ಸೋಮವಾರ, ಏಪ್ರಿಲ್ 28, 2025
HomeCinemaRashmika Mandanna : ಪುಷ್ಪ ಸಿನಿಮಾದಿಂದ ರಶ್ಮಿಕಾ ಔಟ್ : ಹರಿದಾಡ್ತಿರೋ ಸುದ್ದಿ ಅಸಲಿಯತ್ತೇನು ಗೊತ್ತಾ?

Rashmika Mandanna : ಪುಷ್ಪ ಸಿನಿಮಾದಿಂದ ರಶ್ಮಿಕಾ ಔಟ್ : ಹರಿದಾಡ್ತಿರೋ ಸುದ್ದಿ ಅಸಲಿಯತ್ತೇನು ಗೊತ್ತಾ?

- Advertisement -

ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ‌ ಮಂದಣ್ಣ ಸದ್ಯ ತಮ್ಮ ಕೆರಿಯರ್ ನ ಉತ್ತುಂಗದಲ್ಲಿದ್ದಾರೆ. ಸ್ಯಾಂಡಲ್ ವುಡ್ ನಿಂದ ಪಯಣ ಆರಂಭಿಸಿದ ರಶ್ಮಿಕಾಗೆ (Rashmika Mandanna) ಸದ್ಯ ಬಹುಭಾಷೆಯಲ್ಲೂ ಕೈ ತುಂಬ ಸಿನಿಮಾವಿದೆ. ತೆಲುಗು, ತಮಿಳು ಬಳಿಕ ಬಾಲಿವುಡ್ ನಲ್ಲೂ ಕೊಡಗಿನ ಬೆಡಗಿ ಬ್ಯೂಸಿಯಾಗಿದ್ದಾರೆ. ಆದರೆ ಈಗ ರಶ್ಮಿಕಾ ಫ್ಯಾನ್ಸ್ ಗೆ ಕಹಿಸುದ್ದಿಯೊಂದು ಹೊರಬಿದ್ದಿದೆ.ರಶ್ಮಿಕಾಗೆ ಮತ್ತೊಂದು ಲೆವೆನ್ ನ ಹೆಗ್ಗಳಿಕೆ ತಂದುಕೊಟ್ಟ ಪುಷ್ಪ ಸಿನಿಮಾದ ಸಿಕ್ವೆನ್ಸ್ 2 ರಲ್ಲಿ ರಶ್ಮಿಕಾಗೆ ಅವಕಾಶವಿಲ್ಲವಂತೆ.

ಅಯ್ಯೋ ಇದೇನು ಇಂಥಾ ಶಾಕಿಂಗ್ ವಿಚಾರ, ಸಾಮೇ ಸಾಮೇ ಅಂತ ಡಿ ಗ್ಲ್ಯಾಮರ್ ಮೇಕಪ್ ನಲ್ಲೂ ಮನಮೆಚ್ಚುವಂತೆ ಕುಣಿದ ರಶ್ಮಿಕಾ ಪುಷ್ಪ ಸಿಕ್ವೆನ್ಸ್ -2 ದಲ್ಲಿ ಅವಕಾಶ ಇಲ್ಲವಾ ಅಂತ ನೀವು ನೊಂದುಕೊಳ್ತಿದ್ದೀರಾ. ಇಂತಹದೊಂದು ಸುದ್ದಿ ಸಿನಿಮಾ ಸೋರ್ಸ್ ನಿಂದಲೇ ಹೊರಬಿದ್ದಿದೆ. ಅಂದ್ರೇ ರಶ್ಮಿಕಾ ಪುಷ್ಪ-2 ಸಿನಿಮಾದಿಂದಲೇ ಹೊರಬೀಳ್ತಿಲ್ಲ. ಬದಲಾಗಿ ರಶ್ಮಿಕಾ ಅವರ ಪಾತ್ರವನ್ನು ಪುಷ್ಪ ಸಿನಿಮಾದ ಆರಂಭಕ್ಕಷ್ಟೇ ಸೀಮಿತಗೊಳಿಸಲಾಗಿದೆಯಂತೆ.

ಅಂದ್ರೇ ಪುಷ್ಪ-2 ದಲ್ಲಿ ಪುಷ್ಪರಾಜ್ ಅಂದ್ರೇ ನಾಯಕ ಅಲ್ಲೂ ಅರ್ಜುನ್ ದೊಡ್ಡ ಡಾನ್ ಆಗಿ ಬೆಳೆದಿದ್ದಾನೆ. ಆತ ಭನ್ವರ್ ಸಿಂಗ್ ಶೇಖಾವತ್​ (ಫಹಾದ್ ಫಾಸಿಲ್​) ಜತೆ ಹಗೆ ಕಟ್ಟಿಕೊಂಡಿದ್ದಾನೆ. ಈ ಮಧ್ಯೆ ಪುಷ್ಪ ಹಾಗೂ ಶ್ರೀವಲ್ಲಿ ಮದುವೆ ಆಗಿದೆ. ಎರಡನೇ ಪಾರ್ಟ್​​​ನಲ್ಲಿ ಭನ್ವರ್ ಹಾಗೂ ಪುಷ್ಪ ನಡುವಿನ ಹಗೆತನದ ಕಥೆ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಲೀಕ್ ಆಗಿದೆ ಎನ್ನಲಾದ ತೆಲುಗು ಪುಷ್ಪ-2 ಸಿನಿಮಾದ ಕಥೆಯ ಪ್ರಕಾರ ಶ್ರೀವಲ್ಲಿಯನ್ನು ಭನ್ವರ್ ಆರಂಭದಲ್ಲೇ ಹತ್ಯೆ ಮಾಡುತ್ತಾನೆ. ಇದರಿಂದ ಪುಷ್ಪ ಸಾಕಷ್ಟು ಕುಪಿತಗೊಳ್ಳುತ್ತಾನೆ. ಇಬ್ಬರ ನಡುವೆ ಇರುವ ಹಗೆತನ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಹೀಗೆ ಕಥೆ ಸಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಕಥೆ ನಿಜನಾ ಅನ್ನೋದಿಕ್ಕೆ ಎಲ್ಲೂ ಸಾಕ್ಷಿಯಿಲ್ಲ.

ಸದ್ಯಕ್ಕೆ ಇಂತಹದೊಂದು ಸುದ್ದಿ ವೈರಲ್ ಆಗಿದ್ದು ರಶ್ಮಿಕಾ ಅಭಿಮಾನಿಗಳಿಗೆ ಬೇಸರ ತಂದಿದೆ. ಹೀಗೆ ಹಿರೋಯಿನ್ ಹತ್ಯೆ,ಕಿಡ್ನಾಪ್ ಸಾವು ನಂತರ ಸಿನಿಮಾ ಕಥೆ ಬೆಳೆದುಕೊಳ್ಳುವುದು ಕೇವಲ ಟಾಲಿವುಡ್ ಮಾತ್ರವಲ್ಲ ಎಲ್ಲ ಸಿನಿಮಾ ರಂಗದಲ್ಲೂ ಈಗ ಕಾಮನ್ ಆಗಿದೆ. 2021 ರ ಡಿಸೆಂಬರ್ ನಲ್ಲಿ ತೆರೆಗೆ ಬಂದ ಪುಷ್ಪಸಿನಿಮಾ ಸಾಕಷ್ಟು ಹೊಸ ದಾಖಲೆ ಬರೆದಿದೆ. ಮೂಲಗಳ ಮಾಹಿತಿ ಪ್ರಕಾರ 2022 ರಲ್ಲಿ ಪುಷ್ಪ ಸಿಕ್ವೆನ್ಸ್ -2 ತೆರೆಗೆ ಬರಬೇಕಿತ್ತು. ಆದರೆ ಸಿನಿಮಾ ಶೂಟಿಂಗ್ ವಿಳಂಬಗೊಂಡಿದೆ. ಜುಲೈನಿಂದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ 2023 ಬೇಸಿಗೆಗೆ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ಏಳುಕೋಟಿ ಮೈಲಾರನ ಗಾನಲಹರಿ ಬಿಡುಗಡೆ ; ಭಕ್ತಿ ಭಾವದಿಂದ ಕುಣಿದಿದ್ದ ಸಂಚಾರಿ ವಿಜಯ್

ಇದನ್ನೂ ಓದಿ : Rayan raj sarja : ರಾ ರಾ ರಕ್ಕಮ್ಮ ಎಂದ ರಾಯನ್ ರಾಜ್ ಸರ್ಜಾ : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

Rashmika Mandanna out of Pushpa Movie, What is the truth of the news

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular