ಸೋಮವಾರ, ಏಪ್ರಿಲ್ 28, 2025
HomeCinemaRashmika mandanna: 20 ನೆನಪುಗಳ ಬುತ್ತಿ ಬಿಚ್ಚಿದ ರಶ್ಮಿಕಾ….! ನ್ಯಾಶನಲ್ ಕ್ರಶ್ ಮೆಮೋರಿಯಲ್ಲೇನಿದೆ ಗೊತ್ತಾ…?!

Rashmika mandanna: 20 ನೆನಪುಗಳ ಬುತ್ತಿ ಬಿಚ್ಚಿದ ರಶ್ಮಿಕಾ….! ನ್ಯಾಶನಲ್ ಕ್ರಶ್ ಮೆಮೋರಿಯಲ್ಲೇನಿದೆ ಗೊತ್ತಾ…?!

- Advertisement -

ಕೊಡಗಿನ ಕುವರಿ, ಸ್ಯಾಂಡಲ್ ವುಡ್ ಪೊಗರು ಬೆಡಗಿ ರಶ್ಮಿಕಾ ಮಂದಣ್ಣ ಕೆಲವೇ ವರ್ಷದಲ್ಲಿ ಬಹುಭಾಷಾ ನಟಿಯಾಗಿ ಬಾಲಿವುಡ್ ಅಂಗಳವನ್ನೂ ತಲುಪಿದ್ದಾರೆ. ಇತ್ತೀಚಿಗಷ್ಟೇ ಸ್ಟಾರ್ ನಟಿಯರನ್ನು ಹಿಂದಿಕ್ಕಿ 20 ಮಿಲಿಯನ್ ಪಾಲೋವರ್ಸ್ ಪಡೆದುಕೊಂಡ ರಶ್ಮಿಕಾ ಅದೇ ಖುಷಿಯಲ್ಲಿ ಸ್ಪೆಶಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ 20 ಮಿಲಿಯನ್ ಅಂದ್ರೇ 2 ಕೋಟಿ ಫಾಲೋವರ್ಸ್ ಸಾಧನೆಗೆ ಮಾಡಿದ  ರಶ್ಮಿಕಾ, ಈಗಾಗಲೇ ನ್ಯಾಶನಲ್ ಕ್ರಶ್ ಅನ್ನೋ ಗೌರವಕ್ಕೂ ಗೂಗಲ್ ನಿಂದಲೇ ಪಾತ್ರರಾಗಿದ್ದರು.  

ಈ ಮಧ್ಯೆ ಅಭಿಮಾನಿಗಳ ಖುಷಿ ಹೆಚ್ಚಿಸೋದಿಕ್ಕೆ ರಶ್ಮಿಕಾ ತಮ್ಮ ಬದುಕಿನ ಅತ್ಯಂತ ಖುಷಿಯ 20 ನೆನಪುಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಲೈಕ್ಸ್ ಒತ್ತುತ್ತಾ ಖುಷಿ ಖುಷಿಯಿಂದ ಪೋಸ್ಟ್ ಶೇರ್ ಮಾಡ್ತಿದ್ದಾರೆ.

ಮೊದಲ ಪೋಟೋ, ಮೊದಲು ಥಿಯೇಟರ್ ನಲ್ಲಿ ನೋಡಿದ ಸಿನಿಮಾ,ಸಿನಿಮಾ ಆಡಿಷನ್,ಮೊದಲ ತಮಿಳು, ತೆಲುಗು, ಕನ್ನಡ, ಹಿಂದಿ ಸಿನಿಮಾ, ಬಾಲಿವುಡ್ ಅಲ್ಬಂ ಸಾಂಗ್, ಫರ್ಸ್ಟ್ ಇನ್ ಸ್ಟಾಗ್ರಾಂ ರೀಲ್ಸ್, ಸಾಕುನಾಯಿ, ಮಜಾ ಟಾಕೀಸ್ ಹೀಗೆ ಎಲ್ಲ ನೆನಪುಗಳನ್ನು ರಶ್ಮಿಕಾ ರೀಲ್ ನಂತೆ ತಿರುಗಿಸಿ ನೆನಪಿಸಿಕೊಂಡಿದ್ದಾರೆ.

ಸದ್ಯ ರಶ್ಮಿಕಾ ನಟನೆಯ ಹಿಂದಿಯ ಗುಡ್ ಬೈ ಹಾಗೂ ತೆಲುಗಿನ ಪುಷ್ಪ ರಿಲೀಸ್ ಗೆ ಸಿದ್ಧವಿದ್ದು, ಇದರೊಂದಿಗೆ ರಶ್ಮಿಕಾ  ಬಾಲಿವುಡ್ ಹಾಗೂ ತಮಿಳಿನ ಮತ್ತೆರಡು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

RELATED ARTICLES

Most Popular