ಡ್ರಗ್ಸ್‌ ಕೇಸ್‌ : ಸೋನಿಯ ಅಗರ್ವಾಲ್‌, ವಚನ್‌ ಚಿನ್ನಪ್ಪ, ಭರತ್‌ ಪೊಲೀಸ್ ವಶಕ್ಕೆ

ಬೆಂಗಳೂರು : ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಪೊಲೀಸರು ಇಂದು ಮೂವರು ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಗಾಂಜಾ ಪತ್ತೆಯಾಗಿದ್ದು, ನಟಿ ಸೋನಿಯಾ ಅಗರ್‌ವಾಲ್‌, ಡಿಜೆ ವಚನ್‌ ಚಿನ್ನಪ್ಪ ಹಾಗೂ ಉದ್ಯಮಿ ಭರತ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಗೋವಿಂದಪುರ ಡ್ರಗ್ಸ್‌ ಪ್ರಕರಣವನ್ನು ಭೇಧಿಸಿದ್ದರು. ಡ್ರಗ್ಸ್‌ ಪೆಡ್ಲರ್‌ ಆಗಿರುವ ನೈಜೀರಿಯನ್‌ ಪ್ರಜೆ ಥಾಮಸ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆಯಲ್ಲಿ ಮಹತ್ವದ ಮಾಹಿತಿಯನ್ನು ನೀಡಿದ್ದಾನೆ. ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಥಾಮಸ್ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದರು.

ದಾಳಿ ವೇಳೆ 15.50 ಲಕ್ಷ ಮೌಲ್ಯದ 403 ಎಕ್ಸ್’ಟೆಸಿ ಪಿಲ್ಸ್ ವಶಪಡಿಸಿಕೊಳ್ಳಲಾಗಿತ್ತು. ಥಾಮಸ್‌ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ. 350 ರೂಪಾಯಿಗೆ ಒಂದು ಎಕ್ಸ್’ಟೆಸಿ ಪಿಲ್ಸ್ ಖರೀದಿ ಮಾಡಿ ಒಂದು ಟ್ಯಾಬ್ಲೆಟ್ ಗೆ 3 ಸಾವಿರಕ್ಕೆ ಮಾರಾಟ ಮಾಡ್ತಿದ್ದ. ಅಲ್ಲದೇ ಕೊಕೇನ್ ಒಂದು ಗ್ರಾಂ ಗೆ 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಅದ್ರಲ್ಲೂ ಥಾಮಸ್‌ ಜೊತೆಗೆ ಸಂಪರ್ಕ ಹೊಂದಿದ್ದ ಹಲವರ ಮಾಹಿತಿಯನ್ನು ಕಲೆ ಹಾಕಿದ್ದ ಬೆಂಗಳೂರು ದಕ್ಷಿಣ ವಲಯ ಪೊಲೀಸರು ಇಂದು ಪದ್ಮನಾಭನಗರ, ರಾಜಾಜಾನಗರ ಹಾಗೂ ಬೆನ್ಸನ್‌ ಟೌನ್‌ ನಲ್ಲಿ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ರಾಜಾಜಿನಗರದಲ್ಲಿರುವ ನಟಿ ಹಾಗೂ ಕಾಸ್ಮೆಟಿಕ್‌ ವ್ಯವಹಾರವನ್ನು ನಡೆಸುತ್ತಿದ್ದ ಸೋನಿಯಾ ಅಗರ್‌ ವಾಲ್‌ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಸೋನಿಯಾ ಮನೆಯಲ್ಲಿಇರಲಿಲ್ಲ. ನಿನ್ನೆಯೇ ಮನೆಯಿಂದ ಹೊರ ತೆರಳಿರುವ ಇಂದು ತಂದೆಯ ಬಳಿಯಲ್ಲಿ ಮಧ್ಯಾಹ್ನ ಬರುವುದಾಗಿ ಹೇಳಿ ತೆರಳಿದ್ದರು. ಆದರೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಪೋನ್‌ ಮಾಡಿದ್ದರೂ ಕರೆ ಸ್ವೀಕಾರ ಮಾಡಿರಲಿಲ್ಲ. ತಂದೆಯಿಂದ ಮನೆಯ ಬಾಗಿಲು ತೆಗೆಸಿ ಪರಿಶೀಲನೆಯನ್ನು ನಡೆಸಿದಾಗ ಸೋನಿಯಾ ಅಗರ್‌ವಾಲ್‌ ಮನೆಯಲ್ಲಿ ೪೦ ಗ್ರಾಮ ತೂಕದ ಗಾಂಜಾ ಪತ್ತೆಯಾಗಿದೆ. ಅಲ್ಲದೇ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇದೀಗ ಸೋನಿಯಾ ಅಗರ್‌ವಾಲ್‌ ಅವರನ್ನು ಬಂಧಿಸಿದ್ದಾರೆ. ಪೊಲೀಸರ ದಾಳಿಯ ಮಾಹಿತಿ ಅರಿತಿದ್ದ ಸೋನಿಯಾ ಖಾಸಗಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಅದ್ರಲ್ಲೂ ಹೋಟೆಲ್‌ ಕೊಠಡಿಯ ವಾಶ್‌ ರೂಂನಲ್ಲಿ ಅವಿತು ಕುಳಿತಿದ್ದ ಸೋನಿಯಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇನ್ನೊಂದೆಡೆಯಲ್ಲಿ ಬೆನ್ಸನ್‌ ಟೌನ್‌ ನಲ್ಲಿರುವ ಡಿಜೆ ವಚನ್‌ ಚಿನ್ನಪ್ಪ ಅವರ ಮನೆಯ ಮೇಲೆಯೂ ಪೊಲೀಸರು ದಾಳಿಉನ್ನು ನಡೆಸಿದ್ದಾರೆ. ಡಿಜೆಯಾಗಿರುವ ವಚನ್‌ ಚಿನ್ನಪ್ಪ ಡ್ರಗ್ಸ್‌ ಪೆಡ್ಲರ್‌ ಕೊತೆಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಅನ್ನೋ ಮಾಹಿತಿಯ ಹಿನ್ನೆಲೆಯಲ್ಲಿ ಮನೆಯ ಮೇಲೆ ದಾಳಿಯನ್ನು ನಡೆಸಲಾಗಿದೆ. ಮನೆಯಲ್ಲಿ ವಚನ್‌ ಚಿನ್ನಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಡ್ರಗ್ಸ್‌ ಪೆಡ್ಲರ್‌ ಥಾಮಸ್‌ ನೀಡಿರುವ ಮಾಹಿತಿಯ ಆಧಾರದ ಮೇಲೆ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಭರತ್‌ ಅವರಿಗೆ ಸೇರಿದ ಪದ್ಮನಾಭ ನಗರದ ಮನೆಯ ಮೇಲೆ ಪೊಲೀಸರು ದಾಳಿಯನ್ನು ನಡೆಸಿದ್ದಾರೆ. ಅಲ್ಲದೇ ಭರತ್‌ ಮನೆಯಲ್ಲಿಯೂ ಮಾಧಕ ವಸ್ತುಗಳು ಪತ್ತೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಭರತ್‌ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಸೋನಿಯಾ ಅಗರ್‌ವಾಲ್‌, ಉದ್ಯಮಿ ಭರತ್‌ ಹಾಗೂ ಡಿಜೆ ವಚನ್‌ ಚಿನ್ನಪ್ಪ ಡ್ರಗ್‌ ಪೆಡ್ಲರ್‌ ಥಾಮಸ್‌ ಜೊತೆಯಲ್ಲಿ ನಿರಂತರ ಸಂಪರ್ಕವನ್ನು ಹೊಂದಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಒಂದೊಮ್ಮೆ ಈ ಮೂವರು ಕೂಡ ಡ್ರಗ್ಸ್‌ ದಂಧೆಯಲ್ಲಿ ಬಾಗಿಯಾಗಿರೋದು ಖಚಿತವಾದ್ರೆ ಪೊಲೀಸರು ಬಂಧಿಸುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ಯಲ್ಲಿ ಇನ್ನಷ್ಟು ಮಂದಿ ಗೋವಿಂದಪುರ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ : Drugs Case : ಡ್ರಗ್ಸ್‌ ಕೇಸ್‌ ಪ್ರಕರಣ : ಬಂಧನ ಭೀತಿಯಲ್ಲಿ ನಟಿ ಸೋನಿಯಾ ಅಗರ್‌ವಾಲ್‌

ಇದನ್ನೂ ಓದಿ : ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣ : ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸ್‌ ದಾಳಿ

(Govindapura Drugs Case Sonia Agarwal, DJ Vachan Chinnappa and Businessman Bharth Arrest)

Comments are closed.