ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಹುಟ್ಟುಹಬ್ಬ ಸಂಭ್ರಮ : ವಿಶ್‌ ಮಾಡಿದ ಪರಂವಾ ಸ್ಟುಡಿಯೋಸ್

ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣಗೆ ಇಂದು (ಏಪ್ರಿಲ್‌ 5) 27ನೇ ವರ್ಷದ ಹುಟ್ಟಹಬ್ಬ (Rashmika Mandanna’s birthday) ಸಂಭ್ರಮ. ಆರಂಭದ ದಿನಗಳಲ್ಲಿ ರೂಪದರ್ಶಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ರಶ್ಮಿಕಾ 2017ರಲ್ಲಿ ಪರಂವಾ ಸ್ಟುಡಿಯೋಸ್ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಿರಿಕ್ ಪಾರ್ಟಿಯ ನಂತರ ಕರ್ನಾಟಕ ಕ್ರಶ್ ಎನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ, ಇದೀಗ 2020ರಲ್ಲಿ ಗೂಗಲ್‌ ಇಂಡಿಯಾ ನ್ಯಾಷನಲ್ ಕ್ರಶ್ ಎಂದು ಕರೆದಿದೆ. ಸದ್ಯ ಪರಂವಾ ಸ್ಟುಡಿಯೋಸ್ ನಟಿ ರಶ್ಮಿಕಾ ಮಂದಣ್ಣನಿಗೆ ಬಹಳ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಪರಂವಾ ಸ್ಟುಡಿಯೋಸ್ ಟ್ವೀಟರ್‌ನಲ್ಲಿ, “ಚಂದದ ಹಾರೈಕೆ ರಶ್ಮಿಕಾ ಮಂದಣ್ಣಗೆ ಜನ್ಮದಿನದ ಶುಭಾಶಯಗಳು. ನಿಮ್ಮ ವರ್ಷವು ಸಂತೋಷ, ನಗು ಮತ್ತು ಯಶಸ್ಸಿನಿಂದ ಚಿಮುಕಿಸಲ್ಪಡಲಿ” ಎಂದು ಶುಭ ಕೋರಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದು, ಅದರಲ್ಲಿ ಒಬ್ಬರು “ಹಳ್ಳಿಯ ಜನ ಒಳ್ಳೆಯ ಜನ” ಎಂದು ಹೇಳಿದ್ದಾರೆ. ಇನ್ನೊಬ್ಬರು “ನೀವ್‌ ಕಣ್ರಯ್ಯ ದೊಡ್ಡ ಮಂದಿ ಅಂದ್ರ” ಎಂದು ವಿವಿಧ ರೀತಿಯ ಕಾಮೆಂಟ್‌ ಮಾಡಿದ್ದಾರೆ. ಯಾಕೆಂದರೆ ನಟಿ ರಶ್ಮಿಕಾ ಮಂದಣ್ಣ ಬೆಳೆದು ಹಾದಿಯನ್ನು ಮರೆತ್ತಿದ್ದಾರೆ ಎನ್ನುವುದು ಇವರ ಮಾತುಗಳಾಗಿದೆ.

ರಶ್ಮಿಕಾ ಅವರು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಕುಟುಂಬದಲ್ಲಿ ಜನಿಸಿದರು. ಇವರು ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿಧ್ಯಾಬ್ಯಾಸವನ್ನು ಪಡೆದರು, ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಿಂದ ಸೈಕಾಲಜಿ, ಜರ್ನಲಿಸಮ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ರಶ್ಮಿಕಾ ಅವರು 2014 ರಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಅದೇ ವರ್ಷ ಅವರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು ಹಾಗು ಕ್ಲೀನ್ ಅಂಡ್ ಕ್ಲಿಯರ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ನಂತರ ಅವರು ಲಾಮೋಡ್ ಬೆಂಗಳೂರಿನ ಅತ್ಯತ್ತಮ ರೂಪದರ್ಶಿ ಹುಡುಕಾಟ 2015 ರಲ್ಲಿ ಟಿ.ವಿ.ಸಿ ಯ ಪ್ರಶಸ್ತಿಯನ್ನು ಪಡೆದರು. ಈ ಸ್ಪರ್ಧೆಯಲ್ಲಿ ಅವರ ಸಿನಿಮಾಗಳು ಕಿರಿಕ್ ಪಾರ್ಟಿ ಸಿನಿಮಾದ ತಯಾರಕರನ್ನು ಆಕರ್ಷಿಸಿದೆ. ನಂತರ ಆಕೆಯು 2016 ರ ಆರಂಭದಲ್ಲಿ ನಾಯಕಿ ನಟಿಯಾಗಿ ನಟಿಸಿದರು.

ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು. “ಕಿರಿಕ್ ಪಾರ್ಟಿಯ ತಯಾರಕರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ 2014ರ ಸ್ಪರ್ಧೆಯಿಂದ ನನ್ನ ಸಿನಿಮಾವನ್ನು ಕಂಡಿದ್ದು, ಅದರಲ್ಲಿ ನಾನು ಕಾಲೇಜು ಸುತ್ತಿನಲ್ಲಿ ನೃತ್ಯ ಮಾಡುತ್ತಿದ್ದೆ. ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡರು. ನಾನು ಯಾವಾಗಲೂ ಸಿನಿಮಾಗಳಲ್ಲಿ ನಟಿಸಬೇಕೆಂದು ಬಯಸಿದ್ದೆ.” ಎಂದು ಹೇಳಿದ್ದಾರೆ. ನಟಿ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕರ್ಣ(ರಕ್ಷಿತ್ ಶೆಟ್ಟಿ)ನ ಕಾಲೇಜು ಪ್ರೇಯಸಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ನಟಿಸಿದರು.

ಈ ಸಿನಿಮಾವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿತ್ತು. ಜೊತೆಗೆ, ರಶ್ಮಿಕಾ ಅಭಿನಯವು ಮೆಚ್ಚುಗೆಯನ್ನು ಪಡೆದಿದೆ. ಹೀಗಾಗಿ 2016 ರ ಅತ್ಯುತ್ತಮ ನಟಿ (ಚೊಚ್ಚಲ) ಯಾಗಿ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ (SIIMA) ಪ್ರಶಸ್ತಿಯನ್ನು ಗೆದ್ದುಕೊಂಡರು.

ಇದನ್ನೂ ಓದಿ : Sudeep join BJP : ಕಮಲ ಮುಡಿದ ಕಿಚ್ಚ: ಬಿಜೆಪಿ ಸೇರಲಿದ್ದಾರಾ ನಟ ಸುದೀಪ್

ಸದ್ಯ ನಟಿ ಬಾಲಿವುಡ್‌, ಟಾಲಿವುಡ್‌ ವಿವಿಧ ಸಿನಿರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಸಮಂತಾ ಕೈ ಬಿಟ್ಟ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. “ರೈನ್‌ಬೋ” ಸಿನಿಮಾ ರಶ್ಮಿಕಾ ನಟಿಸುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಈ ಬಗ್ಗೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಇದನ್ನು ಹುಡುಗಿಯ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದೆ. ಈ ಪಾತ್ರವನ್ನು ಜೀವಂತಗೊಳಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ನಟಿ ರಶ್ಮಿಕಾ ಮಾತನಾಡಿದ್ದಾರೆ.

National crush Rashmika Mandanna’s birthday: Wished by Paramva Studios

Comments are closed.