KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?

ನಟ ಯಶ್ (Actor Yash) ತಮ್ಮ ಕೆಜಿಎಫ್ (KGF Film) ಚಿತ್ರದ ಮೂಲಕ ಭಾರತ ಚಿತ್ರರಂಗವೇ ಇತ್ತ ತಿರುಗುವಂತೆ ಮಾಡಿದ್ದು ಇತಿಹಾಸ. ಕೆಜಿಎಫ್ 1 (KGF Chapter 1), ಅಮೋಘ ಗೆಲುವಿನ ನಂತರ ಕೆಜಿಎಫ್ ಚಾಪ್ಟರ್ 2 ಈಗ ಮತ್ತೆ ಸದ್ದು ಮಾಡುತ್ತಿದೆ. ಇದು ಯಶ್ ಸಿನಿ ಬದುಕಿನ ಮತ್ತೊಂದು ಮೈಲಿಗಲ್ಲು ಎನ್ನುವ ಮಾತುಗಳೂ ಈಗ ಕೇಳಿಬರುತ್ತಿವೆ. ಇದೆಲ್ಲ ಸರಿ, ಕೆಜಿಎಫ್ ಚಾಪ್ಟರ್ 2 (KGF Chapter 2) ನಂತರ ಯಶ್ ಏನು ಮಾಡ್ತಾರೆ, ಎಂಥ ಸಿನಿಮಾ ಒಪ್ಪಿಕೊಳ್ತಾರೆ, ಎಂಥ ಕಥೆ ಆಯ್ಕೆ ಮಾಡಿಕೊಳ್ತಾರೆ- ಯಶ್ ಗೆ ಅಲ್ಲ, ದೊಡ್ಡ ಯಶಸ್ಸಿನ ನಂತರ ಪ್ರತಿಯೊಬ್ಬರಿಗೆ ಇಂಥ ಸಂದರ್ಭ ಎದುರಾಗುತ್ತದೆ. ಈಗ ಯಶ್ ಸರದಿ (KGF Yash New Project) ಅಷ್ಟೇ.

ಇದಕ್ಕೆ ಯಶ್ ಕೊಡುವ ಉತ್ತರ- “ಮುಂದೆ ಬರುವ ಚಿತ್ರ ಕೂಡ ಇಂಥದ್ದೇ, ಎಲ್ಲರೂ ತಿರುಗಿ ನೋಡುವಂತೆಯೇ ಇರಬೇಕು. ಈ ರೀತಿಯ ಚಿತ್ರ ಮಾಡಬೇಕು ಅಂತಿದ್ದೀನಿ. ಇಂಥ ಚಿತ್ರ ಮಾಡೋಕೆ ಯಾರ ಒತ್ತಡಕ್ಕೂ, ಮುಲಾಜಿಗೂ ಒಳಗಾಗಬಾರದು. ಹಾಗಾಗಿ, ಯಶಸ್ಸಿನ ಉತ್ತುಂಗದಲ್ಲಿ ನಿಂತು, ನಾನು ಹೀಗೆ ಮಾಡ್ತೀನಿ, ಹಾಗೇ ಮಾಡ್ತೀನಿ ಅಂತೆಲ್ಲ ಹೇಳಿಕೊಳ್ಳುವುದು ಥರವಲ್ಲ. ನಾನು ಮಾಡುವ ಸಿನಿಮಾನೇ ಅವನ್ನೆಲ್ಲ ಹೇಳುವಂತಿರಬೇಕು’ ಅಂತಾರೆ ಯಶ್.

ಅಂದರೆ, ಯಶ್ ಒಳಗೂ ಮುಂದೇನು ಅನ್ನೋ ಭವಿಷ್ಯದ ಪ್ರಶ್ನೆ ಎದ್ದಿದೆ. ಅದಕ್ಕೆ ತಕ್ಕ ಪ್ರಯತ್ನಗಳು ಈಗಾಗಲೇ ಶುರುವಾಗಿದೆ ಅಂತಲೇ ಅರ್ಥ.
‘ಹೌದು, ಮನಸ್ಸಲ್ಲಿ ಈಗಾಗಾಲೇ ಶುರುವಾಗಿದೆ. ದೊಡ್ಡದಾಗಿ, ಎಲ್ಲರೂ ತಿರುಗಿ ನೋಡುವಂತೆ ಮಾಡುವ ಪ್ಲಾನು ಇದೆ. ಅದರ ವಿವವರಗಳನ್ನು ಈಗಲೇ ಬಿಚ್ಚಿಡುವುದು ಥರವಲ್ಲ. ಎಲ್ಲವೂ ಪಕ್ಕಾ ಆದ ಮೇಲೆ ಆ ಬಗ್ಗೆ ಮಾತನಾಡುವುದು ಸರಿ ಅನಿಸುತ್ತದೆ. ಕೆಜಿಎಫ್ 2 ಸಿನಿಮಾ ಹೇಗೆ ಬಂದಿದೆ ಅಂಥ ನನಗೆ ಗೊತ್ತು. ಹೀಗಾಗಿ, ಮುಂದಿನ ಸಿನಿಮಾ ಕೂಡ ಇದಕ್ಕಿಂತ ವಿಭಿನ್ನವಾಗಿ ಮಾಡಬೇಕು ಅನ್ನೋ ಯೋಚನೆ ಈಗ ಶುರುವಾಗಿದೆ’ ಅಂತ ವಿವರಣೆ ಕೊಡುತ್ತಾರೆ.

ಯಶ್ ಗೆ ಅದ್ಭುತ ಸಿನಿಮಾ ಮಾಡುವ ಆಲೋಚನೆ ಇದೆ. ಆದರೆ, ಹೀಗೇ ಮಾಡಬೇಕು ಅನ್ನೋ ಒತ್ತಡವಿಲ್ಲ. ಸಿನಿಮಾ ಮಾಡಿ ಹಣ ಮಾಡಬೇಕು ಅನ್ನೋ ಉದ್ದೇಶವೂ ಅವರಿಗಿಲ್ಲವಂತೆ.

‘ಮನೆಯಲ್ಲೂ, ಹೊರಗಡೆಯೂ ನನ್ನ ಮೇಲೆ ಒತ್ತಡ ಇಲ್ಲ. ಹೀಗಾಗಿ, ದುಡ್ಡಿಗಾಗಿ, ಸಿನಿಮಾ ಸಂಖ್ಯೆ ಹೆಚ್ಚು ಮಾಡುವುದಕ್ಕೆ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ಜವಾಬ್ದಾರಿಯಿಂದ ಸಿನಿಮಾಗಳನ್ನು ತಗೋತೀನಿ’ ಅಂದರು ಯಶ್. ಯಶ್ ಕೆಜಿಎಫ್ ನಂತರ ಬಾಲಿವುಡ್ ನ ದೊಡ್ಡ ಸಂಸ್ಥೆಗಳೂ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದವು ಅನ್ನೋದೇನು ಸುಳ್ಳಲ್ಲ. ಇದಕ್ಕೆಯಶ್ ನೀಡುವ ಉತ್ತರ ಹೀಗಿದೆ- ‘ಎಲ್ಲದಕ್ಕೂ ಟೈಮ್ ಬರೇಬೇಕು. ಟೈಮ್ ಬಂದಾಗ ಎಲ್ಲವನ್ನು ಹೇಳ್ತೀನಿ. ಬಾಲಿವುಡ್ ಬಗ್ಗೆ ನೀವು ಕೇಳಿದ್ದೆಲ್ಲವೂ ಸುದ್ದಿಯಷ್ಟೇ. ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಸವಾಲಿನ ಕತ್ತಿ ಮೇಲೆ ನಾನು ನಿಂತಿದ್ದೇನೆ’ ಅಂತ ಹೇಳುವ ಮೂಲಕ ತಾವು ಕೆಜಿಎಫ್ ಯಶಸ್ಸಿನ ಅಮಲಿನಲ್ಲಿ ಇಲ್ಲ ಅಂತ ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿ: Google Map Without Internet : ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು ! ಅದು ಹೇಗೆ ಎಂಬ ಮಾಹಿತಿ ತಿಳಿಯಿರಿ

(Rocking Star Yash after KGF 2 All Set For New Project

Comments are closed.