ಸೋಮವಾರ, ಏಪ್ರಿಲ್ 28, 2025
HomeCinemaRaayan Raj Sarja: ರಾಯನ್ ರಾಜ್ ಸರ್ಜಾ: ರಿವೀಲ್ ಆಯ್ತು ಮೇಘನಾ-ಚಿರು ವಂಶೋದ್ಧಾರಕನ ಮುದ್ಧಾದ ಹೆಸರು

Raayan Raj Sarja: ರಾಯನ್ ರಾಜ್ ಸರ್ಜಾ: ರಿವೀಲ್ ಆಯ್ತು ಮೇಘನಾ-ಚಿರು ವಂಶೋದ್ಧಾರಕನ ಮುದ್ಧಾದ ಹೆಸರು

- Advertisement -

ಕೊನೆಗೂ ಅಭಿಮಾನಿಗಳ 10 ತಿಂಗಳ ನೀರಿಕ್ಷೆ,ಕಾಯುವಿಕೆ ಕೊನೆಯಾಗಿದ್ದು, ಸ್ಯಾಂಡಲ್ ವುಡ್ ನ ಸ್ಲೈಲ್ ಕಿಂಗ್ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನಿಗೆ ಮುದ್ದಾದ ಹೆಸರಿಡಲಾಗಿದೆ. ಜ್ಯೂನಿಯರ್ ಚಿರು ಎಂದೇ ಖ್ಯಾತನಾಗಿದ್ದ ಸರ್ಜಾ ಕುಟುಂಬದ ಕುಡಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಡಿಯೋ ಮೂಲಕ ನಟಿ ಮೇಘನಾ ಸರ್ಜಾ ಹಾಗೂ ಕುಟುಂಬಸ್ಥರು ಸರ್ಜಾ  ಹಾಗೂ ಸುಂದರ್ ರಾಜ್ ಕುಟುಂಬದ ಕುಡಿಗೆ ಹೆಸರಿಡುವ ಶಾಸ್ತ್ರ ಮಾಡಿದ್ದಾರೆ.

ಕೊರೋನಾ ಕಾರಣಕ್ಕೆ ಅದ್ದೂರಿ ಸಮಾರಂಭ ಕೈಬಿಟ್ಟ ಸರ್ಜಾ ಹಾಗೂ ಸುಂದರ ರಾಜ್ ಕುಟುಂಬ ಕೇವಲ ಕುಟುಂಬದ ಆಪ್ತರ ನಡುವೆ ಜ್ಯೂನಿಯರ್ ಚಿರು ನಾಮಕರಣ ನೆರವೇರಿಸಿದೆ.

ಎರಡು ಕುಟುಂಬದ ಹೆಸರನ್ನು ಸೇರಿಸಿ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಜ್ಯೂನಿಯರ್ ಚಿರು ಎಂದು ಕರೆಯಿಸಿಕೊಂಡಿರೋ ಪುಟಾಣಿಗೆ ಮರಿಸಿಂಗಂ, ಬಚ್ಚಾ, ಚಿಂಟು,ಶಿಷ್ಯ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದ್ದ ಕುಟುಂಬ ಇಂದು ಅಧಿಕೃತ ಹೆಸರು ಪ್ರಕಟಿಸಿದೆ.

ಸ್ಯಾಂಡಲ್ ವುಡ್ ನ ಲವ್ ಲೀ ಜೋಡಿಯಾಗಿದ್ದ ಮೇಘನಾ ಹಾಗೂ ಚಿರು ಮದುವೆಯಾದ ಎರಡೇ ವರ್ಷದಲ್ಲಿ ಚಿರು ಹೃದಯಾಘಾತದಿಂದ ತೀರಿಕೊಂಡಿದ್ದರು. ಪತಿ ಸಾವಿನ ನಾಲ್ಕು ತಿಂಗಳ ಬಳಿಕ ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಮಗನ ಪೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರೋ ಮೇಘನಾ ನಿನ್ನೆಯಷ್ಟೇ ಸಪ್ಟೆಂಬರ್ 3 ರಂದು ಮಗನ ಹೆಸರು ರಿವೀಲ್ ಮಾಡೋದಾಗಿ ಸ್ಪೆಶಲ್ ವಿಡಿಯೋ ಮೂಲಕ ಅಪ್ಡೇಟ್ ನೀಡಿದ್ದರು.

chiru and meghanaraj sarja son jr.chiru named as Raayan raj sarja.

RELATED ARTICLES

Most Popular