Buffalo : ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಪೊಲೀಸರಿಗೆ ದೂರು ಕೊಟ್ಟ ರೈತ : ಪೊಲೀಸರು ಮಾಡಿದ್ರು ಜನಮೆಚ್ಚುವ ಕಾರ್ಯ

ಇಂದೋರ್‌ : ಎಮ್ಮೆಯೊಂದು (Buffalo) ದಿನಪೂರ್ತಿ ಆಹಾರ ತಿಂದರೂ ಕೂಡ ಹಾಲು ಕೊಡುತ್ತಿಲ್ಲವೆಂದು ರೈತನೋರ್ವ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಯ ನಯಾಗಾಂವ್‌ ಗ್ರಾಮದಲ್ಲಿ ನಡೆದಿದೆ.

ಬಾಬುಲಾಲ್‌ ಜಾತಮ್‌ ಎಂಬಾತನೇ ಎಮ್ಮೆಯ ವಿರುದ್ದ ಪೊಲೀಸರಿಗೆ ದೂರು ಕೊಟ್ಟಿರುವ ರೈತ. ಕಳೆದ ಕೆಲವು ತಿಂಗಳ ಹಿಂದೆ ಎಮ್ಮೆ ಚೆನ್ನಾಗಿಯೇ ಹಾಲನ್ನು ಕೊಡುತ್ತಿತ್ತು. ಆದರೆ ಕೆಲವು ದಿನಗಳಿಂದಲೂ ಬೆಳಗಿನಿಂದಲೂ ಸಂಜೆಯವರೆಗೂ ಎಮ್ಮೆ ಆಹಾರವನ್ನು ತಿನ್ನುತ್ತಿದೆ. ಆದರೆ ಹಾಲನ್ನು ಮಾತ್ರ ಕೊಡುತ್ತಿಲ್ಲ. ಸುತ್ತಮುತ್ತಲೂ ವಿಚಾರಿಸಿದಾಗ ಎಮ್ಮೆಗೆ ಮಾಟ ಮಾಡಿದ್ದಾರೆನ್ನುವ ಮಾತು ಕೇಳಿಬಂದಿದ್ದು, ತನಗೆ ಸಹಾಯ ಮಾಡಬೇಕೆಂದು ರೈತ ಬಾಬುಲಾಲ್‌ ಪೊಲೀಸರಿಗೆ ದೂರನ್ನು ನೀಡಿದ್ದಾನೆ.

ಪೊಲೀಸರು ತನ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇರುವ ಸಾಧ್ಯತೆಯಿದೆ ಅನ್ನೋದನ್ನು ಅರಿತ ರೈತ ಬಾಬುಲಾಲ್‌ ಜಾತಮ್‌ ಎಮ್ಮೆಯನ್ನೇ ಪೊಲೀಸ್‌ ಠಾಣೆಗೆ ಕರೆತಂದಿದ್ದಾನೆ. ಕೂಡಲೇ ಜಿಲ್ಲಾ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ ಅರವಿಂದ್‌ ಶಾ ಅವರು ಠಾಣಾಧಿಕಾರಿಗಳಿಗೆ ಕರೆ ಮಾಡಿ ಪಶುವೈದ್ಯಾಧಿಕಾರಿಗಳನ್ನು ಮನೆಗೆ ಕರೆದೊಯ್ದು ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ.

ಅದೃಷ್ಟವಶಾತ್‌ ಪೊಲೀಸರು ಪಶುವೈದ್ಯಾಧಿಕಾರಿಗಳನ್ನು ಮನೆಗೆ ಕರೆದೊಯ್ದು ಚಿಕಿತ್ಸೆಯನ್ನು ನೀಡಿದ ನಂತರದಲ್ಲಿ ಮರುದಿನವೇ ಎಮ್ಮೆ ಎಂದಿನಂತೆಯೇ ಹಾಲನ್ನು ನೀಡುವುದಕ್ಕೆ ಆರಂಭಿಸಿತ್ತು. ಇದರಿಂದಾಗಿ ಬಾಬುಲಾಲ್‌ ಮುಖದಲ್ಲಿ ಸಂತಸ ಮೂಡಿದೆ. ಇದೀಗ ಬಾಬುಲಾಲ್‌ ತನ್ನ ಎಮ್ಮೆಯೊಂದಿಗೆ ಪೊಲೀಸ್‌ ಠಾಣೆಗೆ ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ : Guinness Records : ಸೋಡಾ ಕುಡಿದು ಗಿನ್ನೆಸ್​ ರೆಕಾರ್ಡ್​ ಬರೆದ ಭೂಪ ..!!

ಇದನ್ನು ಓದಿ : Viral Video : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್‌ ಶಾಕ್‌ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !

(Farmer Approaches Police After Buffalo Refuses to be Milked in Madhya Pradesh)

Comments are closed.