Andhra BJP President : 1 ಕೋಟಿ ಮತ ಸಿಕ್ಕರೆ ಕಡಿಮೆ ದರದಲ್ಲಿ ಮದ್ಯ ನೀಡುತ್ತೇವೆ ಎಂದ ಬಿಜೆಪಿ ನಾಯಕ..!

Andhra BJP President : ಚುನಾವಣೆ ಹತ್ತಿರ ಬಂತು ಅಂದರೆ ಸಾಕು ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಒಂದು ಕೆಲಸವಾಗಿ ಬಿಡುತ್ತದೆ. ಜನರಿಗೆ ಇಲ್ಲ ಸಲ್ಲದ ಆಶ್ವಾಸನೆಗಳನ್ನು ನೀಡುವುದು, ಹಣ ಹೆಂಡ ಹಂಚುವುದು ಹೀಗೆ ನಾನಾ ಸರ್ಕಸ್​ಗಳನ್ನು ಮಾಡುತ್ತಾರೆ. ಅಧಿಕಾರಕ್ಕೆ ಬರುವವರೆಗೂ ರಾಜಕೀಯ ಪಕ್ಷಗಳ ಡ್ರಾಮಾ ಮುಂದುವರಿಯುತ್ತಲೇ ಇರುತ್ತದೆ.

ಇದೀಗ ಅದೇ ರೀತಿಯ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸೋಮು ವೀರ್​ ರಾಜು ಜನರಿಗೆ ವಿಚಿತ್ರವಾದ ಆಶ್ವಾಸನೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷವು 1 ಕೋಟಿ ಮತವನ್ನು ಪಡೆಯಲು ಶಕ್ತವಾದಲ್ಲಿ ಮದ್ಯವನ್ನು ಕೇವಲ 75 ರೂಪಾಯಿಗಳಿಗೆ ಮಾರಾಟ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಆದಾಯ ಮಿಕ್ಕಿದರೆ ಮದ್ಯದ ಬೆಲೆಯನ್ನು 50 ರೂಪಾಯಿಗಳಿಗೆ ಇಳಿಕೆ ಮಾಡೋದಾಗಿಯೂ ಹೇಳಿದ್ದಾರೆ.

ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋಮು ವೀರ್ರಜು, ಬಿಜೆಪಿಗೆ ನಿಮ್ಮ ಮತವನ್ನು ನೀಡಿ. ನಿಮಗೆ ನಾವು ಮದ್ಯವನ್ನು 75 ರೂಪಾಯಿಗಳಿಗೆ ನೀಡುತ್ತೇವೆ. ಆಂಧ್ರಪ್ರದೇಶದಲ್ಲಿ ಆದಾಯ ಇನ್ನಷ್ಟು ಹೆಚ್ಚಿದರೆ ಮದ್ಯವನ್ನು ಕೇವಲ 50 ರೂಪಾಯಿಗಳಿಗೆ ಮಾರಾಟ ಮಾಡುತ್ತೇವೆ ಎಂದು ಹೇಳಿದರು.

ಆಂಧ್ರ ಪ್ರದೇಶದಲ್ಲಿ ಕಳಪೆ ಗುಣಮಟ್ಟದ ಮದ್ಯಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.ಈ ಅಕ್ರಮದಲ್ಲಿ ರಾಜ್ಯದ ಆಢಳಿತ ಪಕ್ಷದ ನಾಯಕರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಆಂಧ್ರ ಪ್ರದೇಶದಲ್ಲಿ ಒಂದು ಕೋಟಿಗೂ ಅಧಿಕ ಜನರು ಹೆಚ್ಚಿನ ದರ ನೀಡಿ ಮದ್ಯ ಖರೀದಿ ಮಾಡುತ್ತಿದ್ದಾರೆ. ನೀವು ಅಗ್ಗದ ದರದಲ್ಲಿ ಮದ್ಯವನ್ನು ಕೊಂಡು ಕೊಳ್ಳಬೇಕು ಅಂದರೆ 2024ರಲ್ಲಿ ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೇ ಮತ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನು ಓದಿ : 1st PUC students pass : ಪ್ರಥಮ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ : ರಾಜ್ಯ ಸರಕಾರ ಮಹತ್ವದ ಆದೇಶ

ಇದನ್ನೂ ಓದಿ : Exam for teacher promotion : ಶಿಕ್ಷಕರ ಬಡ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ಜಾರಿಗೆ ತಂದ ಶಿಕ್ಷಣ ಇಲಾಖೆ

ಇದನ್ನೂ ಓದಿ : Fire to the chariot : ರಥೋತ್ಸವದ ವೇಳೆ ಅವಘಡ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ

Andhra BJP president promises liquor at Rs 75 for 1 crore votes to party

Comments are closed.