Bommai emotional speech : ಸ್ವ ಕ್ಷೇತ್ರದಲ್ಲಿ ಸಿಎಂ ಕಣ್ಣೀರು: ವಿದಾಯ ಭಾಷಣ ಮಾಡಿದ್ರಾ ಬೊಮ್ಮಾಯಿ ?!

ಹಾವೇರಿ : ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆಯಾಗುತ್ತಾ? ಇಂತಹದೊಂದು ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಚರ್ಚೆಯಾಗುತ್ತಿರುವಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಕಣ್ಣೀರು ನೊಂದಿಗೆ ಭಾವುಕರಾಗಿ‌ ಮಾತನಾಡಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಾ ಎಂಬ ಪ್ರಶ್ನೆಗೆ ಜೀವಬಂದಂತಾಗಿದೆ. ಬೆಳಗಾವಿ ಉದ್ವಿಘ್ನ, ಕರವೇ ಪ್ರೊಟೆಸ್ಟ್, ಅಧಿವೇಶನ ಇದೆಲ್ಲದರ ಮಧ್ಯೆ ಸ್ವ ಕ್ಷೇತ್ರ ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾಗಿ ಕಣ್ಣೀರು ( CM Basavaraj Bommai emotional speech) ಸುರಿಸುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದು, ಜನವರಿಯಲ್ಲಿ ಸಿಎಂ ಬದಲಾವಣೆಯಾಗೋದು ನಿಜವೇ ಎಂಬ ಸಂಗತಿಗೆ ಬಲಬಂದಿದೆ.

ಹಾವೇರಿಯ ಶಿಗ್ಗಾವಂನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಅನಾವರಣ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿ‌ ಮಾತನಾಡುತ್ತಿದ್ದರು. ಸ್ವ ಕ್ಷೇತ್ರದ ಕಾರ್ಯಕ್ರಮದಲ್ಲಿ ಕೊಂಚ ಭಾವುಕರಾದ ಸಿಎಂ ಯಾವುದು ಶಾಶ್ವತ ಅಲ್ಲ. ಈ ಬದುಕೇ ಶಾಶ್ವತ ಅಲ್ಲ. ನಾವು ಎಷ್ಟು ದಿನ ಇರ್ತೆವೋ ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ.

ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ್ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ್ ಬೊಮ್ಮಾಯಿ ಅನ್ನೋದು ಮಾತ್ರ ಶಾಶ್ವತ. ಅದರ ಹಿಂದಿನ ಪದನಾಮಗಳು ಶಾಶ್ವತವಲ್ಲ ಎಂದಿದ್ದಾರೆ. ನಾನು ನಿಮ್ಮೂರಿಗೆ ಬಂದಾಗ ನೀವು ರೊಟ್ಟಿ ತಿನ್ನಿಸಿದ್ದೀರಿ, ನವಣೆ ಅನ್ನ ಮಾಡಿ ಹಾಕಿದ್ದೀರಿ. ನಾನೇನೂ ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಎಂದು ಭಾವುಕರಾದ ಸಿಎಂ ಅಕ್ಷರಷಃ ಕಣ್ಣೀರಿಟ್ಟರು.

ಸಿಎಂ ಈ ಭಾವುಕ ಭಾಷಣ ರಾಜಕೀಯ ವಲಯ ದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಸಿಎಂ ಸದ್ಯದಲ್ಲೇ ತಮ್ಮ ಸ್ಥಾನ ತೊರೆಯಲಿದ್ದು ಅದಕ್ಕಾಗಿಯೇ ಕ್ಷೇತ್ರದ ಜನತೆ ಮುಂದೇ ನೋವು ತಾಳಲಾರದೇ ಭಾವುಕರಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳ ಹಿಂದೆಯಷ್ಟೇ ಹಿರಿಯ ಬಿಜೆಪಿ ನಾಯಕ ಹಾಗೂ ಸಚಿವ ಈಶ್ವರಪ್ಪ ಮುರುಗೇಶ್ ನಿರಾಣಿಯೂ ಸಿಎಂ ಆಗುತ್ತಾರೆ ಎಂದಿದ್ದರು.

ಈ‌ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ತೀವ್ರವಾದ ಕಾಲುನೋವಿನಿಂದ‌ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅಮೇರಿಕಾಕ್ಕೆ ತೆರಳಲಿದ್ದಾರೆ. ಅಲ್ಲಿಂದ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯೋ ಅಗತ್ಯವಿರೋದರಿಂದ ಜನವರಿ‌ಮೊದಲ ವಾರದಲ್ಲಿ ಸಿಎಂ ರಾಜೀನಾಮೆ‌ ನೀಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಮಾತಿಗೆ ಸಿಎಂ ಕಣ್ಣೀರು ಮತ್ತಷ್ಟು ಬಲ ತುಂಬಿದ್ದು ಹಾಗಿದ್ದರೇ ಮತ್ತೊಮ್ಮೆ ರಾಜ್ಯ ದಲ್ಲಿ ಸಿಎಂ ಬದಲಾವಣೆಯಾಗೋದು ಫಿಕ್ಸ್ ಎಂಬಂತಾಗಿದ್ದು ರಾಜ್ಯದಾದ್ಯಂತ ಹಾಗೂ ಬಿಜೆಪಿ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ : ಆರತಿ ಡೋಗ್ರಾ ಎಂಬ ಸ್ಪೂರ್ತಿದಾಯಕ ಐಎಎಸ್ ಅಧಿಕಾರಿ ಬಗ್ಗೆ ನೀವು ತಿಳಿದುಕೊಳ್ಳಬೇಕು

ಇದನ್ನೂ ಓದಿ : ನನಗೆ ಝೀರೋ ಟ್ರಾಫಿಕ್‌ ಬೇಡ ಎಂದ ಸಿಎಂ ಬೊಮ್ಮಾಯಿ

( CM Basavaraj Bommai emotional speech at haveri )

Comments are closed.