Manvitha kamath: ಹ್ಯಾಪಿಲೀ ಮ್ಯಾರೀಡ್ ಎಂದ ಟಗರು ಪುಟ್ಟಿ: ಸೋಷಿಯಲ್ ಮೀಡಿಯಾದಲ್ಲಿ ಮಾನ್ವಿತಾ ಪೋಸ್ಟ್

ಟಗರು ಬಳಿಕ ಬಹುತೇಕ ಸೈಲೆಂಟ್ ಆಗಿದ್ದ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ಸಡನ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿಲೀ ಮ್ಯಾರಿಡ್ ಎಂದಿದ್ದಾರೆ. ಅಯ್ಯೋ ಸದ್ದುಗದ್ದಲವಿಲ್ಲದೇ ಮಾನ್ವಿತಾ ಮದ್ವೆಯಾದ್ರಾ ಅಂತ ನೀವು ಅಂದ್ಕೊಂಡ್ರಾ ಅಸಲಿ ಸ್ಟೋರಿ ಇಲ್ಲಿದೆ.

ಟಗರು ಖ್ಯಾತಿಯ ನಟಿ ಮಾನ್ವಿತಾ ಕಾಮತ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಇನ್ ಸ್ಟಾ ಗ್ರಾಂನಲ್ಲಿ ಅಪ್ಡೇಟ್ ನೀಡಿದ್ದಾರೆ ಅಷ್ಟೇ. ಮುಂದಿನ ಸಿನಿಮಾಗೆ ಹ್ಯಾಪಿಲೀ ಮ್ಯಾರಿಡ್ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ಮಾನ್ವಿತಾ ದಿಯಾ ಖ್ಯಾತಿಯ ನಟ ಪ್ರಥ್ವಿ ಅಂಬರ್ ಗೆ ಜೋಡಿಯಾಗಲಿದ್ದಾರೆ.

ಅರುಣಕುಮಾರ್ ಎಂ ಹಾಗೂ ಬಾಬು ಅಲೋಸಿಯಷ್ ನಿರ್ದೇಶನಿದ್ದು, ಬಿಜಿಅರುಣ್, ಜೋಸ್ ಕುಟ್ಟಿ ಮಾಡತ್ತಿಲ್ ಹಾಗೂ ರಂಜಿತ್ ಮಣಂಬರ್ ಕಾಟ್ ಚಿತ್ರ ನಿರ್ಮಿಸುತ್ತಿದ್ದಾರೆ.

ಲಾಕ್ ಡೌನ್ ನಲ್ಲಿ ಸ್ವಲ್ಪ ಹೆಚ್ಚಿಸಿಕೊಂಡಿದ್ದ ಮಾನ್ಯತಾ ಸದ್ಯ ತೂಕ ಇಳಿಸಿಕೊಂಡು ಈ ಸಿನಿಮಾಗೆ ಸಿದ್ಧವಾಗಿದ್ದಾರಂತೆ.

ಟಗರು ಬಳಿಕ ಮಾನ್ವಿತಾ, ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ಡಾ.ರಾಜ್ ಮೊಮ್ಮಗ ಧೀರೇನ್ ಕುಮಾರ ಜೊತೆ ಶಿವ 143 ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

Actress manvitha kamath new movie happily married announced

Comments are closed.