Asha bhat Sudha murthy : ಇನ್ಪೋಸಿಸ್‌ ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ ರಾಬರ್ಟ್‌ ಬೆಡಗಿ ಆಶಾ ಭಟ್‌ : Photo Viral

ಸಿನಿಮಾ‌ ನಟಿಯರು ಸಾಮಾನ್ಯವಾಗಿ ಸಿನಿಮಾ ನಟಿಯರನ್ನೇ ಆದರ್ಶವಾಗಿಟ್ಟುಕೊಳ್ಳೋದು ಹಾಗೂ ಅವರನ್ನೇ ಅನುಸರಿಸೋದು ಕಾಮನ್. ಆದರೆ ಈ ನಟಿಮಣಿ ಮಾತ್ರ ತಮ್ಮ ಆದರ್ಶವಾಗಿರೋ ಮಹಿಳೆಯನ್ನು ಭೇಟಿ ಮಾಡಿದ ಖುಷಿಯಲ್ಲಿದ್ದು, ಪೋಟೋನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಹೌದು, ರಾಬರ್ಟ್ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಅಪ್ಪಟ ಕನ್ನಡತಿ ನಟಿ ಆಶಾ ಭಟ್ (Asha bhat) ಸದ್ಯ ಬಿಡುವಾಗಿದ್ದು, ತಮ್ಮ ಪ್ರತಿಭೆಯನ್ನು ಅನಾವರಣ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಮಾ ರಾಮಾ ಎನ್ನಿರೋ ಎಂದು ಸುಶ್ರಾವ್ಯವಾಗಿ ಹಾಡಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನಗೆದ್ದಿದ್ದ ನಟಿ ಆಶಾ ಭಟ್ ಈಗ ತಮ್ಮ ನೆಚ್ಚಿನ ಮಹಿಳೆ, ತಮಗೆ ಆದರ್ಶವಾಗಿರೋ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ (Sudha murthy) ಯವರನ್ನು ಭೇಟಿ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ ಈವೆಂಟ್ ವೊಂದರದಲ್ಲಿ ಸುಧಾಮೂರ್ತಿಯವರನ್ನು ಭೇಟಿ ಮಾಡಿದ ನಟಿ ಅಶಾ ಭಟ್, ಅವರ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ. ಮಾತ್ರವಲ್ಲ ಸುಧಾಮೂರ್ತಿ ಅಮ್ಮನವರು ತಮಗೆ ಎಷ್ಟು ಇಷ್ಟ ಎಂಬುದನ್ನು ಆಶಾ ಭಟ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು ಪೋಸ್ಟ್ ಹಾಗೂ ಪೋಟೋ ಎರಡೂ ಸಖತ್ ವೈರಲ್ ಆಗಿದೆ.

ನನ್ನನ್ನು ಸದಾ ಇನ್ಸಸ್ಪೈಯರ್ ಮಾಡೋ ಮಹಿಳೆ ಎಂದು ಸುಧಾಮೂರ್ತಿ ಅಮ್ಮನವರು ಎಂದು ಉಲ್ಲೇಖಿಸಿರುವ ಆಶಾ ಭಟ್, ನಾವು ಅಡುಗೆಯಿಂದ ಆರಂಭಿಸಿ ಸಿನಿಮಾ, ಫ್ಯಾಶನ್, ಮಾರ್ಕೆಟ್ ಎಲ್ಲ ವಿಚಾರವನ್ನು ಚರ್ಚಿಸಿದ್ದೇವೆ ಎಂಬುದನ್ನು ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಶೇರ್ ಮಾಡಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ಕಣ್ಣೇ ಹೊಡೆಯಾಕ್ ಎಂದು ಮೊದಲ‌ ಚಿತ್ರದಲ್ಲೇ ಚಾಲೆಂಜಿಂಗ್‌ಸ್ಟಾರ್ ದರ್ಶನ್ ಜೊತೆ ಕಾಣಿಸಿಕೊಂಡಿದ್ದು ಸಖತ್ ಸದ್ದು ಮಾಡಿದ್ದರು. ಮಿಸ್ ಸುಪ್ರಾ ಇಂಟರ್ ನ್ಯಾಶನಲ್ ವಿನ್ನರ್ ಆಗಿರೋ ಆಶಾ ಭಟ್, ಮೂಲತಃ ಶಿವಮೊಗ್ಗದ ಭದ್ರಾವತಿಯವರಾಗಿದ್ದಾರೆ.

ಕೇವಲ ನಟನೆ ಮಾತ್ರವಲ್ಲ ಶಾಸ್ತ್ರೀಯ ಸಂಗೀತ ಸೇರಿದಂತೆ ಎಲ್ಲ ಬಗ್ಗೆಯ ಸಂಗೀತ ಪ್ರಾಕಾರದಲ್ಲೂ ಪರಿಣಿತಿ ಸಾಧಿಸಿರೋ ಆಶಾ ಭಟ್, ಶಾಸ್ತ್ರೀಯ ನೃತ್ಯವನ್ನು ಕೂಡ ಅಭ್ಯಸಿಸಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಆಗಾಗ ಹಾಡುಗಳನ್ನು ಹಾಡಿ ವಿಡಿಯೋವನ್ನು ಸೋಷಿಯಲ್ ಶೇರ್ ಮಾಡಿಕೊಳ್ಳೋ ಆಶಾ ಭಟ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ಸಖತ್ ಮಿಂಚಿದ್ದರೂ ಸದ್ಯ ಆಶಾ ಭಟ್ ಗೆ ಯಾವುದೇ ಹೇಳಿಕೊಳ್ಳುವಂತ ಅವಕಾಶ ಕೂಡ ಲಭ್ಯವಾಗಿಲ್ಲ.

ಇದನ್ನೂ ಓದಿ : ದೇಶಭಕ್ತರಿಗೆ ಸಿಹಿಸುದ್ದಿ: ತೆರೆಗೆ ಬರಲಿದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ

ಇದನ್ನೂ ಓದಿ : ಪದೇ ಪದೇ ದೀಪಿಕಾ ಪಡುಕೋಣೆ ಸ್ಟೈಲ್​ ಕಾಪಿ ಮಾಡ್ತಿದ್ದಾರೆ ಆಲಿಯಾ : ಕಾಲೆಳೆದ ನೆಟ್ಟಿಗರು

Robert asha bhat, who met infosys sudha murthy

Comments are closed.