Rashmika Mandanna : ರೆಡ್​ ಡ್ರೆಸ್​ನಲ್ಲಿ ಹಾಟ್​ ಲುಕ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ರಶ್ಮಿಕಾ ಮಂದಣ್ಣ

Rashmika Mandanna Looks : ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಬಹು ಬೇಡಿಕೆಯ ನಟಿ ಎಂದು ಕರೆಸಿಕೊಳ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಇದೀಗ ಬಾಲಿವುಡ್​ನಲ್ಲಿಯೂ ಅತ್ಯಂತ ಬೇಡಿಕೆಯ ನಟಿ ಎನಿಸಿದ್ದಾರೆ. ನ್ಯಾಷನಲ್ ಕ್ರಶ್​ ಎಂದೇ ಅಭಿಮಾನಿ ಗಳಿಂದ ಹೆಸರು ಪಡೆದಿರುವ ಗೀತ ಗೋವಿಂದಂ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕಾರ್ಯಕ್ರಮವೊಂದರಲ್ಲಿ ಕೆಂಪು ಬಣ್ಣದ ಉಡುಪಿನಲ್ಲಿ ಕ್ಯಾಮರಾ ಕಣ್ಣಿಗೆ ಪೋಸ್​ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಬಾಲಿವುಡ್​ನ ಜನಪ್ರಿಯ ಪಾಪರಾಜಿ ವೈರಲ್​ ಭಯಾನಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ರಶ್ಮಿಕಾ ಕೆಂಪು ಬಣ್ಣದ ಹೊಳೆಯುವ ಅತ್ಯಾಕರ್ಷಕ ಉಡುಪಿನಲ್ಲಿ ಕಾಣಿಸಿ ಕೊಂಡಿದ್ದಾರೆ. ಆಳವಾದ ವಿ ಆಕಾರದ ಕಂಠ ರೇಖೆ, ತೊಡೆಗಳು ಕಾಣುವಂತಿರುವ ಈ ಡ್ರೆಸ್​​​ ರಶ್ಮಿಕಾಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.


ಈ ಆಕರ್ಷಕ ಉಡುಪಿಗೆ ರಶ್ಮಿಕಾ ಅತ್ಯಂತ ಸಿಂಪಲ್​ ಹೂಪ್​​ ಕಿವಿಯೋಲೆಗಳನ್ನು ಧರಿಸಿದ್ದರು. ಮೇಕಪ್​ ಕೂಡ ಅತ್ಯಂತ ಸುಂದರವಾಗಿ ಮಾಡಿಕೊಂಡಿದ್ದರು. ಜೊತೆಗೆ ಹೀಲ್ಸ್​ ಚಪ್ಪಲಿಯನ್ನು ಧರಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ರಶ್ಮಿಕಾ ಪಾಪರಾಜಿಗಳಿಗೆ ಪೋಸ್​ ನೀಡುವುದನ್ನು ಕಾಣಬಹುದಾಗಿದೆ. ಕೊನೆಯಲ್ಲಿ ಕೊರಿಯನ್​ ಹಾರ್ಟ್​ ಪೋಸ್​ ನೀಡುವ ಮೂಲಕ ರಶ್ಮಿಕಾ ಪಾಪರಾಜಿಗಳಿಗೆ ನಗೆ ಬೀರಿದ್ದಾರೆ .

ಅಂದಹಾಗೆ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಬಾಲಿವುಡ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಮಿಷನ್​ ಮಂಜು ಸಿನಿಮಾದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ, ಅಮಿತಾಬ್​ ಬಚ್ಛನ್​ ಜೊತೆಯಲ್ಲಿ ಗುಡ್​​ಬೈ ಸಿನಿಮಾ ಹಾಗೂ ರಣಬೀರ್​ ಕಪೂರ್​ ಜೊತೆಯಲ್ಲಿ ಆನಿಮಲ್​ ಸಿನಿಮಾಗೆ ರಶ್ಮಿಕಾ ಬಣ್ಣ ಹಚ್ಚಿದ್ದಾರೆ.ಈವರೆಗೆ ರಶ್ಮಿಕಾ ಮಂದಣ್ಣ ನಟನೆಯ ಯಾವುದೇ ಬಾಲಿವುಡ್​ ಸಿನಿಮಾ ರಿಲೀಸ್​ ಆಗಿಲ್ಲ.

ಇದನ್ನು ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

ಇದನ್ನೂ ಓದಿ : sacrifice in-devi temple : ಗಂಡು ಮಗು ಜನಿಸಿದ ಖುಷಿಗೆ ದೇವಿಗೆ ಮನುಷ್ಯನ ಬಲಿ ನೀಡಿದ ತಂದೆ

Rashmika Mandanna Looks Stunning in a Red Hot Thigh-High Length Dress

Comments are closed.