ಕೊರೋನಾ ಕೊನೆಯಾಗುವುದನ್ನೇ ಕಾಯ್ತಿದ್ದೇನೆ…! ಕ್ಯಾಪ್ಸನ್ ಜೊತೆ ರಶ್ಮಿಕಾ ಸ್ಪೆಶಲ್ ಪೋಟೋವೈರಲ್…!!

ಕೊರೋನಾ ಮನರಂಜನಾ ಕ್ಷೇತ್ರವನ್ನೇ ಸ್ಥಬ್ಧಗೊಳಿ ಸಿದೆ. ಹೀಗಾಗಿ ಬಾಲಿವುಡ್ ಸೇರಿದಂತೆ ಎಲ್ಲ ಸಿನಿಮಾ ಸ್ಟಾರ್ ಗಳು ಮನೆ ಸೇರಿದ್ದಾರೆ. ಸಮಯ ಕಳೆಯೋ ದಿಲ್ಲೆ ಥ್ರೋ ಬ್ಯಾಕ್ ಮೆಮೋರಿಸ್‌ ಪೋಟೋ ಶೇರಿಂಗ್ ಆರಂಭಿಸಿದ್ದು ಇದರಲ್ಲಿ ರಶ್ಮಿಕಾ ಪೋಟೋ ಮನಸೆಳೆಯುತ್ತಿದೆ.

ಹಾಲುಬಿಳುಪಿನ‌ ಸುಂದರಿ ರಶ್ಮಿಕಾ‌ಮಂದಣ್ಣ ಸಿನಿರಂಗ ಕ್ಕೆ‌ ಬರುತ್ತಿದ್ದಂತೆ ನ್ಯಾಶನಲ್ ಕ್ರಶ್ ಪಟ್ಟಕ್ಕೆ ಏರಿದವರು. ಹೀಗಾಗಿ ಸಾಲು ಸಾಲು ಅವಕಾಶ ಪಡೆದು ಈಗ ಬಾಲಿವುಡ್ ನಲ್ಲೂ ಮೂರು ‌ಸಿನಿಮಾಕ್ಕೆ ಸಹಿ ಹಾಕಿ‌ ಮಿಂಚುತ್ತಿದ್ದಾರೆ. ಇಂತಿಪ್ಪ ರಶ್ಮಿಕಾ ಲಾಕ್ ಡೌನ್ ನಲ್ಲೂ ಸುದ್ದಿಯಾಗಿದ್ದಾರೆ.

ಅಚ್ಚಕೆಂಪು ಡ್ರೆಸ್ ನಲ್ಲಿ  ತೆಗೆಯಲಾದ ಬಾಲ್ಯದ ಪೋಟೋವೊಂದನ್ನು ರಶ್ಮಿಕಾ ಶೇರ್ ಮಾಡಿದ್ದು, ಪೋಟೋದಲ್ಲಿ ರಶ್ಮಿಕಾ ನೀಡಿದ ಪೋಸ್ ಈ ಪರಿಸ್ಥಿತಿಗೆ ಸರಿಹೊಂದುವಂತಿದೆ.

https://www.instagram.com/p/CPFhMniJoZe/?utm_medium=copy_link

ಮುಗ್ಧ ಮುಖಭಾವದೊಂದಿಗೆ ಮಗು ಏನ್ನನ್ನೋ ಕಾಯುತ್ತಿರುವಂತೆ ರಶ್ಮಿಕಾ ನೀಡಿರುವ ಪೋಸ್ ಗೆ ಸ್ವತಃ ರಶ್ಮಿಕಾ ಕೊರೋನಾ ಹೋಗುವು ದನ್ನೆ ಕಾಯುತ್ತಿರುವಂತಿದೆ ಎಂದು ಕ್ಯಾಪ್ಸನ್‌ ನೀಡಿದ್ದಾರೆ. #ThrowbackThursday ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ರಶ್ಮಿಕಾ ಈ ಪೋಟೋ ಶೇರ್ ಮಾಡಿದ್ದು ತಮಿಳು,ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಕ್ಯೂಟ್ ಪೋಟೋ ಸದ್ಮಾಡ್ತಿದ್ದಾರೆರಶ್ಮಿಕಾ  ಚೈಲ್ಡ್ ವುಡ್ ಪೋಟೋನೋಡಿ ಅಭಿಮಾನಿಗಳು ಫುಲ್‌ ಖುಷಿ ಯಾಗಿದ್ದು, ರಶ್ಮಿಕಾ ಈಗ ಮಾತ್ರವಲ್ಲ ಬಾಲ್ಯದಲ್ಲೂ ಸಖತ್ ಕ್ಯೂಟ್ ಎಂದು ಸಂಭ್ರಮಿಸುತ್ತಿದ್ದಾರೆ.

ಕೇವಲ ರಶ್ಮಿಕಾ ಮಾತ್ರವಲ್ಲದೇ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಬಾಲ್ಯದ ಫೋಟೋಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿ ಲಾಕ್ ಡೌನ್ ಬಿಡುವಿನ ವೇಳೆಯನ್ನು ಎಂಜಾಯ್  ಮಾಡ್ತಿದ್ದಾರೆ.

Comments are closed.