Bhadravati steel factory closed: ಮೈಸೂರು ಒಡೆಯರ್‌ ಸ್ಥಾಪಿಸಿದ್ದ ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: (Bhadravati steel factory closed) ನೂರೈದು ವರ್ಷ ಹಳೆಯದಾದ ಮೈಸೂರು ಒಡೆಯರ್‌ ಸ್ಥಾಪಿಸಿದ್ದ ಭದ್ರಾವತಿ ಕಬ್ಬಿಣ ಉಕ್ಕಿನ ಕಾರ್ಖಾನೆಯನ್ನು ಮುಚ್ಚಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಭಾಗವತ್‌ ತಿಳಿಸಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಭಾಗವತ್‌, ನಷ್ಟದ ಕಾರಣದಿಂದ ಭದ್ರಾವತಿ ಕಬ್ಬಿಣ ಉಕ್ಕಿನ ಕಾರ್ಖಾನೆಗೆ ಬೀಗ ಹಾಕಲು ನಿರ್ಧರಿಸಲಾಗಿದೆ. ಕಾರ್ಖಾನೆ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಕಾರ್ಖಾನೆ ಮುಚ್ಚಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ನಷ್ಟದಲ್ಲಿರುವ ಕಾರ್ಖಾನೆಯನ್ನು ಸರಕಾರ ಖಾಸಗೀಕರಣಗೊಳಿಸಲು ಯೋಜಿಸಿತ್ತು. ಅದರಂತೆ ೨೦೧೯ ರ ಜುಲೈನಲ್ಲಿ ಕಾರ್ಖಾನೆಯ ಎಲ್ಲಾ ಪಾಲನ್ನು ಮಾರಾಟ ಮಾಡಲು ಟೆಂಡರ್‌ ಕರೆಯಲಾಗಿತ್ತು. ಆದರೆ ನಷ್ಟದಲ್ಲಿರುವ ಘಟಕವನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ತೀರಾ ಹಳೆಯದಾದ ಕಾರ್ಖಾನೆಯ ಪುರುಜ್ಜೀವನಕ್ಕೆ ಹಲವಾರು ಪ್ರಯತ್ನಗಳು ನಡೆದರು ಕೂಡ ಇದನ್ನು ಮುನ್ನಡೆಸಲು ಯಾರೂ ಸಿದ್ದರಿಲ್ಲ. ಈ ಕಾರಣದಿಂದಾಗಿ ಈ ಘಟಕವನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

ಇದರಲ್ಲಿರುವ ಹಳೆಯ ಯಂತ್ರೋಪಕರಣಗಳು, ನಿರಂತರ ನಷ್ಟಮ ದೀರ್ಘಕಾಲದವರೆಗೆ ಇಲ್ಲಿಮ ಯಂತ್ರಗಳು ಸ್ಥಗಿತಗೊಂಡ ಕಾರಣ ಈ ಘಟಕವು ಅನುತ್ಪಾದಿತವಾಗಿದೆ. ಆದ್ದರಿಂದ ಇದನ್ನು ಮುಚ್ಚುವುದೊಂದೆ ದಾರಿ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೇ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಒಪ್ಪಿಕೊಂಡಿದ್ದು, ಕಾರ್ಖಾನೆಗೆ ಕಬ್ಬಿಣದ ಅದಿರಿನ ಮೂಲ ಇಲ್ಲ ಎಂಬ ಕಾರಣ ನೀಡಿ ಮುಚ್ಚಲು ಮುಂದಾಗಿದೆ. ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿದ್ದರೂ ಕೂಡ ಇದಕ್ಕೆ ಗಣಿ ಅಲಭ್ಯತೆ ಕಾರಣ ನೀಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಇದಕ್ಕೂ ಮೊದಲು ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಸಭೆಯಲ್ಲಿ ಕಾರ್ಖಾನೆ ಮುಚ್ಚಲು ಸಲ್ಲಿಸಲಾದ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿತ್ತು. ಕಾರ್ಮಿಕ ಸಂಘಟನೆಯಾದ ವಿಐಎಸ್ ಎಸ್‌ ಗೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನೂ ಕೂಡ ನೀಡಲಾಗಿತ್ತು.

ಇದನ್ನೂ ಓದಿ : ಗುಡ್ ನ್ಯೂಸ್ : ಶೇ.50% ಸಂಚಾರ ದಂಡ ಡಿಸ್ಕೌಂಟ್ ಅವಧಿ 2 ವಾರ ವಿಸ್ತರಣೆ

ಇನ್ನೂ ಈ ಕಾರ್ಖಾನೆಯನ್ನು ೧೯೧೮-೧೯ ರಲ್ಲಿ ಆರಂಭಿಸಲಾಗಿತ್ತು. ಆರಂಭದಲ್ಲಿ ಹತ್ತೊಂಬತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ತಯಾರಾದ ಕಬ್ಬಿಣ ಹಾಗೂ ಉಕ್ಕು ದೇಶದ ರಕ್ಷಣಾ ಇಲಾಖೆಗೆ ನೀಡಲಾಗುತ್ತಿತ್ತು. ಕಾರ್ಖಾನೆ ಇನ್ನಷ್ಟು ಅಭಿವೃದ್ದಿ ಕಾಣಲಿ ಎಂಬ ಕಾರಣಕ್ಕೆ ರಾಜ್ಯ ಸರಕಾರ ೧೯೮೯-೯೦ ರಲ್ಲಿ ಕೆಂದ್ರ ಸರಕಾರ ಮತ್ತು ಉಕ್ಕು ಪ್ರಾಧಿಕಾರಕ್ಕೆ ಕೇವಲ ಒಂದು ರೂಪಾಯಿಗೆ ಕಾರ್ಖಾನೆ ಹಾಗೂ ಇದಕ್ಕೆ ಸೇಋಿದ ಎಲ್ಲಾ ಆಸ್ತಿಗಳನ್ನು ನೀಡಿತ್ತು. ಆದರೆ ಈವರೆಗೂ ಯಾವುದೇ ಪ್ರಗತಿ ಕಾಣದೇ ಕಾರ್ಖಾನೆ ತುಕ್ಕು ಹಿಡಿದಿದ್ದು, ನೂರ ಎರಡು ವರ್ಷ ಇತಿಹಾಸ ಹೊಂದಿದ ಈ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕಾರ್ಮಿಕರು ಸತತ ಹತ್ತು ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರು.

Bhadravati steel factory closed: The central government has decided to close the Bhadravati steel factory established by Mysore Wodeyar

Comments are closed.