Kiara- Siddharth wedding: ಬಾಲಿವುಡ್ ನಲ್ಲಿ ಮೊಳಗಿತು ಮಂಗಳವಾದ್ಯ: ಫೆಬ್ರವರಿ 6 ರಂದು ಕಿಯಾರಾ- ಸಿದ್ಧಾರ್ಥ್ ಕಲ್ಯಾಣ

(Kiara- Siddharth wedding) ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಸದ್ಯ ಮದುವೆ ಸೀಸನ್ ಜೋರಾಗಿದೆ. ಮೊನ್ನೆ ಮೊನ್ನೆ ಸ್ಯಾಂಡಲ್ ವುಡ್ ನ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸಪ್ತಪದಿ ತುಳಿದ ಬೆನ್ನಲ್ಲೇ ಈಗ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ಹೊಸಬದುಕಿಗೆ ಕಾಲಿಡಲು ಸಿದ್ಧವಾಗಿದ್ದಾರೆ. ಈ ಅದ್ದೂರಿ ವಿವಾಹಕ್ಕೆ ರಾಜಸ್ಥಾನದ ಜೈಸಲ್ಮೇರ್ ಸಾಕ್ಷಿಯಾಗಲಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಜೋಡಿಹಕ್ಕಿಗಳ ತರ ವಿಹರಿಸುತ್ತ ಬಂದಿದ್ದರು. ಆದರೆ ಹಲವು ಕಾಲದವರೆಗೆ ಈ ಜೋಡಿ ತಮ್ಮ ಪ್ರೀತಿಯ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಆದರೆ ಈಗ ಮೂಲಗಳ ಪ್ರಕಾರ ಇದೇ ಬರುವ ಫೆಬ್ರವರಿ 6 ರಂದು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆಯುವ ಅದ್ದೂರಿ ವಿವಾಹದಲ್ಲಿ ಸಿದ್ಧಾರ್ಥ್ ಹಾಗೂ ಕಿಯಾರಾ ಅಡ್ವಾಣಿ ಹೊಸಬದುಕಿಗೆ ಕಾಲಿಡುತ್ತಿದ್ದಾರೆ.

ಜೈಸಲ್ಮೇರ್ ಸೂರ್ಯಘರ ಪ್ಯಾಲೇಸ್ ಹೊಟೇಲ್ ನಲ್ಲಿ ವಿವಾಹ ಶಾಸ್ತ್ರಗಳು ನಡೆಯಲಿದ್ದು, ಫೆಬ್ರವರಿ 4 ಹಾಗೂ 5 ರಂದು ವಿವಾಹ ಪೂರ್ವದ ಹಳದಿ,ಮೆಹೆಂದಿ ಶಾಸ್ತ್ರಗಳು ಜರುಗಲಿದೆ. 2021 ರಲ್ಲಿ ತೆರೆಕಂಡ ಶೇರ್ ಷಾ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ತೆರೆಗೆ ಬಂದ ಬಳಿಕ ಹಾಗೂ ಶೂಟಿಂಗ್ ಸಮಯದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಆತ್ಮೀಯರಾಗಿದ್ದರು. ಈ ಆತ್ಮೀಯತೆ ಬಳಿಕ ಪ್ರೀತಿಗೆ ತಿರುಗಿತ್ತು.

https://www.instagram.com/p/CnenkW8oTk7/?igshid=Yzg5MTU1MDY%3D

ಆದರೆ ಕಾಫಿ ವಿತ್ ಕರಣ್ ನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಯುವ ಜೋಡಿ ಕರಣ್ ಜೋಹರ್ ನಡುವಿನ ರಿಲೇಶನ್ ಶಿಪ್ ಬಗ್ಗೆ ಕೇಳಲಾದ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ನೀಡದೇ ಜಾರಿಕೊಂಡಿದ್ದರು. ಆದರೆ ಪ್ರೀತಿಯ ವಿಚಾರವನ್ನು ಈ ಜೋಡಿ ನಿರಾಕರಿಸಿರಲಿಲ್ಲ.

https://www.instagram.com/p/CmQXb7moKXk/?igshid=Yzg5MTU1MDY%3D

ಈಗ ಫೆಬ್ರವರಿ 6 ರಂದು ಈ ಜೋಡಿ ಮದುವೆಗೆ ಸಿದ್ಧ ವಾಗಿದ್ದು, ಬಾಲಿವುಡ್ ನ ಸ್ಟಾರ್ ಗಳು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಹಿದ್ ಕಪೂರ್, ಮೀರಾ ಕಪೂರ್,ಕರಣ್‌ ಜೋಹರ್,ವರುಣ ಧವನ್,ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಈಗಾಗಲೇ ಜೈಸಲ್ಮೇರ್ ತಲುಪಿದ್ದಾರೆ. ಮದುವೆಗೆ ಸೂರ್ಯಗಡ ಅರಮನೆಯಲ್ಲಿ ಗಣ್ಯರಿಗೆ 84 ಕೊಠಡಿಗಳು ಹಾಗೂ 30 ಕ್ಕೂ ಹೆಚ್ಚು ಐಷಾರಾಮಿ ವಾಹನಗಳನ್ನು ಕಾಯ್ದಿರಿಸಲಾಗಿದೆ.

https://www.instagram.com/p/CmHjpPOokJO/?igshid=Yzg5MTU1MDY%3D

ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದಂತೆ ಬಾಲಿವುಡ್ ನ ಕಿಂಗ್ ಖಾನ್ ಶಾರೂಕ್ ಮಾಜಿ ಅಂಗರಕ್ಷಕ ಯಾಸಿನ್ ಗೆ ಕಿಯಾರಾ ಹಾಗೂ ಸಿದ್ಧಾರ್ಥ್ ಮದುವೆಯ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ : Salman khan at wedding: ನಟಿ ಪೂಜಾ ಹೆಗ್ಡೆ ಅಣ್ಣನ ಮದುವೆಯಲ್ಲಿ ಸಲ್ಮಾನ್‌ ಖಾನ್

ಇದನ್ನೂ ಓದಿ : Actor K. Vishwanath: ಕಲಾತಪಸ್ವಿ ಖ್ಯಾತ ನಟ, ನಿರ್ದೇಶಕ ಕೆ. ವಿಶ್ವನಾಥ್‌ ಇನ್ನಿಲ್ಲ

Kiara-Siddharth wedding: Bollywood rang the bell: Kiara-Siddharth wedding on February 6

Comments are closed.