ಸೋಮವಾರ, ಏಪ್ರಿಲ್ 28, 2025
HomeCinemaSudeep: ಲಹರಿ ಪಾಲಾಯ್ತು ವಿಕ್ರಾಂತ ರೋಣ: ದುಬಾರಿಗೆ ಬೆಲೆಗೆ ಆಡಿಯೋ ಹಕ್ಕು ಮಾರಾಟ

Sudeep: ಲಹರಿ ಪಾಲಾಯ್ತು ವಿಕ್ರಾಂತ ರೋಣ: ದುಬಾರಿಗೆ ಬೆಲೆಗೆ ಆಡಿಯೋ ಹಕ್ಕು ಮಾರಾಟ

- Advertisement -

ಸಿನಿಮಾಗಳು ರಿಲೀಸ್ ಗೆ ಮುನ್ನವೇ ಹಲವು ದಾಖಲೆ ಬರೆಯೋದು ಈಗ ಕಾಮನ್ ಟ್ರೆಂಡ್.ಈ ಸಾಲಿಗೆ ಕಿಚ್ಚ ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ ರೋಣ ಹೊಸ ಸೇರ್ಪಡೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾದ ಆಡಿಯೋ ದಾಖಲೆಯ ಬೆಲೆಗೆ ಲಹರಿ ಮ್ಯೂಸಿಕ್ ಪಾಲಾಗಿದೆ.

ಕೃಷ್ಣಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಈ ಸಂಭ್ರಮದ ಸುದ್ದಿಯನ್ನು ಲಹರಿ ಮ್ಯೂಸಿಕ್ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಭಾರತೀಯ ಸಿನಿಮಾರಂಗದಲ್ಲೇ ಸಾಕಷ್ಟುಕುತೂಹಲ ಮೂಡಿಸಿರುವ ವಿಕ್ರಾಂತ ರೋಣ ಸಿನಿಮಾದ  ಕನ್ನಡ, ತೆಲುಗು,ತಮಿಳು ಹಾಗೂ  ಮಲೆಯಾಳಂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ.

ದುಬಾರಿ ಬೆಲೆಗೆ ಮಾರಾಟವಾಗಿದೆ ಎನ್ನಲಾಗುತ್ತಿದ್ದರೂ ಹಣದ ಮೊತ್ತವನ್ನು ಲಹರಿ ಸಂಸ್ಥೆ ಬಹಿರಂಗಪಡಿಸಿಲ್ಲ. ಹಿಂದಿ ಆಡಿಯೋ ಹಕ್ಕನ್ನು ಟಿ-ಸೀರಿಸ್ ಸಂಸ್ಥೆಗೆ ಖರೀದಿಸಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಸಿನಿಮಾವನ್ನು ಜಾಕ್ ಮಂಜು ನಿರ್ಮಿಸಿದ್ದು, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಶ್ರೀಲಂಕಾದ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ನಟಿಸಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾದ ಫರ್ಸ್ಟ್ ಲುಕ್ ಹಾಗೂ ಜಾಕ್ವಲಿನ್ ಫರ್ನಾಂಡಿಸ್ ನಟನೆಯ ಐಟಂ ಸಾಂಗ್ ಪೋಟೋಗಳು ಸಖತ್ ಕುತೂಹಲ ಮೂಡಿಸಿದ್ದು, ಸಪ್ಟೆಂಬರ್ 2 ರಂದು ಸುದೀಪ್ ಬರ್ತಡೇಯಂದು 11 ಗಂಟೆಗೆ ಸಿನಿಮಾದ ಡೆಡ್ ಮ್ಯಾನ್ ಆಂಥಮ್ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.

ಸುದೀಪ್ ನಟನೆಯ ಬಹುನೀರಿಕ್ಷಿತ ಸಿನಿಮಾ ಕೋಟಿಗೊಬ್ಬ-3 ತೆರೆಗೆ ಬಂದ ಬಳಿಕ ವಿಕ್ರಾಂತ್ ರೋಣ ತೆರೆಗೆ ಬರಲಿದ್ದು, ಇನ್ನೂ ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿಲ್ಲ.

Lahari music purchased vikranth rona movie audio rights.

RELATED ARTICLES

Most Popular