ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಲವ್‌ ಕಹಾನಿ ಬಗ್ಗೆ ನಿಮಗೆಷ್ಟು ಗೊತ್ತು ?

ಸದ್ಯ ಕಾಂತಾರ ಸಿನಿಮಾ ಮೂಲಕ ಇಡೀ ದೇಶಕ್ಕೆ ಸಾಕಷ್ಟು ದೊಡ್ಡ ಮಟ್ಟದ ಪ್ರಶಂಸೆ ಗಿಟ್ಟಿಸಿಕೊಂಡಿರುವ ರಿಷಬ್ ಶೆಟ್ಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಜೋರಾಗಿವೆ. ಕೇವಲ ಸಿನಿಮಾಗಳ ಕುರಿತಾಗಿ ಮಾತ್ರವಲ್ಲದೇ ವೈಯಕ್ತಿಕ ವಿಷಯಗಳ ಬಗ್ಗೆಯೂ ರಿಷಬ್ ಶೆಟ್ಟಿ ಸುದ್ದಿ ಮಾಡಿದ್ದರು. ಕಾಂತಾರ ಸಕ್ಸಸ್ ಆದ ಬೆನ್ನಲ್ಲೇ ರಿಷಬ್ ಶೆಟ್ಟಿ ತಮ್ಮ ಮಗಳ ಫೋಟೊವನ್ನು ರಿವೀಲ್ ಮಾಡಿದ್ದರು. ಈ ಮೂಲಕ ರಿಷಬ್ ಶೆಟ್ಟಿ ಕುಟುಂಬದ ಬಗ್ಗೆ ಗೂಗಲ್‌ನಲ್ಲಿ ಹಲವರು ಹುಡುಕಿದ್ದಾರೆ. ಇನ್ನು ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಹ ನಟಿಸಿದ್ದ ವಿಚಾರವೂ ಸಹ ವೈರಲ್ ಆಗಿ ಈ ಜೋಡಿ ನಡುವೆ ಪ್ರೀತಿ ಹುಟ್ಟಿದ್ದು (Rishabh Pragati Shetty Love Story) ಹೇಗೆ ಎಂಬುದೂ ಸಹ ಹೊರಬಿದ್ದಿದೆ.

ಹೌದು, ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಪ್ರೀತಿ ಹೇಗೆ ಹುಟ್ಟಿತು ಎಂಬುದನ್ನು ಎಲ್ಲಿಯೂ ಹೆಚ್ಚಾಗಿ ಹೇಳಿಕೊಳ್ಳದ ಈ ಜೋಡಿ ಕಾಂತಾರ ಸಮಯದಲ್ಲಿ ನಡೆದಿದ್ದ ಸಂದರ್ಶನಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿತ್ತು. ಪ್ರಗತಿ ಶೆಟ್ಟಿ ತನ್ನ ಹಾಗೂ ರಿಷಬ್ ಶೆಟ್ಟಿ ಪರಿಚಯ ಹೇಗಾಯ್ತು, ಇಬ್ಬರ ನಡುವೆ ಸ್ನೇಹ ಹೇಗೆ ಬೆಳೆಯಿತು ಹಾಗೂ ಅದಕ್ಕೆ ಕಾರಣವೇನು ಮತ್ತು ಪ್ರೀತಿ ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ತಿಳಿಸಿದ್ದಾರೆ.

ಮೊದಲಿಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟನೆ ಮಾಡಿದ್ದ ರಿಷಬ್ ಶೆಟ್ಟಿ ಮೊದಲಿಗೆ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಗೆ ರಿಕ್ಕಿ ಎಂಬ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಪಯಣ ಶುರು ಮಾಡಿದ್ದರು. ಈ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ತಾನು ಸಿನಿಮಾ ನೋಡಲು ಸ್ನೇಹಿತೆಯರೊಡನೆ ಸಿನಿಮಂದಿರಕ್ಕೆ ಬಂದಾಗ ತನ್ನ ಗೆಳತಿಯರು ರಿಷಬ್ ಶೆಟ್ಟಿ ಅವರನ್ನು ತೋರಿಸಿ ಅವರೇ ನಿರ್ದೇಶಕರು ಎಂದು ಹೇಳಿದರು. ಆಗ ಅವರ ಹೆಸರೂ ಸಹ ತನಗೆ ತಿಳಿದಿರಲಿಲ್ಲ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡರು.

ಇನ್ನು ಉಳಿದವರು ಕಂಡಂತೆ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿ ರಿಕ್ಕಿ ನೋಡಲು ಸಿನಿಮಂದಿರಕ್ಕೆ ಬಂದು ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಹೌದು, ಎಲ್ಲರೂ ರಕ್ಷಿತ್ ಶೆಟ್ಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿ ಬಳಿ ತೆರಳಿದೆವು ಹಾಗೂ ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ಅವರ ಬಳಿ ನಮ್ಮ ಊರಿನವರು ನೀವು, ಅಲ್ಲಿಂದ ಬಂದು ಸಿನಿರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ, ಅದೇ ಮೊದಲ ಬಾರಿಗೆ ಅವರ ಜತೆ ನಾನು ಮಾತನಾಡಿದ್ದು, ಅವರ ಹೆಸರೂ ಸಹ ತಿಳಿದಿದ್ದು ಎಂದು ಪ್ರಗತಿ ಶೆಟ್ಟಿ ತಿಳಿಸಿದರು.

ಇದನ್ನೂ ಓದಿ : Deepika Das : ದುಬೈ ಟ್ರಿಪ್‌ನಲ್ಲಿ ಕ್ರಿಸ್ ಗೇಲ್ ಜತೆಗಿನ ಫೋಟೊ ಹಂಚಿಕೊಂಡ ದೀಪಿಕಾ ದಾಸ್ : ವೈರಲ್‌ ಆಯ್ತು ಪೋಟೋ

ಇದನ್ನೂ ಓದಿ : ನಾಲ್ಕೂವರೆ ತಿಂಗಳ ಬಳಿಕ ಮಗಳೊಂದಿಗೆ ಕಾಣಿಸಿಕೊಂಡ ಧ್ರುವ ಸರ್ಜಾ ಪತ್ನಿ : ಪ್ರಿನ್ಸ್ ಫ್ಯಾನ್ಸ್ ದಿಲ್ ಖುಷ್!

ಇದನ್ನೂ ಓದಿ : ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿರುವ ಸ್ಯಾಂಡಲ್‌ವುಡ್‌ನ ಲವ್‌ಸ್ಟೋರಿ ಸಿನಿಮಾಗಳು ಯಾವುವು ಗೊತ್ತಾ ?

ಇನ್ನು ಆ ದಿನದಂದು ಪ್ರಗತಿ ಶೆಟ್ಟಿ ರಿಷಬ್ ಜತೆ ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೊವನ್ನು ಕಳೆದ ಬಾರಿಯ ವಿವಾಹ ವಾರ್ಷಿಕೋತ್ಸವದ ದಿನದಂದು ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು. ಹೀಗೆ ಸಿನಿಮಂದಿರದಲ್ಲಿ ಪ್ರಗತಿ ಹೇಳಿದ ಮಾತುಗಳಿಗೆ ಮಾರುಹೋದ ರಿಷಬ್ ಶೆಟ್ಟಿ, ಪ್ರಗತಿಯ ಫೇಸ್‌ಬುಕ್ ಖಾತೆ ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಇಬ್ಬರ ನಡುವೆ ಚಾಟಿಂಗ್ ನಡೆದು, ಸ್ನೇಹ ಬೆಳೆದಿತ್ತು. ಹೀಗೆ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿ ಒಂದು ವರ್ಷದ ಒಳಗೇ ಇಬ್ಬರೂ ವಿವಾಹವಾದೆವು ಎಂದು ಪ್ರಗತಿ ಹೇಳಿಕೊಂಡಿದ್ದರು. ಸದ್ಯ ಈ ಇಬ್ಬರೂ ವಿವಾಹವಾಗಿ ಆರು ವರ್ಷಗಳು ಕಳೆದಿದ್ದು, ಇಬ್ಬರು ಮಕ್ಕಳೂ ಸಹ ಇದ್ದಾರೆ.

Rishabh Pragati Shetty Love Story: How much do you know about Sandalwood actor Rishabh Shetty’s love story?

Comments are closed.