ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು ! ಕಾರಣ ಕೇಳಿದ್ರೆ ಶಾಕ್‌ ಆಗುತ್ತೀರಿ !

ಕಾಬೂಲ್ :‌ ಅಫ್ಘಾನಿಸ್ತಾನವನ್ನು ಸುಮಾರು 20 ವರ್ಷಗಳ ಕಾಲ ತನ್ನ ಹಿಡಿತದಲ್ಲಿ ಇಟ್ಟು ಕೊಂಡಿದ್ದ ಅಮೇರಿಕ ಕೊನೆಗೂ ತಾಲಿಬಾನ್ ಗೆ ಹೆದರಿ ಜಾಗ ಖಾಲಿ ಮಾಡಿದೆ. ಈ ಹಿನ್ನಲೆಯಲ್ಲೀಗ ಕಾಬೂಲ್‌ ವಿಮಾನ ನಿಲ್ದಾಣವನ್ನು ತಾಲಿಬಾನ್ ಗಳು ವಶಪಡಿಸಿಕೊಂಡಿದ್ದಾರೆ.

ಆಫ್ಘಾನಿಸ್ತಾನದಲ್ಲಿ ನಮ್ಮ 20 ವರ್ಷಗಳ ಮಿಲಿಟರಿ ಉಪಸ್ಥಿತಿ ಕೊನೆಗೊಂಡಿದೆ. ಯೋಜಿಸಿದಂತೆ ನಮ್ಮ ಏರ್ ಲಿಫ್ಟ್ ಕಾರ್ಯಾಚರಣೆಯನ್ನು ಕೊನೆಗಾಣಿಸುವುದು ಜಂಟಿ ಮುಖ್ಯಸ್ಥರು ಮತ್ತು ನಮ್ಮ ಎಲ್ಲಾ ಕಮಾಂಡರ್ ಗಳ ಒಮ್ಮತದ ಶಿಫಾರಸು ಎಂದು ಸದ್ಯಕ್ಕೆ ನಾನು ವರದಿ ಮಾಡುತ್ತೇನೆ. ಅಫ್ಘಾನಿಸ್ತಾನದಿಂದ ಅಮೆರಿಕ ಮಂಗಳವಾರ ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.

ಇದನ್ನೂ ಓದಿ: ಈ ಮಹಾತಾಯಿಗೆ 22 ಮಕ್ಕಳು ! ಹೇಗಿದೆ ಗೊತ್ತಾ ಇವರ ಐಷಾರಾಮಿ ಬದುಕು ?

ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸುವುದು ನಮ್ಮ ಪಡೆಗಳ ಜೀವಗಳನ್ನು ರಕ್ಷಿಸಲು ಮತ್ತು ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಆಫ್ಘಾನಿಸ್ತಾನವನ್ನು ತೊರೆಯಲು ಬಯಸುವವರಿಗೆ ನಾಗರಿಕ ನಿರ್ಗಮನದ ಸಾಧ್ಯತೆಗಳನ್ನು ಭದ್ರಪಡಿಸಲು ಉತ್ತಮ ಮಾರ್ಗವಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ತಾಲಿಬಾನ್​ ಉಗ್ರರು ನೀಡಿದ್ದ ಗಡುವಿಗಿಂತ 24 ಘಂಟೆ ಮುಂಚಿತವಾಗಿ ಅಮೆರಿಕಾ ಸೇನೆ ಕಾಬೂಲ್ ಏರ್‌ಪೋರ್ಟ್‌ನಿಂದ ತೆರಳಿದ್ದು, ನಿನ್ನೆ ರಾತ್ರಿ ಅಮೆರಿಕದ 3 ವಿಮಾನಗಳಲ್ಲಿ ಯೋಧರನ್ನು ಶಿಫ್ಟ್ ಮಾಡಲಾಗಿದೆ. ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: Ed Asner Dies : ಖ್ಯಾತ ಹಾಲಿವುಡ್ ನಟ ಎಡ್ ಅಸ್ನರ್ ನಿಧನ

ಆಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಅನೇಕ ಅಮೆರಿಕನ್ನರು, ಆಫ್ಘನ್ ಪಾಲುದಾರರು ಮತ್ತು ವಿದೇಶಿ ಪ್ರಜೆಗಳಿಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಯುಎಸ್ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ನಿರಂತರ ಸಮನ್ವಯವನ್ನು ಮುನ್ನಡೆಸುವಂತೆ ವಿದೇಶಾಂಗ ಕಾರ್ಯದರ್ಶಿಯನ್ನು ಕೇಳಿದ್ದೇನೆ ಎಂದು ಅಧ್ಯಕ್ಷರು ಹೇಳಿದರು.

USA left Afghanistan after 20 years ̤ Now Taliban in full control of kabul Airport̤

Comments are closed.