ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ….! 11 ಭಾಷೆಯಲ್ಲಿ ತೆರೆಗೆ ಬರಲಿದೆ ವಿಕ್ರಾಂತ್ ರೋಣ…!!

ದೂರದ ದುಬೈನಲ್ಲೂ ಕನ್ನಡದ ಕಂಪು ಸೂಸುತ್ತಿರುವ ವಿಕ್ರಾಂತ್ ರೋಣ ಚಿತ್ರತಂಡದಿಂದ ಮಹತ್ವದ ಸುದ್ದಿ ಹೊರಬಿದ್ದಿದ್ದು, ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಬದಲಾಗಿ  ಪ್ಯಾನ್ ವರ್ಲ್ಡ್ ಸಿನಿಮಾ. ಭಾರತೀಯ ಭಾಷೆ ಮಾತ್ರವಲ್ಲ ಒಟ್ಟು 11 ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ.

ಜ.31 ರಂದು ವಿಶ್ವದ ಅತಿ ಎತ್ತರದ ಕಟ್ಟಡ ಖ್ಯಾತಿನ ದುಬೈನ ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಲೋಗೋಲಾಂಚ್ ಹಾಗೂ 180 ಸೆಕೆಂಡ್ ಗಳ ಟೀಸರ್ ರಿಲೀಸ್ ಆಗಲಿದೆ. ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ ದುಬೈ ತಲುಪಿದ್ದಾರೆ.

ದುಬೈಗೆ ಬಂದಿಳಿದ ಕಿಚ್ಚನಿಗೆ ಹೃದಯಸ್ಪರ್ಶಿ ಅದ್ದೂರಿ ವೆಲ್ ಕಮ್ ಸಿಕ್ಕಿದೆ. ದುಬೈನಲ್ಲಿ ಕೂತು ತಮ್ಮ ಸಿನಿ ವೃತ್ತಿಬದುಕಿನಲ್ಲಿ ಬೆಳ್ಳಿಹಬ್ಬ ಆಚರಣೆಯ ಕುರಿತು ಮಾತನಾಡಿದ ಸುದೀಪ್, ನನ್ನ 25 ವರ್ಷದ ಸಿನಿಜರ್ನಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ. ನಾಳೆಯಿಂದ 26 ನೇ ವರ್ಷದ ಜರ್ನಿ ಆರಂಭವಾಗಲಿದೆ ಎಂದಿದ್ದಾರೆ.

ಬೇರೆ ದೇಶದಲ್ಲಿ, ಬೇರೆ ಭಾಷೆಯಲ್ಲಿ ನಮ್ಮ ಸಿನಿಮಾ ರಿಲೀಸ್ ಆಗ್ತಿದೆ. ನಂಬಿಕೆ ಇಟ್ಟು ಸಿನಿಮಾ ಮಾಡಿದ್ದೇವೆ. ಇದೊಂದು ಅಡ್ವೆಂಚರ್ಸ್ ಸಿನಿಮಾ ಹೀಗಾಗಿ ಅಭಿಮಾನಿಗಳಿಗೆ ಇಷ್ಟವಾಗುತ್ತೆ ಅನ್ನೋ ನಂಬಿಕೆ ಇದೆ.  ಅದರಲ್ಲೂ ಚಿತ್ರದ ಲೋಗೋ, ಟೀಸರ್ ಬುರ್ಜ್ ಖಲೀಫಾದ ಮೇಲೆ ರಿಲೀಸ್ ಆಗ್ತಿರೋದು ಇದೊಂದು ತರ ಸ್ಪೆಷಲ್ ಅನುಭವ ಹಾಗೂ ಕನ್ನಡಿಗರಿಗೆ ಸಂದ ಗೌರವ ಎಂದಿದ್ದಾರೆ.

 ಸಿನಿಜರ್ನಿ ಸಿಹಿಕಹಿಗಳನ್ನು ಹಂಚಿಕೊಂಡ ಸುದೀಪ್, ಮೈಅಟೋಗ್ರಾಫ್ ಸಿನಿಮಾಕ್ಕಾಗಿ ನನ್ನ ತಂದೆಯ ಮನೆಯ ಪತ್ರಗಳನ್ನು ಅಡವಿಟ್ಟಿದ್ದೆ. ಆ ಚಿತ್ರ ಹಿಟ್ ಆಗದಿದ್ದರೇ ಕಷ್ಟವಿತ್ತು. ಊಹಿಸಿಕೊಂಡ್ರೆ ಈಗಲೂ ಭಯವಾಗುತ್ತೆ. ಆದರೆ ಈಗ ಎಲ್ಲವೂ ಸರಿಯಾಗಿದೆ. ಕುಟುಂಬ ನನ್ನೊಂದಿಗಿದೆ ಎಂದರು.

ಕಬ್ಜದಲ್ಲಿ ಒಂದು ವಿಭಿನ್ನ ಪಾತ್ರದ ಅವಕಾಶ ಇದ್ದಿದ್ದರಿಂದ ಉಪೇಂದ್ರ ಜೊತೆ ನಟಿಸುತ್ತಿದ್ದೇನೆ ಎಂದ ಸುದೀಪ್, ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕರ ಕನಸು. ಅವರ ಕನಸಿನಂತೆ ಸಾಗುತ್ತಿದೆ ಎಂದರು. ನಾಳೆ ದುಬೈನ ಬುರ್ಜಾ ಖಲೀಫಾದಲ್ಲಿ ಸುದೀಪ್ ಕಟೌಟ್ ರಾರಾಜಿಸಲಿದ್ದು, ಈ ಗೌರವ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿಗೂ ಕಿಚ್ಚ ಸುದೀಪ್ ಭಾಜನರಾಗಲಿದ್ದಾರೆ.

Comments are closed.