Riot over Sarvakar photo : ವೀರ ಸಾರ್ವಕರ್​ ಭಾವಚಿತ್ರ ಇಡುವ ವಿಚಾರಕ್ಕೆ ಮತ್ತೆ ಕಿರಿಕ್​, ಯುವಕನಿಗೆ ಚಾಕು ಇರಿತ

ಶಿವಮೊಗ್ಗ : Sarvakar photo in Shimoga : ಶಿವಮೊಗ್ಗದಲ್ಲಿ ವೀರ ಸಾರ್ವಕರ್​ ಫೋಟೋ ಇಡುವ ವಿಚಾರವಾಗಿ ಮೊನ್ನೆ ಮೊನ್ನೆಯಷ್ಟೇ ಸೆಂಟ್ರಲ್​ ಮಾಲ್​ನಲ್ಲಿ ಎಸ್​ಡಿಪಿಐ ಕಾರ್ಯಕರ್ತರು ಹಾಗೂ ಮಾಲ್​ನ ಸಿಬ್ಬಂದಿ ನಡುವೆ ವಾಗ್ವಾದ ಏರ್ಪಟ್ಟಿತ್ತು . ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಾರ್ವಕರ್​ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಿಂದ ತೆಗೆಯದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಗಲಾಟೆಗಳ ಬೆನ್ನಲ್ಲೇ ಇದೀಗ ಮತ್ತೆ ಸಾರ್ವಕರ್​ ಫೋಟೋ ವಿಚಾರವಾಗಿ ಶಿವಮೊಗ್ಗದಲ್ಲಿ ಮತ್ತೆ ಕಿರಿಕ್​ ಉಂಟಾಗಿದೆ,

ಶಿವಮೊಗ್ಗದ ಅಮೀರ್​ ಅಹಮದ್​ ವೃತ್ತದಲ್ಲಿ ಎರಡು ಕೋಮಿನ ನಡುವೆ ಗಲಾಟೆ ಏರ್ಪಟ್ಟಿದ್ದು ಸಾರ್ವಕರ್​ ಫೋಟೋವನ್ನು ತೆಗೆದು ಟಿಪ್ಪು ಸುಲ್ತಾನ್​ರ ಫೋಟೋವನ್ನು ಇಡಲು ಒಂದು ಗುಂಪು ಮುಂದಾಗಿತ್ತು. ಸಾರ್ವಕರ್​ ಫೋಟೋವನ್ನು ತೆಗೆಯಲು ಒಪ್ಪಿದ ಪೊಲೀಸರು ಟಿಪ್ಪು ಫೋಟೋವನ್ನು ಇಡಲು ನಿರಾಕರಿಸಿದ್ದರು. ಈ ವೇಳೆಯಲ್ಲಿ ಎರಡು ಕೋಮಿನ ಜೊತೆಯಲ್ಲಿ ಜಟಾಪಟಿ ಉಂಟಾಗಿದೆ.

ಎರಡೂ ಕೋಮಿನವರು ಶಾಂತವಾಗಿ ವರ್ತಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಹಿಂದೂ ಕಾರ್ಯಕರ್ತರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ, ಟಿಪ್ಪು ಫೋಟೋವನ್ನು ಇಡಲೇಬೇಕೆಂದು ಆಗ್ರಹಿಸಿ ಮುಸ್ಲಿಂ ಸಂಘಟನೆಯ ಯುವಕರು ಗಲಾಟೆ ಆರಂಭಿಸಿದ್ದರು. ಪೊಲೀಸರನ್ನೂ ಲೆಕ್ಕಿಸದೇ ಸಾರ್ವಕರ್​ ಫ್ಲೆಕ್ಸ್​ನ್ನು ಕಿತ್ತೆಸೆಯಲು ಮುಸ್ಲಿಂ ಯುವಕರು ಮುಂದಾಗಿದ್ದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಸಾರ್ವಕರ್​​ ಫೋಟೋದ ವಿಚಾರವಾಗಿ ಉಂಟಾದ ಗಲಾಟೆಯನ್ನು ತಹಬದಿಗೆ ತರಲು ಸಧ್ಯ ಶಿವಮೊಗ್ಗದ ನಗರ ವ್ಯಾಪ್ತಿಯಲ್ಲಿ ಸೆಕ್ಷನ್​ 144 ಜಾರಿಗೆ ತರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಅನ್ಯಕೋಮಿನ ಯುವಕನಿಗೆ ಚಾಕು ಇರಿತ :
ಸಾರ್ವಕರ್​ ಫೋಟೋ ಗಲಾಟೆ ವಿಚಾರದ ನಡುವೆಯೇ ಶಿವಮೊಗ್ಗದಲ್ಲಿ ಅನ್ಯಕೋಮಿನ ತಂಡವು ಯುವಕನಿಗೆ ಚಾಕು ಇರಿದಿದ್ದು ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ಗಾಂಧಿ ಬಜಾರ್​ನಲ್ಲಿ ಈ ಘಟನೆ ಸಂಭವಿಸಿದೆ. ಪ್ರೇಮ್​ ಸಿಂಗ್​ ಎಂಬ ಯುವಕನಿಗೆ ಚಾಕು ಇರಿಯಲಾಗಿದ್ದು ಈತನನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನು ಓದಿ : Minister Umesh Katthi : ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೆಂಬುದಕ್ಕೆ ಕಾಂಗ್ರೆಸ್​ನಲ್ಲಿ ಸ್ಪಷ್ಟತೆಯಿಲ್ಲ : ಕತ್ತಿ ವ್ಯಂಗ್ಯ

ಇದನ್ನೂ ಓದಿ : Minister Sivarama Hebbar :ನಮ್ಮ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ, ಮಾಧುಸ್ವಾಮಿ ಹೇಳಿಕೆ ಬಗ್ಗೆ ಗೊತ್ತಿಲ್ಲ : ಸಚಿವ ಶಿವರಾಮ ಹೆಬ್ಬಾರ್​​

Riot over Sarvakar photo in Shimoga: A young man was stabbed

Comments are closed.