Meghanaraj: ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

ಪ್ರೀತಿಯ ಪತಿಯನ್ನು ಕಳೆದುಕೊಂಡಿರುವ ನಟಿ ಮೇಘನಾ ರಾಜ್, ಚಿರು ಪ್ರತಿರೂಪದಂತಿರುವ ಜ್ಯೂನಿಯರ್ ಚಿರು ತಾಯ್ತನ ಸಂಭ್ರಮ ಎಂಜಾಯ್ ಮಾಡ್ತಿದ್ದಾರೆ. ಆದರೆ ಸದಾ ಪತಿಯ ನೆನಪುಗಳನ್ನು ಮೆಲುಕು ಹಾಕುವ ಮೇಘನಾ ತಮ್ಮ ಹಳೆಯ ಟಿವಿ ಸಂದರ್ಶನವೊಂದನ್ನು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಅದರಲ್ಲಿ ಮೇಘನಾ-ಚಿರು ಪ್ರೀತಿಯ ಸ್ಟೋರಿ ರೀವಿಲ್ ಆಗಿತ್ತು.

ಮದುವೆ ಬಳಿಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಮೇಘನಾ ತಮ್ಮ ಲವ್ ಸ್ಟೋರಿಯ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದರು. ಈ ಸಂದರ್ಶನದ ತುಣುಕನ್ನು ಮೇಘನಾ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಹಳೆಯ ಸವಿ ನೆನಪುಗಳನ್ನು ತಾಜಾಗೊಳಿಸಿದ್ದಾರೆ.

ಒಂದು ದಶಕದ ಕಾಲ ಸ್ನೇಹಿತರು ಹಾಗೂ ಪ್ರೇಮಿಗಳಾಗಿದ್ದ ಚಿರು ಹಾಗೂ ಮೇಘನಾ 2018 ರ ಏಪ್ರಿಲ್ ನಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಹಸೆಮಣೆ ಏರಿದ್ದರು. ಆದರೆ 2020 ರ ಜೂನ್ 7 ರಂದು ಚಿರು ಹೃದಯಾಘಾತದಿಂದ ತೀರಿಕೊಂಡಿದ್ದಾರೆ.

ಚಿರು ಮೇಘನಾಗೆ ವಿಭಿನ್ನವಾಗಿ ಪ್ರಪೋಸ್ ಮಾಡಿದ್ದು, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನನ್ನು  ಪ್ರೀತಿಸಬೇಕು ಎಂದಿದ್ದರಂತೆ. ಅಷ್ಟೇ ಅಲ್ಲ ಮೇಘನಾ ತಂದೆ-ತಾಯಿಯಂತೆ ಚಿರು ಕೂಡಾ ಮೇಘನಾರನ್ನು ಪ್ರೀತಿಯಿಂದ ಕುಟ್ಟಿಮಾ ಎಂದು ಕರೆಯುತ್ತಿದ್ದರಂತೆ.

ಮೇಘನಾ ಹಂಚಿಕೊಂಡ  ಈ ವಿಡಿಯೋಕ್ಲಿಪ್ ಗೆ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದು, ಹಲವರು ಚಿರು ಮಿಸ್ ಯೂ ಎಂದು ದುಃಖ ತೋಡಿಕೊಂಡಿದ್ದಾರೆ. ಪತಿಯ ಅಗಲಿಕೆಯ ನಾಲ್ಕು ತಿಂಗಳ ಬಳಿಕ ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಗನ ಆರೈಕೆಯಲ್ಲಿ ನಟನೆಯಿಂದ ಮೇಘನಾ ಬ್ರೇಕ್ ಪಡೆದುಕೊಂಡಿದ್ದಾರೆ.

Comments are closed.