Ashika Ranganath Sharan : ಚುಟು ಚುಟು ಬೆಡಗಿಗೆ ಜೊತೆಯಾದ ಶರಣ್ : ಸದ್ಯದಲ್ಲೇ ಅವತಾರ ಪುರುಷನ ಆಟ

ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ ಶರಣ (Sharan). ಕಾಮಿಡಿಯಿಂದ ಆರಂಭವಾದ ಶರಣ್ ಸಿನಿಜರ್ನಿ ಸದ್ಯ ಹೀರೋಗಿರಿಯಲ್ಲಿ ನಿಂತಿದೆ. ಹಲವು ಹಿಟ್ ಸಿನಿಮಾಗಳ ಬಳಿಕ ಶರಣ ಸದ್ಯ ಅವತಾರ ಪುರುಷನಾಗಿ ಶರಣ್ ತೆರೆಗೆ ಬರಲಿದ್ದು, ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಚುಟು ಚುಟು ಬೆಡಕಿ ಆಶಿಕಾ ರಂಗನಾಥ್‌ (Ashika Ranganath) ಶರಣ್‌ಗೆ ಜೊತೆಯಾಗಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಸಿಂಪಲ್ ಸುನಿ ನಿರ್ದೇಶನದ ಶರಣ್ ನಟನೆಯ ಅವತಾರ ಪುರುಷ ಲಾಕ್ ಡೌನ್ ಗೂ ಮುನ್ನವೇ ಪ್ರೇಕ್ಷಕರನ್ನು ನಗಿಸಲು ಬರಬೇಕಿತ್ತು.
ಆದರೆ ಕಾರಣಾಂತರಗಳಿಂದ ಅವತಾರ ಪುರುಷನ ಎಂಟ್ರಿ ಆಗಲೇ ಇಲ್ಲ. ಆದರೇ ಈಗ ಕೊರೋನಾ ಬಳಿಕ ಬಾಗಿಲು ತೆರೆದ ಥಿಯೇಟರ್ ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ಬರ್ತಿದ್ದಾರೆ ಅವತಾರ ಪುರುಷ.

ಡಿಸೆಂಬರ್ 10 ರಂದು ಶರಣ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಅವತಾರ ಪುರುಷ ತೆರೆಗೆ ಬರಲಿದೆ. ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಸಿನಿಮಾಗೆ ಎರಡು ಭಾಗದಲ್ಲಿ ಸಿಂಪಲ್ ಸುನಿ ಆಕ್ಟ್ಯನ್ ಕಟ್ ಹೇಳಿದ್ದಾರೆ. ಶರಣ್ ಜೊತೆ ಚುಟು ಚುಟು ಅಂತೈತಿ ಎಂದು ಮೈಚಳಿ ಬಿಟ್ಟು ಕುಣಿದಿದ್ದ ಆಶಿಕಾ ರಂಗನಾಥ್ ಈ ಸಿನಿಮಾದಲ್ಲೂ ನಾಯಕಿಯಾಗಿ‌ ಮಿಂಚಿದ್ದಾರೆ.

ರ್ಯಾಂಬೋ ಸಿನಿಮಾದಿಂದ ನಾಯಕರಾಗಿ ಭಡ್ತಿ ಪಡೆದ ನಟ ಶರಣ್ ಎಂದಿಗೂ ಥಿಯೇಟರ್ ಗೆ ಬಂದ ಪ್ರೇಕ್ಷಕರನ್ನು ನಿರಾಸೆಗೊಳಿಸಿಲ್ಲ. ನಟನೆ, ಡ್ಯಾನ್ಸ್, ಫೈಟ್, ಕಾಮಿಡಿ ಎಲ್ಲದಕ್ಕೂ ಸಲ್ಲುವ ನಾಯಕರಾಗಿ ಮಿಂಚಿದ ಶರಣ್ ಅಧ್ಯಕ್ಷ ಸಿನಿಮಾದಲ್ಲಿ ಮೋಡಿ ಮಾಡಿದ್ದಾರೆ.

ಈಗ ಅವತಾರ ಪುರುಷದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಗೆಯ ಬುತ್ತಿ ಹಂಚಲು ಬರುತ್ತಿದ್ದಾರೆ. ಡಿಸೆಂಬರ್ 10 ರಂದು ಅವತಾರ ಪುರುಷ ತೆರೆಗೆ ಬರಲಿದ್ದು ಅಭಿಮಾನಿಗಳು ಶರಣ್ ಸಿನಿಮಾಗೆ ಕಾಯುತ್ತಿದ್ದಾರೆ.

ಇದನ್ನೂ ಓದಿ : ತೋಟದ ಮನೆಯಲ್ಲಿ ಬುಟ್ಟಿ ಹೊತ್ತ ಮಿಲ್ಕಿ ಬ್ಯೂಟಿ…! ಇದು ಆಶಿಕಾ ಲಾಕ್ ಡೌನ್ ಡೈರಿ…!!

ಇದನ್ನೂ ಓದಿ :  ಪುನೀತ್‌ ನೆನೆದು ಬಾವುಕರಾದ ಆಶಿಕಾ : ಜೊತೆಯಾಗಿ ನಟಿಸೋ ಕನಸು ನನಸಾಗಲಿಲ್ಲ

( Ashika Ranganath paired with actor Sharan via avatara Purusha cinema)

Comments are closed.