ಚಿರಂಜೀವಿ ಸರ್ಜಾ ನೆನಪಲ್ಲಿ ಮೇಘನಾ ಸರ್ಜಾಗಾಗಿ ಹಾಡು ಹಾಡಿದ್ರು ಚಂದನ್ ಶೆಟ್ಟಿ !

0

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿ ಹಲವು ದಿನಗಳೇ ಕಳೆದಿದೆ. ಚಿರು ಪತ್ನಿ ಮೇಘನಾ ತುಂಬು ಗರ್ಭಿಣಿಯಾಗಿದ್ದು, ಮೇಘನಾರನ್ನು ಸಂತೋಷವಾಗಿರಿಸಲು ಮನೆ ಮಂದಿಯ ಜೊತೆಗೆ ಸ್ಯಾಂಡಲ್ ವುಡ್ ದಿಗ್ಗಜ್ಜರು ಕೂಡ ಪ್ರಯತ್ನಿಸುತ್ತಿದ್ದಾರೆ. ಈ ನಡುವಲ್ಲೇ ಚಿರು ನೆನಪಿಲ್ಲಿ ಮೇಘನಾರಾಜ್ ಗಾಗಿ ರಾಪರ್ ಚಂದನ್ ಶೆಟ್ಟಿ ಹಾಡೊಂದನ್ನು ಹಾಡಿದ್ದಾರೆ. ಈ ಹಾಡು ಇದೀಗ ಭಾರೀ ವೈರಲ್ ಆಗಿದೆ.

ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ ಅಂತಾಯೇ ಕರೆಯಿಸಿಕೊಳ್ಳುತ್ತಿದ್ದ ಮೇಘನಾ ರಾಜ್ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ವಂಶದ ಕುಡಿಯ ಬರುವಿಕೆಗಾಗಿ ಕರುನಾಡು ಕಾಯುತ್ತಿದೆ. ಪ್ರೀತಿಸಿ, ಮದುವೆಯಾದ ಎರಡೇ ವರ್ಷಗಳಲ್ಲಿ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದ ಚಿರಂಜೀವಿ ಸರ್ಜಾ ಮಗುವಿನ ವಿಚಾರವಾಗಿ ಹಲವು ಕನಸುಗಳನ್ನು ಕಂಡಿದ್ದರು. ಆದರೆ ವಿಧಿ ಅದ್ಯಾವುದಕ್ಕೂ ಅವಕಾಶವನ್ನೇ ಕೊಡಲಿಲ್ಲ.

ವಿಧಿಯಾಟದದಿಂದಾಗಿ ಚಿರು ತುಂಬು ಗರ್ಭಣಿ ಮೇಘನಳನ್ನು ಒಬ್ಬಂಟಿ ಮಾಡಿ ಮುಗುವಿನ ಮುಖನೋಡುವ ಮುನ್ನವೇ ಚಿರ ನಿದ್ರೆಗೆ ಜಾರಿದರು. ಪ್ರೀತಿಯ ಪತಿ ಇಲ್ಲದೆ ಮೇಘನಾ ಪ್ರತಿ ದಿನ ಕ್ಷಣ ಕ್ಷಣಕ್ಕೂ ನಿದ್ದೆಗಣ್ಣಿನಲ್ಲಿಯೂ ಚಿರು ಚಿರು ಅಂತ ಕನವರಿಸುತ್ತಿದ್ದರು. ನೋವಿನಲ್ಲಿರುವ ಕುಟುಂಬಸ್ಥರು ಸ್ವಲ್ಪ ಸ್ಲಲ್ಪವೇ ಚೇತರಿಸಿಕೊಳ್ಳುತ್ತಿದ್ದಾರೆ.

ಚಿರಂಜೀವಿ ಸರ್ಜಾ ನಿಧನದ ಬೆನ್ನೆಲ್ಲೇ ಮೇಘನಾ ರಾಜ್ ತಂದೆ ತಾಯಿಯ ಆರೈಕೆಯಲ್ಲಿದ್ದಾರೆ. ಚಿರಂಜೀವಿ ಸರ್ಜಾ ಮನೆಯವರು ಕೂಡ ಮೇಘನಾ ರಾಜ್ ಅವರನ್ನು ಸಂತೋಷವಾಗಿಡುವ ನಿಟ್ಟಿನಲ್ಲಿ ಯತ್ನಿಸುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಆಸೆಯಂತೆ ಮೇಘನಾ ಕಣ್ಣೀರು ಸುರಿಸದೇ ನೋವನ್ನು ನುಂಗಿಕೊಂಡೇ ದಿನ ಕಳೆಯುತ್ತಿದ್ದಾರೆ. ಈ ನಡುವಲ್ಲೇ ಚಿತ್ರರಂಗದ ಹಲವರು ಹಿರಿಯ ಹಾಗೂ ಕಿರಿಯ ನಟರು ಮೇಘನಾ ರಾಜ್ ಅವರ ಮನೆಗೆ ಬಂದು ಸಂತೈಸುತ್ತಿದ್ದಾರೆ. ಒಂದಿಷ್ಟು ಸಮಯ ಮೇಘನಾ ಜೊತೆಗೆ ಕಳೆಯುವುದರ ಮೂಲಕ ಬೇಸರವನ್ನು ದೂರ ಮಾಡಲು ಯತ್ನಿಸುತ್ತಿದ್ದಾರೆ.

ಈ ನಡುವಲ್ಲೇ ರ‍್ಯಾಪರ್ ಚಂದನ್ ಶೆಟ್ಟಿ ಚಿರು ಸರ್ಜಾ ಹಾಗು ಮೇಘನಾ ರಾಜ್ ಅವರಿಗೋಸ್ಕರ ಒಂದು ಅದ್ಭುತವಾದ ಹಾಡನ್ನು ಮಾಡಿದ್ದಾರೆ. ಸದ್ಯ ಈ ಸಾಂಗ್​ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ಚಂದನ್ ಶೆಟ್ಟಿ ಅವರ ಪಾಲಿಗೆ ಗಾಡ್ ಫಾದರ್ ಆಗಿರುವ ಚಿರಂಜೀವಿ ಸರ್ಜಾ ಅವರ ನೆನಪಲ್ಲಿ ಚಂದನ್ ಶೆಟ್ಟಿ ಅವರ ಈ ಹೊಸ ಹಾಡಿನಲ್ಲಿ ಚಿರು ಹಾಗು ಮೇಘನಾ ರಾಜ್ ಅವರನ್ನು ಸ್ಕೆಚ್ ರೂಪದಲ್ಲಿ ತೋರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಕತ್ ಸದ್ದು ಮಾಡ್ತಿದ್ದು. ಖುದ್ದು ಚಂದನ್ ಶೆಟ್ಟಿ ಅವರೇ ಇದನ್ನು ಬರೆದು ಹಾಡಿದ್ದಾರೆ. ವಿಶೇಷ ಅಂದರೆ ಚಂದನ್ ತಮ್ಮ ಹುಟ್ಟು ಹಬ್ಬದಂದು ಚಿರುಗಾಗಿ ಈ ಹಾಡನ್ನು ಹಾಡಿದ್ದಾರೆ. ತನ್ನ ಬದುಕನ್ನು ರೂಪಿಸಿದ ಚಿರಂಜೀವಿ ಸರ್ಜಾ ಅವರಿಗಾಗಿಯೇ ಬರೆದಿರುವ ಕೊನೆಯ ಸಾಲುಗಳು ಎಲ್ಲರಿಗೂ ಇಷ್ಟವಾಗುವಂತಿದ್ದು, ಚಂದನ್ ಶೆಟ್ಟಿ ಚಿರಂಜೀವಿ ಸರ್ಜಾ ಅವರ ಮೇಲಿಟ್ಟಿರುವ ಗೌರವವನ್ನು ಎತ್ತಿ ತೋರಿಸುವಂತಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಂದನ್​ ಅವರು ಚಿರು ಮತ್ತು ಮೇಘನಾರವರಿಗೋಸ್ಕರ ಮಾಡಿರುವ ಅದ್ಭುತವಾದ ಹಾಡು ಸಖತ್​ ವೈರಲ್​ ಆಗುತ್ತಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.