿಲ್ಲ. ಬದಲಾಗಿ ರಶ್ಮಿಕಾರ ಇಷ್ಟದ ಆಹಾರವನ್ನು ಶೂಟಿಂಗ್​ ಸೆಟ್​ಗೆ ತರುವ ಮೂಲಕ ನನ್ನನ್ನು ಅಳುವಂತೆ ಮಾಡಿದ್ದರು ಎಂದು ರಶ್ಮಿಕಾ ಹೇಳಿದ್ದಾರೆ.

ನಾನು ಆನಿಮಲ್​​ ಚಿತ್ರೀಕರಣದಲ್ಲಿದ್ದ ಸಂದರ್ಭದಲ್ಲಿ ಬೆಳಗ್ಗಿನ ಉಪಹಾರ ತುಂಬಾ ಬೋರಿಂಗ್​ ಆಗಿ ಇರುತ್ತೆ ಅಂತಾ ಪದೇ ಪದೇ ದೂರುತ್ತಿದ್ದೆ. ಮಾರನೇ ದಿನ ರಣಬೀರ್​ ನನಗಾಗಿ ನನ್ನಿಷ್ಟದ ಉಪಹಾರವನ್ನು ತಂದಿದ್ದರು. ತಮ್ಮ ಬಾಣಸಿಗರಿಂದ ಅಡುಗೆ ಮಾಡಿಸಿ ನನಗಾಗಿ ರುಚಿಕರವಾದ ಆಹಾರವನ್ನು ತರಿಸಿದ್ದರು. ಆ ಆಹಾರ ಎಷ್ಟು ಚೆನ್ನಾಗಿತ್ತು ಅಂದರೆ ನಾನು ಖುಷಿಯಿಂದ ಅಳಲು ಆರಂಭಿಸಿದೆ ಎಂದು ಹೇಳಿದ್ದಾರೆ.

ಇನ್ನು ಸಿನಿಮಾದ ಬಗ್ಗೆ ಮಾತನಾಡೋದಾದ್ರೆ ಆನಿಮಲ್​ ಚಿತ್ರವನ್ನು ಕಬೀರ್​ ಸಿಂಗ್​ ಖ್ಯಾತಿಯ ಸಂದೀಪ್​ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಈ ಸಿನಿಮಾವನ್ನು ಭೂಷಣ್​ ಕುಮಾರ್​ ಹಾಗೂ ಕ್ರಿಶನ್​ ಕುಮಾರ್​ರ ಟೀ ಸಿರೀಸ್​, ಮುರಾದ್​ ಖೇತಾನಿಯ ಸಿನಿ 1 ಸ್ಟುಡಿಯೋಸ್​ ಹಾಗೂ ಪ್ರಣಯ್​ ರೆಡ್ಡಿ ವಂಗಾರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಹಿಂದೆ ಈ ಸಿನಿಮಾಗೆ ಪರಿಣಿತಿ ಚೋಪ್ರಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಈ ಸಿನಿಮಾದಲ್ಲಿ ರಶ್ಮಿಕಾ ಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನಿಲ್​ ಕಪೂರ್​ ಹಾಗೂ ಬಾಬಿ ಡಿಯೋಲ್​ ಕೂಡ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್​ 11ರಲ್ಲಿ ರಿಲೀಸ್​ ಆಗಲಿದೆ.

ಇದನ್ನು ಓದಿ : Anna Rajan : ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ

ಇದನ್ನೂ ಓದಿ : High Court Recruitment 2022 : ಹೈಕೋರ್ಟ್‌ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನ

Rashmika Mandanna cried because of Ranbir Kapoor for THIS reason | Find out

Comments are closed.