ಸಿನಿಮಾ ಇಂಡಸ್ಟ್ರಿಗೆ ಬರೋ ನಟ-ನಟಿಯರಿಗೆ ಸೆಲೆಬ್ರೆಟಿಗಳಿಗೆ ಟ್ರೋಲ್, ಗಾಸಿಪ್, ರೂಮರ್ ಗಳು ಸದಾ ಕಾಡುವ ಸಮಸ್ಯೆಗಳು. ಗಟ್ಟಿಯಾಗಿ ಎದುರಿಸಿ ನಿಂತರೇ ಮಾತ್ರ ಭವಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ಬಹುತೇಕ ನಟಿಯರು ಈ ಟ್ರೋಲ್ ಸಂತೆಯಲ್ಲಿ ನಿಂತು ಗೆಲ್ಲಲು ಸಾಧ್ಯವಾಗದೇ ನೊಂದು ಹೋಗೋದು, ಸಿನಿಮಾ ಇಂಡಸ್ಟ್ರಿಯನ್ನೇ ಬಿಟ್ಟು ಹೋಗುವ ನಿರ್ಧಾರ ಮಾಡೋದು ಕಾಮನ್. ಈಗ ಇಂತಹ ನಿರ್ಧಾರಕ್ಕೆ ನಾನು ಬಂದಿದ್ದೇ ಎನ್ನುವ ಮೂಲಕ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ( Rashmika mandanna quiting movie ) ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಕೊಡಗಿನ ಕುವರಿ ರಶ್ಮಿಕಾಮಂದಣ್ಣ ನ್ಯಾಶನಲ್ ಕ್ರಶ್ ಮಾತ್ರವಲ್ಲ ಈಗ ಬಹುಭಾಷಾ ನಟಿ. ಸಾಲು ಸಾಲು ಸಿನಿಮಾ ಶೂಟಿಂಗ್, ಡಬ್ಬಿಂಗ್ ಪ್ರಮೋಶನ್ ಅಂತ ಬ್ಯುಸಿಯಾಗಿರೋ ರಶ್ಮಿಕಾ ಸದ್ಯ ಪುಷ್ಪ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಇದೇ ಖುಷಿ ಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಶ್ಮಿಕಾ ಬದುಕಿನ ಹಲವು ನೋವು ನಲಿವಿನ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಟ್ರೋಲ್ ಗೆ ಹೆದರಿ ಸಿನಿಮಾ ರಂಗವನ್ನು ತೊರೆಯಲು ತೀರ್ಮಾನಿಸಿದ್ದೇ ಎಂದಿದ್ದು ಅಭಿಮಾನಿಗಳಿಗೆ ಆಘಾತ ಮೂಡಿಸಿದೆ.
ಶಿಕ್ಷಣಕ್ಕಾಗಿ 2014 ರಲ್ಲಿ ಬೆಂಗಳೂರಿಗೆ ಬಂದ ನಾನು ಕನಸಿನಲ್ಲಿಯೂ ಸಿನಿಮಾ ರಂಗದ ಬಗ್ಗೆ ಯೋಚಿಸಿರಲಿಲ್ಲ. ಬದಲಾಗಿ ಸೀರಿಯಸ್ಸಾಗಿ ಮಾಡೆಲಿಂಗ್ ನಲ್ಲಿ ತೊಡಗಿಕೊಂಡಿದ್ದೆ. ಆದರೆ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಅದರಲ್ಲಿ ಕಿರಿಕ್ ಪಾರ್ಟಿ ಅವಕಾಶ ನನ್ನನ್ನು ಸೆಳೆಯಿತು.ಯಾಕಂದ್ರೆ ಸಿನಿಮಾ ಕತೆ ನನ್ನ ನಿಜಜೀವನಕ್ಕೆ ಹೊಂದುವಂತಿತ್ತು. ಯಾಕಂದ್ರೇ ಆಗ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಹೀಗಾಗಿ ಒಪ್ಪಿಕೊಂಡಿದ್ದೆ.
ಅಲ್ಲಿಂದಾಚೆಗೆ ಸಾಲು ಸಾಲು ಸಿನಿಮಾದಲ್ಲಿ ತೊಡಗಿಸಿಕೊಂಡೆ. ಆದರೆ ಅಲ್ಲಿಂದಾಚೆಗೆ ನಾನು ಬಾಡಿ ಶೇಮಿಂಗ್, ಏಜ್ ಶೇಮಿಂಗ್ ಎಲ್ಲವನ್ನು ಎದುರಿಸುತ್ತಲೇ ಬಂದಿದ್ದೇನೆ. ಟ್ರೋಲ್ ಗಳಂತೂ ಮಾನಸಿಕವಾಗಿ ತುಂಬಾ ಹಿಂಸೆ ನೀಡಿವೆ. ಟ್ರೋಲ್ ಕಾಟ ತಾಳಲಾರದೇ ಸಿನಿಮಾ ರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದೇ, ಆದರೆ ನನ್ನ ಕುಟುಂಬದ ಸಾಂತ್ವನ ,ಧೈರ್ಯದಿಂದ ನಾನು ಸಿನಿಮಾರಂಗದಲ್ಲೇ ಉಳಿಯಲು ಸಾಧ್ಯವಾಯಿತು ಎಂದಿದ್ದಾರೆ.
ನನಗೆ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ. ಈ ಕಾರಣಕ್ಕೂ ನಾನು ಟ್ರೋಲ್ ಆಗಿದ್ದೇನೆ. ಆದರೆ ಕೆಲವೊಮ್ಮೆ ಕೆಟ್ಟ ಭಾಷೆ,ಪದಗಳಿಂದ ಟ್ರೋಲ್ ಮಾಡಿದಾಗ ತುಂಬಾ ನೋವಾಗುತ್ತದೆ. ಎಷ್ಟೋ ಕೆಟ್ಟ ಪದದ ಅರ್ಥವನ್ನು ತಾಯಿಯಿಂದ ಕೇಳಿ ತಿಳಿದುಕೊಂಡು ಕಣ್ಣೀರು ಹಾಕಿದ್ದೇನೆ ಎಂದ ರಶ್ಮಿಕಾ ಮನಬಿಚ್ಚಿ ಮಾತನಾಡಿದ್ದಾರೆ. ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದಿದ್ದೇನೆ, ರೂಮ್ ನಲ್ಲಿ ಮುಖಮುಚ್ಚಿಕೊಂಡು ಅತ್ತಿದ್ದೇನೆ, ಎಷ್ಟೋ ವಿಚಾರಗಳನ್ನು ಕುಟುಂಬದವರಲ್ಲೂ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ತಮ್ಮ ಹಾಗೂ ನಟ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ, ಬ್ರೇಕ್ ಪ್ ಬಗ್ಗೆಯೂ ಮಾತನಾಡಿದ ರಶ್ಮಿಕಾ, ನಾನು ಎಲ್ಲರನ್ನೂ ನಂಬುತ್ತೇನೆ, ಎಲ್ಲರಿಗೂ ಪ್ರೀತಿಯನ್ನು ಕೊಡುತ್ತೇನೆ. ಆದರೆ ಕೆಲವರು ನನ್ನನ್ನು ನಾನಾಗಿ ಇರಲು ಬಿಡದೇ, ನನ್ನನ್ನು ಕಳೆದುಕೊಂಡರು ಎಂದು ಪರೋಕ್ಷವಾಗಿ ಬ್ರೇಕ್ ಪ್ ಕಾರಣ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ ಟ್ರೋಲರ್ ಗಳಿಗೂ ಬುದ್ಧಿ ಹೇಳಿರೋ ರಶ್ಮಿಕಾ ಇಡಿ ದಿನ ಟ್ರೋಲ್ ಮಾಡೋದ್ರಲ್ಲಿ ಸಮಯ ಹಾಳುಮಾಡಬೇಡಿ. ಬದುಕಿಗಾಗಿ ಹಣ ಸಂಪಾದಿಸಿ ದುಡಿಯಿರಿ ಎಂದಿದ್ದಾರೆ. ಒಟ್ಟಿನಲ್ಲಿ ಪುಷ್ಪ ಗೆಲುವಿನ ಸಂದರ್ಭದಲ್ಲಿ ರಶ್ಮಿಕಾ ಮನಬಿಚ್ಚಿ ಮಾತನಾಡಿದ್ದು, ಟ್ರೋಲ್‌ನಿಂದಲೇ ಸಿನಿಮಾ ರಂಗ ಬಿಡಲು ನಿರ್ಧರಿಸಿದ್ದೇ ಎಂಬ ಆಘಾತಕಾರಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ : ಶರ್ಟ್ ಬಿಚ್ಚೋದ್ಯಾಕೆ ಹುಡುಗರು ? ರಶ್ಮಿಕಾ ಪ್ರಶ್ನೆಗೆ ಬೆಚ್ಚಿದ ಪಡ್ಡೆ ಹೈಕಳು
ಇದನ್ನೂ ಓದಿ : ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ : ಅಭಿಮಾನಿಗಳ ಪ್ರೀತಿಗೆ ರಶ್ಮಿಕಾ ಧನ್ಯವಾದ
( Rashmika mandanna quiting movie film industry)