ಜನಮೆಚ್ಚುಗೆಯ ಕಾರ್ಯ ಮಾಡಿದ ರಶ್ಮಿಕಾ ಮಂದಣ್ಣ

0

ರಶ್ಮಿಕಾ ಮಂದಣ್ಣ.. ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟಿ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ.

ಆದ್ರೆ ಲಾಕ್ ಡೌನ್ ನಿಂದಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾಗಿರೋ ರಶ್ಮಿಕಾ ಸಾನ್ವಿ ಅಂತಾನೇ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದ್ದಾರೆ.

ತೆಲುಗು ಜೊತೆಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋ ಮೂಲಕ ಸದಾ ಬ್ಯುಸಿಯಾಗಿದ್ದಾರೆ.

ಎಲ್ಲೆಡೆ ಕೊರೊನಾ ಸೋಂಕಿ ತೀವ್ರತೆ ಹೆಚ್ಚುತ್ತಿದ್ದು, ರಶ್ಮಿಕಾ ಮಂದಣ್ಣ ಕೊರೊನಾ ವಿರುದ್ದ ಹೋರಾಟ ಮಾಡುತ್ತಿರುವವರಿಗೆ ನೆರವಾಗಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ತಮ್ಮ ಕುಟುಂಬದ ಒಡೆತನದ ಸೆರಿನಿಟಿ ಹಾಲ್ ನಲ್ಲಿ ಕೊರೊನಾ ವಾರಿಯರ್ಸ್ ಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿ ಹಾಗೂ ಪೊಲೀಸ್ ಸಿಬ್ಬಂಧಿಗಳಿಗೆ ಕಳೆದ 10 ದಿನಗಳಿಂದ ಊಟ ನೀಡುತ್ತಿದ್ದಾರೆ.

ನಿತ್ಯವೂ ಸುಮಾರು 150 ಮಂದಿಗೆ ಸಸ್ಯಾಹಾರ ಹಾಗೂ ಮಾಂಸಹಾರ ಊಟವನ್ನು ಉಣಬಡಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣರ ಕಾರ್ಯಕ್ಕೆ ಇದೀಗ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಇತರ ಸೆಲೆಬ್ರಿಟಿಗಳಿಗೂ ರಶ್ಮಿಕಾ ಮಾದರಿಯಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ

Leave A Reply

Your email address will not be published.