ಹೊಸ ವರ್ಷದ ಮೊದಲ ದಿನವೇ ಸ್ಯಾಂಡಲ್ ವುಡ್ ಗೆ ಸಿಹಿಸುದ್ದಿ….!

ಹೊಸವರ್ಷದ ಮೊದಲ ದಿನವೇ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದ್ದು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2020 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಸೌತ್ ಅವಾರ್ಡ್ ಪಟ್ಟಿ ಪ್ರಕಟವಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ನಟ ಶಿವರಾಜ ಕುಮಾರ್ ಕಲಾಸೇವೆ ಪರಿಗಣಿಸಿ ಅತ್ಯುತ್ತಮ ಬಹುಮುಖ ನಟ ಪ್ರಶಸ್ತಿ ದೊರೆತಿದೆ.

ಶ್ರೀಮನ್ನಾನಾರಾಯಣ ಚಿತ್ರದ ನಟನೆಗಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾಗಿದ್ದು, ಯಜಮಾನ ಚಿತ್ರದ ನಟನೆಗಾಗಿ ನಟಿ ತಾನ್ಯಾ ಹೋಪ್ ಅತ್ಯುತ್ತಮ ನಟಿ ಗೌರವ ಸಂದಿದೆ.

ಮೂಕಜ್ಜಿಯ ಕನಸುಗಳು ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿಕೊಂಡಿದ್ದು,ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿ.ಹರಿಕೃಷ್ಣ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಗೌರವ ಪ್ರಾಪ್ತ ವಾಗಿದೆ. ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದ್ದು ಶಿವಣ್ಣ ಹಾಗೂ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ.

Comments are closed.