Rishabh Shetty : ರಿಷಬ್​ ಶೆಟ್ಟಿ ಮನೆಗೆ ವಿಶೇಷ ಅತಿಥಿ ಸೇರ್ಪಡೆ : ಖುಷಿ ವಿಚಾರ ಹಂಚಿಕೊಂಡ ಪ್ರಗತಿ ಶೆಟ್ಟಿ

Rishabh Shetty : ಕನ್ನಡ ಚಿತ್ರರಂಗದಲ್ಲಿ ಸಧ್ಯ ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ ಹಾಗೂ ರಾಜ್​ ಬಿ ಶೆಟ್ಟಿ ಅತ್ಯಂತ ಭದ್ರವಾಗಿ ನೆಲೆಯೂರಿದ್ದಾರೆ. ಕರಾವಳಿಯ ಸಣ್ಣ ಸಣ್ಣ ಊರುಗಳಿಂದ ದೊಡ್ಡ ಕನಸನ್ನು ಹೊತ್ತು ಗಾಂಧಿ ನಗರಕ್ಕೆ ಕಾಲಿಟ್ಟ ಇವರು ಇದೀಗ ಸ್ಯಾಂಡಲ್​ವುಡ್​ನ ಹೆಸರಾಂತ ನಟ, ನಿರ್ಮಾಪಕ ಹಾಗೂ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಳ್ತಿದ್ದಾರೆ. ಗರುಡಗಮನ ವೃಷಭ ವಾಹನ ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ರಿಷಭ್​ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಮೂಲಕ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ಕಮಾಲ್​ ಮಾಡ್ತಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಅತ್ಯಂತ ವಿಭಿನ್ನವಾದ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಮನೆಗೆ ಇದೀಗ ಹೊಸ ಅತಿಥಿ ಆಗಮನವಾಗಿದೆ. ಹೊಸ ಐಷಾರಾಮಿ ಆಡಿ ಕ್ಯೂ 7 ಕಾರನ್ನು ರಿಷಬ್​ ಶೆಟ್ಟಿ ಖರೀದಿ ಮಾಡಿದ್ದಾರೆ. ದೊಡ್ಡ ಸೆಲೆಬ್ರಿಟಿಗಳು ಖರೀದಿ ಮಾಡುತ್ತಿರುವ ಈ ಎಸ್​ಯುವಿ ಕಾರು ಇದೀಗ ರಿಷಬ್​ ಶೆಟ್ಟಿ ಮನೆಗೂ ಸೇರಿದೆ.


ಐಷಾರಾಮಿ ಆಡಿ ಕ್ಯೂ 7 ಕಾರಿನ ಡೆಲಿವರಿ ಪಡೆದಿರುವ ರಿಷಬ್​ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಇದರ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತ್ನಿ ಸಮೇತರಾಗಿ ರಿಷಭ್​ ಶೆಟ್ಟಿ ಈ ಕಾರಿನ ಕೀಯನ್ನು ಪಡೆದಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ಹಂಚಿಕೊಂಡಿರುವ ಪ್ರಗತಿ ಶೆಟ್ಟಿ ನಿಮ್ಮ ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವಕ್ಕೆ ನಾನು ಎಂದಿಗೂ ಹೆಮ್ಮೆ ಪಡುತ್ತೇನೆ. ನಮ್ಮ ಕುಟುಂಬಕ್ಕೆ ಅತ್ಯಂತ ನೆಮ್ಮದಿ ಹಾಗೂ ಪ್ರೀತಿಯನ್ನು ತುಂಬಿರುವ ನಿಮಗೆ ಧನ್ಯವಾದಗಳು ಎಂದು ಪ್ರಗತಿ ಶೆಟ್ಟಿ ಶೀರ್ಷಿಕೆ ನೀಡಿದ್ದಾರೆ.


ಕಿರಿಕ್​ ಪಾರ್ಟಿ ಸಿನಿಮಾದ ಯಶಸ್ಸಿನ ಬಳಿಕ ರಿಷಬ್​ ಶೆಟ್ಟಿ ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ. ಸಹಿಪ್ರಾ ಶಾಲೆ ಕಾಸರಗೋಡು, ಬೆಲ್​ ಬಾಟಂ ಹೀಗೆ ಸಾಕಷ್ಟು ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ರಿಷಬ್​ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಹರಿಕತೆ ಅಲ್ಲ ಗಿರಿಕಥೆ ಸಿನಿಮಾ ಥಿಯೇಟರ್​ನಲ್ಲಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಯಲ್ಲಿ ಬೆಲ್ ಬಾಟಂ 2′, ‘ಮಹಾನೀಯರೆ ಮಹಿಳೆಯರೇ’, ‘ಕಾಂತರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಿಷಬ್​ ಬ್ಯುಸಿಯಾಗಿದ್ದಾರೆ.

ಇದನ್ನು ಓದಿ : Pregnant minor dies : ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತೆ ಸಾವು : ಬಾಯ್​ಫ್ರೆಂಡ್​ ಬಂಧನ

ಇದನ್ನೂ ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

Rishabh Shetty buys an Audi car

Comments are closed.