Salman khan at wedding: ನಟಿ ಪೂಜಾ ಹೆಗ್ಡೆ ಅಣ್ಣನ ಮದುವೆಯಲ್ಲಿ ಸಲ್ಮಾನ್‌ ಖಾನ್

ಮಂಗಳೂರು: (Salman khan at wedding) ನಟಿ ಪೂಜಾ ಹೆಗ್ಡೆ ಸಹೋದರನ ಮದುವೆ ಮಂಗಳೂರಿನಲ್ಲಿ ನಡೆದಿದ್ದು, ಈ ಮದುವೆಗೆ ಖ್ಯಾತ ನಟ ಸಲ್ಮಾನ್‌ ಖಾನ್‌ ಭಾಗವಹಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೂಜಾ ಹೆಗ್ಡೆ ಹಾಗೂ ಸಲ್ಮಾನ್‌ ಖಾನ್‌ ನವವಿವಾಹಿತರೊಂದಿಗೆ ನಿಂತಿರುವ ಫೋಟೋ ವೈರಲ್‌ ಆಗಿದೆ.

ಪೂಜಾ ಹೆಗ್ಡೆ ಅವರ ಸಹೋದರ ರಿಷಬ್‌ ಹೆಗ್ಡೆ ಅವರು ಜನವರಿ ೩೦ ರಂದು ಶಿವಾನಿ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತಮ್ಮ ಸಹೋದರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಂದರ ಕ್ಷಣದ ಫೋಟೋಗಳನ್ನು ಪೂಜಾ ಹೆಗ್ಡೆ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ನಡ ಸಲ್ಮಾನ್‌ ಖಾನ್‌ ಕೂಡ ಪೂಜಾ ಹೆಗ್ಡೆ ಅವರ ಸಹೋದರನ ಮದುವೆಯಲ್ಲಿ ಭಾಗಿಯಾಗಿರುವುದನ್ನು ಕಾಣಬಹುದು.

ಸಹೋದರನ ಮದುವೆಯ ಸುಂದರ ಚಿತ್ರಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೂಜಾ ಹೆಗ್ಡೆ, ” ತನ್ನ ಸಹೋದರ ತನ್ನ ಜೀವನದ ಪ್ರೀತಿಯನ್ನು ವಿವಾಹವಾದರು. ಒಂದು ವಾರದ ರೋಲರ್‌ ಕೋಸ್ಟರ್‌ ರೈಡ್‌ ಇದು. ನಾನು ಸಂತೋಷದಿಂದ ಕಣ್ಣೀರು ಸುರಿಸಿದ್ದೇನೆ ಮತ್ತು ನಕ್ಕಿದ್ದೇನೆ. ಅಣ್ಣಾ ನೀವು ನಿಮ್ಮ ಮುಂದಿನ ಜೀವನಕ್ಕೆ ಕಾಲಿಡುತ್ತಿದ್ದೀರಾ. ನೀವು ಅನಿಯಂತ್ರಿತವಾಗಿ ಪ್ರೀತಿಯನ್ನು ನೀಡಿದ್ದೀರಿ ಮತ್ತು ಹೃದಯದಿಂದ ನೀಡಿದ್ದೀರಿ. ಪರಸ್ಪರರ ಉಪಸ್ಥಿತಿಯಲ್ಲಿ ಶಾಂತಿ ಮತ್ತು ತಿಳುವಳಿಕೆಯನ್ನು ನೀವು ಕಂಡುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಶಿವಾನಿ ಶೆಟ್ಟಿ, ನೀವು ಸುಂದರ ಬೆರಗುಗೊಳಿಸುವ ವಧು, ಕುಟುಂಬಕ್ಕೆ ಸ್ವಾಗತ.” ಎಂಬುದಾಗಿ ಬರೆದುಕೊಂಡಿದ್ದಾರೆ.

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪೂಜಾ ಹೆಗ್ಡೆ ಮುಂಬರುವ ಸಿನಿಮಾ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ನಲ್ಲಿ ಸಲ್ಮಾನ್‌ ಖಾನ್‌ ನೊಂದಿಗೆ ಜೋಡಿಯಾಗಿ ನಟಿಸಿದ್ದು, ಮುಂಬರುವ ಚಿತ್ರದಲ್ಲಿ ಮಹೇಶ್‌ ಬಾಬು ಅವರೊಡನೆ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Actor K. Vishwanath: ಕಲಾತಪಸ್ವಿ ಖ್ಯಾತ ನಟ, ನಿರ್ದೇಶಕ ಕೆ. ವಿಶ್ವನಾಥ್‌ ಇನ್ನಿಲ್ಲ

ಇದನ್ನೂ ಓದಿ : ಶಾರುಖ್‌ ಖಾನ್‌ ಜೊತೆ ಸಿನಿಮಾ ಸದ್ಯಕ್ಕಿಲ್ಲ ಎಂದ ವಿಜಯ್ ಕಿರಗಂದೂರು

ಇದನ್ನೂ ಓದಿ : Kavyashree Gowda : ಬಿಗ್ ಬಾಸ್ ಕಾವ್ಯಶ್ರೀ ಹೊಸ ಪೋಟೋಶೂಟ್ ಗುಟ್ಟೇನು ? ಸಿನಿಮಾಕ್ಕೆ ಎಂಟ್ರಿ ಕೊಡ್ತಾರಾ ಮಂಗಳಗೌರಿ

Salman khan at wedding: Salman Khan at actress Pooja Hegde’s brother’s wedding

Comments are closed.