Ashwini Puneeth Rajkumar : ಅಪ್ಪು ಮೊದಲ ವರ್ಷ ಪುಣ್ಯಸ್ಮರಣೆ : ವೈರಲ್ ಆಯ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಪತ್ರ

ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ ಕುಮಾರ್‌ (Ashwini Puneeth Rajkumar)ಇಹಲೋಕವನ್ನು ತ್ಯಜಿಸಿ ಇಂದು (ಅಕ್ಟೋಬರ್‌ 29) ಒಂದು ವರ್ಷ. ಅಪ್ಪು ಅಗಲಿಕೆಯ 365 ದಿನಗಳಲ್ಲಿ ಪ್ರತಿದಿನವು ಅವರ ನೆನಪಿನಲ್ಲಿ ಅಭಿಮಾನಿಗಳು ಹಾಗೂ ಕುಟುಂಬದವರು ಕಣ್ಣೀರಿನಲ್ಲಿ ದಿನ ಕಳೆದಿದ್ದಾರೆ. ಪುನೀತ್‌ ಇಲ್ಲ ಎನ್ನುವುದನ್ನು ಇಂದಿಗೂ ಯಾರಿದಂಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ನಗು ಮೊಗದಿಂದ ಚೈತನ್ಯ ಚಿಲುಮೆಯಿಂದ ಕೂಡಿರುವ ಅವರನ್ನು ಮರೆಯಲು ವರ್ಷ ಕಳೆದರೂ ಕಷ್ಟಕರವಾಗಿದೆ. ಮೊದಲಿನಿಂದಲೂ ಹೆಚ್ಚು ಮಾತನಾಡದೇ ಮೌನಿಯಾಗಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಅಪ್ಪುವಿನ ಮೊದಲ ವರ್ಷದ ಪುಣ್ಯತಿಥಿಯ ದಿನದಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಯನ್ನು ಹಂಚಿಕೊಂಡಿದ್ದಾರೆ. ಅಪ್ಪುವಿನ ನಿಧನದ ನಂತರ ಬೆಂಬಲಕ್ಕೆ ನಿಂತ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ “ನೆನಪಿನ ಸಾಗರದಲ್ಲಿ” ಎನ್ನುವ ಶೀರ್ಷಿಕೆಯೊಂದಿಗೆ ಪತ್ರವನ್ನು ಪ್ರಾರಂಭಿಸಿ, “ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೇ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸೇಹ್ನಿತರು ಹಾಗೂ ಕೋಟ್ಯಾಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು.” ಎನ್ನುವ ಮೂಲಕ ಕೊನೆಗೊಳಿಸಿದ್ದಾರೆ.
ಸದಾ ಕಾಲ ಪುನೀತ್‌ಗೆ ಬೆಂಬಲವಾಗಿದ್ದ ಅಶ್ವಿನಿಯವರು ಅಪ್ಪು ಇಲ್ಲದೇ ಒಂದು ವರ್ಷ ಕಣ್ಣೀರಿನಲ್ಲಿ ಮುಳುಗಿದ್ದರೂ, ತಮ್ಮ ಜವಬ್ದಾರಿ ಹಾಗೂ ಕರ್ತವ್ಯವನ್ನು ಮರೆಯಲಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ “ಗಂಧದಗುಡಿ” ಸಿನಿಮಾದ ಟ್ರೇಲರ್‌ನಿಂದ ಹಿಡಿದು ಬಿಡುಗಡೆಯವರೆಗೂ ಅವರ ಪಟ್ಟ ಶ್ರಮವಾಗಿರುತ್ತದೆ. “ಗಂಧದಗುಡಿ” ಸಿನಿಮಾದ ಫ್ರಿ ರಿಲೀಸ್‌ ಇವೆಂಟ್‌ನ್ನು ಬಹಳಷ್ಟು ಅದ್ದೂರಿಯಿಂದ ನಡೆಸಿಕೊಟ್ಟಿರುತ್ತಾರೆ.


ಕಂಠೀವ ಸ್ಟುಡಿಯೋದಲ್ಲಿರುವ ಅಪ್ಪುವಿನ ಸಮಾಧಿಯನ್ನು ವಿವಿಧ ಹೂ ಹಾಗೂ ಬೆಳಕಿನಿಂದ ಅಲಂಕರಿಸಲಾಗಿತ್ತು. ಅಪ್ಪುವಿನ ವಿವಿಧ ರೀತು ೭೫ ಕಟೌಟ್‌ಗಳನ್ನು ಹೂಗಳಿಂದ ಅಲಂಕರಿಸಲಾಗಿದೆ. ಅಷ್ಟೇ ಅಲ್ಲದೇ ನಿನ್ನೆ ಮಧ್ಯರಾತ್ರಿಯಿಂದ ಸಾಧು ಕೋಕಿಲ ಹಾಗೂ ತಂಡದವರಿಂದ ಗೀತನಮನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದು, ಅದರಲ್ಲಿ ಶಿವರಾಜ್‌ಕುಮಾರ್‌ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಒಂದಷ್ಟು ಹಾಡನ್ನು ಹಾಡಿರುತ್ತಾರೆ.

ಇದನ್ನೂ ಓದಿ : ashwini puneeth rajkumar:ಅಪ್ಪು ಮನೆಯಲ್ಲಿ ಒಪ್ಪಿದ್ರೂ, ಅಶ್ವಿನಿ ಮನೆಯಲ್ಲಿ ಒಪ್ಪಿರಲಿಲ್ಲ : ಹೀಗಿತ್ತು ಪುನೀತ್​​ ಮದುವೆ ಕಹಾನಿ

ಇದನ್ನೂ ಓದಿ : Punith Rajkumar : ಅಪ್ಪು ಜೀವನ ಸಾಧನೆ ಶಾಲಾ ಪಠ್ಯಕ್ಕೆ ಸೇರಿಸಿ : ಸಿಎಂ ಬೊಮ್ಮಾಯಿಗೆ ಅಭಿಮಾನಿಗಳ ಮನವಿ

ಇದನ್ನೂ ಓದಿ : puneeth rajkumar :ಅಪ್ಪು ಇಲ್ಲದ ಒಂದು ವರ್ಷ : ವಿಧಿ ಒಂದು ಪವಾಡ ಮಾಡಬಾರದೇ ಅಂತಿದ್ದಾರೆ ಕರುನಾಡಿನ ಜನ


ಇಂದು ಅಪ್ಪುವಿನ ಮೊದಲ ವರ್ಷದ ಪುಣ್ಯತಿಥಿಯಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ರವರ ಜೊತೆ ದೊಡ್ಮನೆ ಕುಟುಂಬದವರು ಸೇರಿ ಬೆಂಗಳೂರಿನ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆಯನ್ನು ಮಾಡಿದ್ದರು. ನಿನ್ನೆಯಿಂದಲೇ ಅಪ್ಪು ಸಮಾಧಿಯನ್ನು ನೋಡಲು ಅಭಿಮಾನಿಗಳಿಗೆ ಅವಕಾಶವನ್ನು ಕಲ್ಪಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಲ್ಲಿಗೆ ಬಂದಿರುವ ಎಲ್ಲಾ ಅಭಿಮಾನಿಗಳಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

Remembrance of Appu’s first year: Ashwini Puneeth Rajkumar’s letter went viral

Comments are closed.