ಕೆಜಿಎಫ್ (KGF) ಹಾಗೂ ಕೆಜಿಎಫ್- 2 (KGF-2) ಸಿನಿಮಾದ ಬಳಿಕ ಯಶ್ (Rocking Star Yash) ಬಹುತೇಕ ವರ್ಷಗಳಿಂದ ಸಿನಿಮಾ ಅನೌನ್ಸ್ ಮಾಡದೇ ಕುತೂಹಲ ಕಾಯ್ದುಕೊಂಡೇ ಬಂದಿದ್ದರು. ಯುಗಾದಿ, ವರಮಹಾಲಕ್ಷ್ಮೀ ಹೀಗೆ ಹಬ್ಬಗಳ ಸಂದರ್ಭದಲ್ಲೆಲ್ಲಾ ಸಿನಿಮಾ ಅನೌನ್ಸ್ ರೂಮರ್ ಹಬ್ಬುತ್ತಲೇ ಇತ್ತು. ಈಗ ಕೊನೆಗೂ ಕಾಯುವಿಕೆಗೊಂದು ಕೊನೆ ಸಿಕ್ಕಿದಂತಿದ್ದು, ಯಶ್ 19 ನೇ ಸಿನಿಮಾ (Yash Next Movie) ಕೂಡ ಬಿಗ್ ಬ್ರೇಕಿಂಗ್ ಜೊತೆ ಹೊರಬರೋ ನೀರಿಕ್ಷೆ ಮೂಡಿಸಿದೆ.
ಯಶ್ 19 ನೇ ಸಿನಿಮಾದ ಬಗ್ಗೆ ಸಾಕಷ್ಟು ಅಂತೆ ಕಂತೆ ಕತೆಗಳು ಹುಟ್ಟಿಕೊಂಡಿದ್ದವು. ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟ ನಿರ್ದೇಶಕರ ಜೊತೆಗೆಲ್ಲಾ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಮಾತುಗಳು ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಕೇಳಿಬಂದಿದ್ದವು. ಆದರೆ ಇದ್ಯಾವ್ ರೂಮರ್ ಗಳಿಗೂ ಯಶ್ ಉತ್ತರಿಸಿರಲಿಲ್ಲ.

ಮುಂಬೈ, ಅಮೇರಿಕಾ, ಯುರೋಪ್, ಗೋವಾ ಅಂತ ಯಶ್ ಟ್ರಿಪ್ ಮಾಡುತ್ತಲೇ ಸಿನಿಮಾದ ತಯಾರಿ ನಡೆಸಿದ್ದ ಯಶ್ ಕೊನೆಗೂ ವರ್ಷಗಳಿಂದ ಕಾದಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಯಶ್ ಶೀಘ್ರದಲ್ಲಿಯೇ ತಮ್ಮ19 ನೇ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿದೆ. ಹಾಲಿವುಡ್ ನ ಖ್ಯಾತ ಸ್ಟಂಟ್ ಮ್ಯಾನ್ ನ ಲಂಡನ್ ನಲ್ಲಿ ಭೇಟಿಯಾಗಿರೋ ರಾಕಿಭಾಯ್ ಸಿನಿಮಾಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ : ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ
ಲಂಡನ್ ನಲ್ಲಿ ಹಾಲಿವುಡ್ ಸ್ಟಂಟ್ ಮ್ಯಾನ್ ಭೇಟಿಯಾಗಿರೋ ವಿಚಾರವನ್ನು ಯಶ್ ಇದುವರೆಗೂ ಅಧಿಕೃತವಾಗಿ ಹಂಚಿಕೊಂಡಿಲ್ಲ. ಆದರೆ ಯಶ್ ಬಗ್ಗೆ ವಿಶ್ವಮಟ್ಟದಲ್ಲಿ ಕ್ರೇಜ್ ಸೃಷ್ಟಿಯಾಗಿರೋದಿಕ್ಕೆ ಸಾಕ್ಷಿ ಎಂಬಂತೆ ಹಾಲಿವುಡ್ ಸ್ಟಂಟ್ ಮ್ಯಾನ್ ಜೆಜೆ ಪೆರಿ ಯಶ್ ಜೊತೆಗಿನ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
ಯಶ್ ತಮ್ಮ 19 ನೇ ಸಿನಿಮಾಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಗೀತು ಮೋಹನ್ ನಿರ್ದೇಶನದಲ್ಲಿ ನಟಿಸ್ತಾ ಇರೋ ಯಶ್, ನವೆಂಬರ್ ನಲ್ಲಿ ಸಿನಿಮಾದ ಬಗ್ಗೆ ಅಪ್ಡೇಟ್ ನೀಡೋ ಸಾಧ್ಯತೆ ಇದೆ. ಮೂಲಗಳ ಮಾಹಿತಿ ಪ್ರಕಾರ ಯಶ್ ತಮ್ಮ 19 ಸಿನಿಮಾದ ಶೂಟಿಂಗ್ ನವೆಂಬರ್ ನಲ್ಲಿ ಆರಂಭಿಸಲಿದ್ದು, ಈ ಬಾರಿ ಆಸ್ಕರ್ ಗೆ ಕಣ್ಣಿಟ್ಟು, ಗ್ಲೋಬಲ್ ಲೆವೆಲ್ ನ ಸಿನಿಮಾ ಮಾಡೋ ಕನಸು ಹೊತ್ತಿದೆ ಚಿತ್ರತಂಡ.
ಇದನ್ನೂ ಓದಿ : ತೆರೆಗೆ ಬರಲ್ವಾ ಪುಷ್ಪ-2 ? ಸಿನಿಮಾ ವಿಳಂಬವಾಗ್ತಿರೋದ್ಯಾಕೆ ? ಇಲ್ಲಿದೆ ಅಸಲಿ ಸತ್ಯ
ಡಿಫರೆಂಟ್ ಕಥಾ ಹಂದರ ಹೊಂದಿರೋ, ಗ್ಯಾಂಗಸ್ಟರ್ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದು, ಕಥಾನಕ,ಸಿನಿಮಾ ನರೇಶನ್ ಹಾಗೂ ಲೋಕೇಶನ್,ಸ್ಟಂಟ್ ಎಲ್ಲವೂ ಅದ್ಭುತವಾಗಿ ಕಟ್ಟಿಕೊಡಲು ಯಶ್ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ತಮ್ಮ ಹೇರ್ ಸ್ಟೈಲ್, ಫಿಟನೆಸ್ ಸೇರಿ ಎಲ್ಲವನ್ನೂ ಪ್ರಿಪೇರ್ ಮಾಡಿಕೊಂಡಿರೋ ಯಶ್ ಕೆಜಿಎಫ್ 2 ನಂತರ ಬಹಳ ಗ್ಯಾಪ್ ತೆಗೆದುಕೊಂಡು ಮುಂದಿನ ಸಿನ್ಮಾ ತಯಾರಿ ನಡೆಸಿದ್ದಾರೆ.

ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದ ಯಶಸ್ಸಿನ ಬಳಿಕ ಯಶ್ ಬಾಲಿವುಡ್ ದಾಟಿ ಹಾಲಿವುಡ್ ಮಟ್ಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಸಿನಿಮಾಗಳಿಗೆ ಮನ್ನಣೆ ಸಿಗುವ ಮಟ್ಟಕ್ಕೆ ಜನಪ್ರಿಯತೆ ಪಡೆದಿದ್ದಾರೆ. ಇದೇ ಕಾರಣಕ್ಕೆ ಯಶ್ 19 ನೇ ಸಿನಿಮಾ ವಿಳಂಬವಾಗಿತ್ತು. ಎರಡು ಸೂಪರ್ ಹಿಟ್ ಸಿನಿಮಾದ ಬಳಿಕ ಮೂರನೇ ಸಿನಿಮಾದ ಮೇಲೆ ಪ್ರೇಕ್ಷಕರು ಹಾಗೂ ಸಿನಿಮಾ ಇಂಡಸ್ಟ್ರಿಯ ನೀರಿಕ್ಷೆ ತುಸು ಹೆಚ್ಚೆ ಇರೋದು ಕಾಮನ್.
ಇದನ್ನೂ ಓದಿ : ಕಥೆನೂ ಸಿಗ್ತಿಲ್ಲ, ಬಂಡವಾಳವೂ ಹೊಂದ್ತಿಲ್ಲ: ಕೊನೆಗೂ ರಟ್ಟಾಯ್ತು ಕೆಜಿಎಫ್ ನಟ ಯಶ್ ಸಿನಿಮಾ ವಿಳಂಬದ ಗುಟ್ಟು
ಒಂದೊಮ್ಮೆ ಮೂರನೇ ಸಿನಿಮಾ ನೀರಿಕ್ಷೆ ತಕ್ಕಂತೆ ಮೂಡಿಬರದೇ ಇದ್ದಲ್ಲಿ ಅದು ಯಶ್ ಸಿನಿ ಕೆರಿಯರ್ ಮೇಲೆ ಪ್ರಭಾವ ಬೀರಲಿದೆ. ಇದೇ ಕಾರಣಕ್ಕೆ ಯಶ್ ಒಂದೊಂದು ಹೆಜ್ಜೆಯನ್ನು ಅತ್ಯಂತ ಜತನದಿಂದ ಇಡ್ತಿದ್ದಾರೆ. ಹೀಗಾಗಿ ಬಾಲಿವುಡ್ ಹಾಗೂ ಕಾಲಿವುಡ್ ನಿಂದ ಪ್ಯಾನ್ ಇಂಡಿಯಾ ಸಿನಿಮಾದ ಆಹ್ವಾನ ಬಂದರೂ ಯಶ್ ಸ್ವೀಕರಿಸದೇ ಈಗ ಹಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಯಶ್ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸೋ ಸಾಧ್ಯತೆ ಇದೆ.
Rocking Star Yash New Movie After KGF 2 Sandalwood to Hollywood